CEG Blog

ನಿಮ್ಮ ಗ್ರಾಮಕ್ಕೆ ಎಷ್ಟು ನಳ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ತಿಳಿದುಕೊಳ್ಳಬೇಕೆ?

maro news
ನಿಮ್ಮ ಗ್ರಾಮಕ್ಕೆ ಎಷ್ಟು ನಳ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ತಿಳಿದುಕೊಳ್ಳಬೇಕೆ?
ನಿಮ್ಮ ಗ್ರಾಮಕ್ಕೆ ಎಷ್ಟು ನಳ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ತಿಳಿದುಕೊಳ್ಳಬೇಕೆ?ಸರ್ಕಾರವು ಜಲಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಪ್ರತೀ ಮನೆಗೆ ನೀರಿನ ಸಂಪರ್ಕ ಒದಗಿಸುವ ಸಲುವಾಗಿ, ನಳ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ. ಈ ಕುರಿತು  ಮಾಹಿತಿ ಕಣಜ ಜಾಲತಾಣದಲ್ಲಿ ನೀವು ನಿಮ್ಮ ಗ್ರಾಮದಲ್ಲಿರುವ  ಮನೆಗಳಿಗೆ  ಎಷ್ಟು ನಳ ನೀರಿನ ಸಂಪರ್ಕವನ್ನು ಒದಗಿಸಲಾಗಿದೆ ಎಂದು ತಿಳಿದುಕೊಳ್ಳಬಹುದು.
ಮಾಹಿತಿ ಕಣಜ ಯೋಜನೆಯು ಕರ್ನಾಟಕ ರಾಜ್ಯದ ಜನತೆಗಾಗಿ ಸಾರ್ವಜನಿಕ ನಿಧಿಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರು ತಿಳಿಯುವ ಅಧಿಕಾರವನ್ನು ಒದಗಿಸುವ ಏಕೀಕೃತ ಪೋರ್ಟಲ್‌ ಆಗಿದೆ. ನಾಗರೀಕರು ಜಾಗೃತೆ ವಹಿಸಿದರೆ ಮತ್ತು ಸಾರ್ವಜನಿಕ ವೆಚ್ಚದ ಬಗ್ಗೆ ಅರಿವು ಹೊಂದಿದರೆ ಗ್ರಾಮೀಣ, ಬ್ಲಾಕ್‌, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಾರ್ವಜನಿಕ ನಿಧಿಗಳ ಬಳಕೆಯ ನಿರ್ಣಯಗಳು ಇನ್ನೂ ಹೆಚ್ಚು ದಕ್ಷತೆಯಿಂದ ಮತ್ತು ಶ್ರೇಷ್ಠತೆಯಿಂದ ಕೂಡಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಸರ್ಕಾರವು ಈ ಉಪಕ್ರಮವನ್ನು ಜಾರಿಗೊಳಿಸಿದೆ.ಮಾಹಿತಿ ಕಣಜ ಜಾಲತಾಣದಲ್ಲಿ ಹಲವಾರು ದೈನಂದಿನ ಜೀವನದಲ್ಲಿ ಸಹಾಯಕವಾಗಲಿರುವ ಸೇವೆಗಳನ್ನು ಒದಗಿಸಲಾಗಿದೆ. ಅಂತೆಯೇ
ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಪ್ರದೇಶಗಳ ಕುರಿತು ಮಾಹಿತಿಯನ್ನು ಪಡೆಯಬಹುದು. ಟ್ಯಾಪ್‌ ವ್ಯವಸ್ಥೆಯ ಕುರಿತು ತಿಳಿದುಕೊಳ್ಳಲು, ಕೆಳಗಿನ ಹಂತಗಳನ್ನು ಅನುಸರಿಸಿ.
  • ಮಾಹಿತಿ ಕಣಜ ಜಾಲತಾಣಕ್ಕೆ ಭೇಟಿ ನೀಡಿ mahitikanaja.karnataka.gov.in
  • ಗ್ರಾಮ ಪಂಚಾಯಿತಿ/ ಗ್ರಾಮ ಮಟ್ಟದ ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
  • ಗ್ರಾಮ ಪಂಚಾಯಿತಿ ಮಟ್ಟದ ಸೇವೆಗಳನ್ನು ಆರಿಸಿ.
  • ‘ಮನೆಯ ಟ್ಯಾಪ್‌ ಪಂಚಾಯಿತಿವಾರು’ ಆಯ್ಕೆಯನ್ನು ಆರಿಸಿ
  • ನಂತರ ನಿಮ್ಮ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮವನ್ನು ನಮೂದಿಸಿ, ಸಲ್ಲಿಸಿ. 
  • ನಿಮಗೆ ನಿಮ್ಮ ಗ್ರಾಮದ ಹೆಸರು, ಒಟ್ಟು ಮನೆಗಳು ಹಾಗೂ ಒಟ್ಟು ನಳ ನೀರು ಸಂಪರ್ಕದ ಅಂಕಿ ಅಂಶಗಳು ದೊರೆಯುತ್ತದೆ.
 ಮಾಹಿತಿ ಕಣಜ ಜಾಲತಾಣದಲ್ಲಿ ನೀವು ಇನ್ನಷ್ಟು ಹೆಚ್ಚಿನ ಉಪಯುಕ್ತ ಸೇವೆಗಳನ್ನು ಪಡೆದುಕೊಳ್ಳಬಹುದು. ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ. mahitikanaja.karnataka.gov.in
Admin

Admin

 

0 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ