CEG Blog

ಕನ್ನಡ ಪದಕೋಶಗಳ ಸಾರ್ವಜನಿಕ ಬಳಕೆಗಾಗಿ ಪದಕಣಜ

maro news
ಕನ್ನಡ ಪದಕೋಶಗಳ ಸಾರ್ವಜನಿಕ ಬಳಕೆಗಾಗಿ ಪದಕಣಜ
ಇ ಕನ್ನಡ ಯೋಜನೆಯು ಕರ್ನಾಟಕ ಸರ್ಕಾರದ  ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಡಿಯಲ್ಲಿ ಬರುವ ಇ-ಆಡಳಿತ ಕೇಂದ್ರದ ಒಂದು ಯೋಜನೆಯಾಗಿದೆ. ಯೋಜನೆಯು ಕನ್ನಡ ಭಾಷೆಗೆ ಸಂಬಂಧಿಸಿದ ತಂತ್ರಜ್ಞಾನಕ್ಕೆ ಮಾನದಂಡಗಳ ರೂಪುರೇಷೆ ಸಿದ್ದಪಡಿಸಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾಯಕಕ್ಕೆ ಶ್ರಮಿಸಲಾಗುತ್ತಿದೆ.ಡಿಜಿಟಲ್‌ ಯುಗದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ 'ಇ - ಕನ್ನಡ' ಕನ್ನಡದ ಜ್ಞಾನ ಮತ್ತು ತಂತ್ರಜ್ಞಾನದ ಮಾಹಿತಿ ನೀಡುವ ಜಾಲತಾಣ ವೇದಿಕೆಯನ್ನು ರೂಪಿಸಲಾಗಿದೆ. ಈ ಯೋಜನೆಯ ಭಾಗವಾಗಿ ಕನ್ನಡದ ನಿಘಂಟುಗಳು ಮತ್ತು ಪದಕೋಶಗಳನ್ನು ಸಾರ್ವಜನಿಕ ಬಳಕೆಗೆ ದೊರಕಿಸಲು "ಪದಕಣಜ" ಜಾಲತಾಣವನ್ನು ಆರಂಭಿಸಲಾಗಿದೆ.ಇದು ಹೇಗೆ ಸಹಾಯಕ?
ನಾಗರಿಕರು ಪ್ರಮುಖವಾಗಿ ಆಡಳಿತ ಕ್ಷೇತ್ರದಲ್ಲಿ ಬಳಸಲಾಗುವ ಕನ್ನಡ ಪದಗಳನ್ನು ಹುಡುಕಲು ಅಥವಾ ಆಂಗ್ಲ ಪದದ ಭಾಷಾಂತರಿಕೆಯನ್ನು ಪದಕಣಜ ಜಾಲತಾಣದಲ್ಲಿ ಕಂಡುಕೊಳ್ಳಬಹುದು. ಇತರೆ ದೈನಂದಿನ ಚಟುವಟಿಕೆಗಳಲ್ಲಿ ಬಳಸಲಾಗುವ ಪದಗಳು ಮತ್ತು ಅವುಗಳ ಅರ್ಥವನ್ನು ಸಹ ತಿಳಿದುಕೊಳ್ಳಬಹುದು.ಯಾವುದೆಲ್ಲಾ ಮಾಹಿತಿ ಲಭ್ಯವಿದೆ?
ಈ ಪೋರ್ಟಲ್‌ ನಲ್ಲಿ 219092 ವಿಶಿಷ್ಟ ಕನ್ನಡ ಪದಗಳು ಹಾಗೂ 120395 ವಿಶಿಷ್ಟ ಇಂಗ್ಲೀಷ್ ಪದಗಳನ್ನು ಗಮನಿಸಬಹುದು. ಇಲ್ಲಿ ಪದದ ಅರ್ಥ, ವ್ಯಾಕರಣ ವಿಶೇಷ, ಕನ್ನಡ ಉಚ್ಚಾರಣೆ ಹಾಗೂ ಆಂಗ್ಲ ಅರ್ಥವನ್ನು ನೀಡಲಾಗಿರುತ್ತದೆ. ನೀವು ಹುಡುಕಲಾದ ಪದ ಲಭ್ಯವಾದಿದ್ದಲ್ಲಿ, ಅಥವಾ ನಿಮಗೆ ತಿಳಿದಿರುವ ಪದ ಲಭ್ಯವಾಗದಿದ್ದಲ್ಲಿ, ನೀವು ಆ ಪದವನ್ನು ಸೇರಿಸಬಹುದು. ನಿಮ್ಮ ಪದವನ್ನು ನಮೂದಿಸಿ ಹುಡುಕಿ ನಂತರ ಹೊಸಪದ ನೀಡಲು ಕ್ಲಿಕ್‌ ಮಾಡಿ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ಇಲ್ಲಿ ಮೂಲಪದ, ಅರ್ಥ, ವ್ಯಾಕರಣ ವಿಶೇಷ, ವಿಷಯ ವರ್ಗೀಕರಣ, ವಚನ, ಭಾಷಾಮೂಲ ಹೀಗೆ ಇತರ ಮಾಹಿತಿಯನ್ನು ತುಂಬಿ ನಿಮ್ಮ ಕ್ರಿಯೆಯನ್ನು ಉಳಿಸಿ.ತಿಳಿದುಕೊಳ್ಳುವುದು ಹೇಗೆ?
  • ekannada.karnataka.gov.in ಗೆ ಭೇಟಿ ನೀಡಿ
  • ಪದಕಣಜ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
  • ಪದ ಹುಡುಕಿ ಎಂಬ ಆಯ್ಕೆಯಡಿಯಲ್ಲಿ ಪದವನ್ನು ನಮೂದಿಸಿ ಹುಡುಕಿ
  • ಇಂಗ್ಲೀಷ್ ಪದಗಳನ್ನು ಹುಡುಕಲು Ctrl+M ಬಳಸಿ
  • ಅಥವಾ ನೇರವಾಗಿ padakanaja.karnataka.gov.in ಗೆ ಭೇಟಿ ನೀಡಿ ಹುಡುಕಬಹುದು.
ಕನ್ನಡ ತಂತ್ರಜ್ಞಾನದ ಕುರಿತು ನೀವು ಇನ್ನಷ್ಟು ಮಾಹಿತಿಯನ್ನು ಇ-ಕನ್ನಡ ಜಾಲತಾಣದಲ್ಲಿ ಪಡೆಯಬಹುದು. ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ ekannada.karnataka.gov.in
Admin

Admin

 

1 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ