CEG Blog

ನಿಮ್ಮ ಗ್ರಾಮದ ನರೇಗಾ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿದುಕೊಳ್ಳಬೇಕೆ?

maro news
ನಿಮ್ಮ ಗ್ರಾಮದ ನರೇಗಾ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿದುಕೊಳ್ಳಬೇಕೆ?
ನಿಮ್ಮ ಗ್ರಾಮದ ನರೇಗಾ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿದುಕೊಳ್ಳಬೇಕೆ? 

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ.
ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ ಕಡಿಮೆ ಇಲ್ಲದಂತೆ  ದೈಹಿಕ ಉದ್ಯೋಗವನ್ನು ಒದಗಿಸುವ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಆಸ್ತಿಗಳ ಸೃಜನೆ ಮಾಡುವ ಮೂಲಕ ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಖಾತರಿಪಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಮೂಲಕ ಯೋಜನೆಯ ಪ್ರಯೋಜನವನ್ನು ಪಡೆದ ಫಲಾನುಭವಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಮಾಹಿತಿ ಕಣಜ ಜಾಲತಾಣದಲ್ಲಿ ತಿಳಿದುಕೊಳ್ಳಬಹುದು.

ಮಾಹಿತಿ ತಿಳಿದುಕೊಳ್ಳುವುದು ಹೇಗೆ?

ಮಾಹಿತಿ ಕಣಜ ಜಾಲತಾಣಕ್ಕೆ ಭೇಟಿ ನೀಡಿ, mahitikanaja.karnataka.gov.in
ತ್ವರಿತ ಸೇವೆಗಳು ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
ಸೇವೆಗಳಲ್ಲಿ, MGNREGA ಫಲಾನುಭವಿ ಎಂಬ ಆಯ್ಕೆಯನ್ನು ಆರಿಸಿ.
ನಂತರ ನಿಮ್ಮ ಜಿಲ್ಲೆ ಹಾಗೂ ತಾಲ್ಲೂಕು ವಿವರಗಳನ್ನು ಸಲ್ಲಿಸಿ ಸಂಪೂರ್ಣ ವಿವರವನ್ನು ಪಡೆದುಕೊಳ್ಳಿ.

ಯಾವುದೆಲ್ಲಾ ಮಾಹಿತಿ ದೊರಕುತ್ತದೆ?

 ಗ್ರಾಮ ಪಂಚಾಯಿತಿಯ ಹೆಸರು, ಪೂರ್ಣಗೊಂಡ ಕೃತಿಗಳು, ಪ್ರಗತಿಯಲ್ಲಿರುವ ಕೆಲಸಗಳು, ಸಕ್ರಿಯ ಜಾಬ್‌ ಕಾರ್ಡ್‌ಗಳು ಹಾಗೂ ಪಾವತಿಸಲಾದ ಮಾಸ್ಟರ್‌ ರೋಲ್‌ಗಳ ಅಂಕಿಅಂಶದ ವಿವರಗಳನ್ನು ನೀಡಲಾಗಿರುತ್ತದೆ. 
ಪೂರ್ಣಗೊಂಡ ಕೃತಿಗಳು ಹಾಗೂ ಪ್ರಗತಿಯಲ್ಲಿರುವ ಕೆಲಸಗಳ ಮಾಹಿತಿ ಅಡಿಯಲ್ಲಿ ಪಂಚಾಯಿತಿ, ಕೆಲಸದ ಹೆಸರು ಮತ್ತು ವರ್ಗ ಹಾಗೂ ಕೂಲಿ ಮತ್ತು ವಸ್ತುಗಳ ಖರ್ಚು ವೆಚ್ಚದ ವಿವರವನ್ನು ತಿಳಿದುಕೊಳ್ಳಬಹುದು.
 ಜಾಬ್‌ ಕಾರ್ಡ್‌ಗಳನ್ನು ಹೊಂದಿರುವವರ ಹೆಸರು, ನೋಂದಣಿ ಸಂಖ್ಯೆ ಹಾಗೂ ಗ್ರಾಮದ ಹೆಸರನ್ನು ತಿಳಿದುಕೊಳ್ಳಬಹುದು.
ಮಸ್ಟ್‌ ರೋಲ್‌ ಪಾವತಿಯ ವಿವರಗಳಲ್ಲಿ ಅನುಷ್ಠಾನಗೊಳಿಸಿದ ಸಂಸ್ಥೆ, ಯೋಜನೆಯ ಹೆಸರು, ಇ.ಎಂ.ಆರ್‌ ಸಂಖ್ಯೆ, ಪಾವತಿ ಹಾಗೂ ದಿನಾಂಕ ವಿವರಗಳನ್ನು ನೀಡಲಾಗಿರುತ್ತದೆ.
ಇದೇ ರೀತಿ ನರೇಗಾ ಯೋಜನೆ ಮಾತ್ರವಲ್ಲದೆ, ಮಾಹಿತಿ ಕಣಜ ಜಾಲತಾಣದಲ್ಲಿ ಇನ್ನಷ್ಟು ಹೆಚ್ಚಿನ ಸೇವೆಗಳ ಮಾಹಿತಿ ಹಾಗೂ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ  mahitikanaja.karnataka.gov.in 
Admin

Admin

 

0 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ