ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಕರ್ನಾಟಕ ಸೆಕ್ಲಾನ್ ಬಗ್ಗೆ

ವಿಧಾನಸೌಧ, ಬಹುಮಹಡಿ ಕಟ್ಟಡ ಹಾಗೂ ವಿಕಾಸ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸರ್ಕಾರದ ಸಚಿವಾಲಯವು ಲೋಕಲ್ ಏರಿಯಾ ನೆಟ್ವರ್ಕ್ ನೊಂದಿಗೆ (ಲ್ಯಾನ್) ಸಂಪರ್ಕ ಹೊಂದಿದೆ. ಈ ಮೂರೂ ಕಟ್ಟಡಗಳಲ್ಲಿರುವ ಎಲ್ಲಾ ಆಡಳಿತ ಇಲಾಖೆಗಳನ್ನೂ ಸಂಪರ್ಕಗೊಳಿಸುವುದಕ್ಕೋಸ್ಕರ ಈ ಸಚಿವಾಲಯ ಲ್ಯಾನ್ ಅನ್ನು ಸೃಜಿಸಲಾಗಿದೆ. ಸಹಜವಾಗಿಯೇ, ಸೆಕ್ಲಾನ್ ಎಂದು ಕರೆಸಿಕೊಳ್ಳುವ ಈ ಲ್ಯಾನ್ ಅನ್ನು ಇಂಟ್ರಾನೆಟ್ ಮತ್ತು ಇಂಟರ್ನೆಟ್ ಅಷ್ಟೇ ಅಲ್ಲದೆ, ವಿವಿಧ ಇ-ಆಡಳಿತ ಅನ್ವಯಿಕೆಗಳಾದ ಕಡತ ನಿರ್ವಹಣಾ ವ್ಯವಸ್ಥೆ (ಎಫ್ ಎಂಎಸ್), ಪತ್ರ ನಿರ್ವಹಣಾ ವ್ಯವಸ್ಥೆ (ಎಲ್ ಎಂಎಸ್) ಹಾಗೂ ಹಾಜರಾತಿ ನಿರ್ವಹಣಾ ವ್ಯವಸ್ಥೆಗಳನ್ನು ನಿರ್ವಹಿಸಲು ಕರ್ನಾಟಕ ಸರ್ಕಾರದ ಸಚಿವಾಲಯವು ಈ ಲ್ಯಾನನ್ನು ಗಣನೀಯ ಪ್ರಮಾಣದಲ್ಲಿ ಬಳಸುತ್ತದೆ.  ಎಲ್ಲಾ ಬಳಕೆದಾರರು ಪ್ರತ್ಯೇಕ ಲ್ಯಾನ್ ಹೊಂದಿದ್ದು, ಫೈಬರ್ ಆಪ್ಟಿಕ್ ಕೇಬಲ್ಲುಗಳ ಮೂಲಕ ಮೇಲ್ಕಂಡ ಮೂರೂ ಸೌಲಭ್ಯಗಳನ್ನು ಒಂದು ಕೇಂದ್ರಿತ ಸೌಲಭ್ಯದಲ್ಲಿ ಅಡಕಮಾಡಿ ಸರ್ವಸಂಪರ್ಕಗೊಳಿಸಲಾಗಿದೆ.

ರಾಷ್ಟ್ರೀಯ ಇ-ಆಡಳಿತ ಕಾರ್ಯಯೋಜನೆಯಡಿಯಲ್ಲಿ, ಕರ್ನಾಟಕ ರಾಜ್ಯ ಸಚಿವಾಲಯ ಲ್ಯಾನ್ (ಸೆಕ್ಲಾನ್)ಅನ್ನು ಇ-ಆಡಳಿತ ಕೇಂದ್ರದ ವತಿಯಿಂದ ಅನುಷ್ಠಾನಗೊಳಿಸಲಾಗಿದೆ.  ಸೆಕ್ಲಾನ್ ನಿರ್ವಹಣೆಯ ‘ಬೂಟ್’ ಮಾದರಿಯಲ್ಲಿ ಐದು ವರ್ಷಗಳ ಅವಧಿಗೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರವು ಉದ್ದೇಶಿಸಿದೆ.

ಸೆಕ್ಲಾನ್ ಸ್ಥಾಪನೆಯ ಹಂತಗಳು:-

  1. ಆರಂಭದಲ್ಲಿ 3000 ಬಳಕೆದಾರರಿಗೆ ಬೆಂಬಲಿಸುವ ಸ್ಟ್ರಕ್ಚರ್ಡ್ ಕೇಬ್ಲಿಂಗ್ ವ್ಯವಸ್ಥೆ ಮಾಡಿದ್ದು ಕಾಲಾಂತರದಲ್ಲಿ 7000 ಬಳಕೆದಾರರು ಬಳಸಬಹುದಾದಷ್ಟು ಭೌತಿಕ ಜಾಲ ಮೂಲ ಸೌಕರ್ಯವನ್ನು ವಿನ್ಯಾಸಗೊಳಿಸಿ, ಅನುಷ್ಠಾನಗೊಳಿಸಿ ನಿರ್ವಹಿಸುವುದು.
  2. ದತ್ತಾಂಶ, ವಿಡಿಯೋ ಮತ್ತು ಧ್ವನಿ ಸೇವೆಗಳ ಅನುಕೂಲವುಳ್ಳ ಹೆಚ್ಚು ಸಂಪರ್ಕ ನೀಡುವ ಜಾಲವನ್ನು ಸ್ಥಾಪಿಸಿ ನಿರ್ವಹಿಸುವುದು.
  3. ಸಂಪೂರ್ಣ ಜಾಲಕ್ಕೆ ಸುರಕ್ಷಾ ಸೇವೆಗಳ ವ್ಯವಸ್ಥೆ.
  4. ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ನಿರ್ವಹಣಾ ಸೇವೆಗಳು.

ಇತ್ತೀಚಿನ ನವೀಕರಣ​ : 23-07-2020 10:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸೆಕ್ಲಾನ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080