ಅಭಿಪ್ರಾಯ / ಸಲಹೆಗಳು

ಆಧಾರ್ ಎಂದರೇನು

ಆಧಾರ್ ಸಂಖ್ಯೆಯು, ಪ್ರಾಧಿಕಾರದಿಂದ ನಿರ್ದಿಷ್ಟಪಡಿಸಲಾಗಿರುವ ಪರಿಶೀಲನಾ ಪ್ರಕ್ರಿಯೆಗಳು ತೃಪ್ತಿಕರವಾಗಿ ಪೂರ್ಣಗೊಂಡನಂತರ ಭಾ.ವಿ.ಗು.ಪ್ರಾ.ವು (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ಭಾರತದ ನಿವಾಸಿಗಳಿಗೆ ನೀಡುವ 12 ಅಂಕೆಗಳ ಯಾದೃಚ್ಛಿಕ ಸಂಖ್ಯೆಯಾಗಿರುತ್ತದೆ. ಯಾವುದೇ ವ್ಯಕ್ತಿಯು, ವಯಸ್ಸು ಎಷ್ಟೇ ಆಗಿರಲಿ ಹಾಗೂ ಲಿಂಗವು ಯಾವುದೇ ಆಗಿರಲಿ. ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳುವ ಸಲುವಾಗಿ ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿ ಮಾಡಿಸಿಕೊಳ್ಳಲು ಸಿದ್ದವಿರುವ ವ್ಯಕ್ತಿಯು ಕನಿಷ್ಠ ಜನಸಂಖ್ಯಾಶಾಸ್ತ್ರ ಹಾಗೂ ಜೀವಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಒಟ್ಟಾರೆ ಉಚಿತವಾಗಿರುವ ಅಂದರೆ ಯಾವುದೇ ಮೊತ್ತವನ್ನು ಪಾವತಸಬೇಕಾಗಿರದ ನೋಂದಣಿ ಪ್ರಕ್ರಿಯೆಯ ವೇಳೆಯಲ್ಲಿ ಒದಗಿಸಬೇಕಾಗುತ್ತದೆ. ಓರ್ವ ವ್ಯಕ್ತಿಯು ಕೇವಲ ಒಂದು  ಸಲ ಮಾತ್ರ ಆಧಾರ್ ಗಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಮಾಹಿತಿಯಲ್ಲಿನ ನಕಲುಗಳನ್ನು ಹೊರತೆಗೆದನಂತರ ಜನಸಂಖ್ಯಾಶಾಸ್ತ್ರ ಹಾಗೂ ಜೀವ ಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಲ್ಲಿನ ನಕಲನ್ನು ಹೊರತೆಗೆಯುವ ಪ್ರಕ್ರಿಯೆಯ ಮೂಲಕ ವಿಶಿಷ್ಟತೆಯನ್ನು ಸಾಧಿಸಲಾಗುವುದರಿಂದ, ಕೇವಲ ಒಂದು ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಪಡೆಯತಕ್ಕದ್ದು.

 

ಜನಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿತ ಮಾಹಿತಿ

ಹೆಸರು, ಹುಟ್ಟಿದ ದಿನಾಂಕ (ಪರಿಶೀಲಿಸಲಾದ) ಅಥವಾ ವಯಸ್ಸು (ಘೋಷಿತ), ಲಿಂಗ, ವಿಳಾಸ, ಮೊಬೈಲು ಸಂಖ್ಯೆ (ಐಚ್ಛಿಕ) ಹಾಗೂ ಇ-ಮೇಲ್ ವಿಳಾಸ (ಐಚ್ಛಿಕ)

ಜೀವಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿತ ಮಾಹಿತಿ

ಹತ್ತು ಬೆರಳು  ಮುದ್ರಿಕೆಗಳು, ಎರಡು ಕಣ್ಣು ಪಾಪೆ ಸ್ಕ್ಯಾನುಗಳು ಹಾಗೂ ಮುಖದ ಛಾಯಾಚಿತ್ರ

 

ಆಧಾರ್ ಸಂಖ್ಯೆಯನ್ನು ವೆಚ್ಚ-ಪರಿಣಾಮಕಾರಿತ್ವದ ಮಾರ್ಗದಲ್ಲಿ ಆನ್-ಲೈನ್ ನಲ್ಲಿ ಪರಿಶೀಲಿಸಬಹುದು, ಅದು ವಿಶಿಷ್ಟವಾಗಿದೆ ಹಾಗೂ ನಕಲುಗಳನ್ನು ಹಾಗೂ ಖೋಟಾ ಗುರುತುಗಳನ್ನು ಹೊರತೆಗೆಯುವಲ್ಲಿ ಸಾಕಷ್ಟು ಸದೃಢವಾಗಿದೆ ಹಾಗೂ ಅದನ್ನು ಪರಿಣಾಮಕಾರಿತ್ವದಿಂದ ಕೂಡಿದ ಸೇವಾ ವಿತರಣೆ ಹಾಗೂ ಆದರಿಂದಾಗಿ ಪಾರದರ್ಶಕ ಮತ್ತು ಉತ್ತಮ ಆಡಳಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ಸರ್ಕಾರಿ ಜನಕಲ್ಯಾಣ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಹೊರತರುವಲ್ಲಿ ಒಂದು ಮೂಲ/ಪ್ರಾಥಮಿಕ ಗುರುತಿಸುವಿಕೆಯ ಸಾಧನವಾಗಿದೆ. ವಿಶ್ವವ್ಯಾಪಕವಾಗಿ ತನ್ನದೇ ಆದಂತಹ ವೈಶಿಷ್ಟ್ಯತೆಯನ್ನು ಹೊಂದಿರುವಂತಹ ಕಾರ್ಯಕ್ರಮವು ಇದೊಂದೇ ಆಗಿದೆ, ಅದರಲ್ಲಿ ಜನತೆಗೆ ಅಷ್ಟೊಂದು ಬೃಹತ್ ಪ್ರಮಾಣದಲ್ಲಿ ಅತ್ಯಾಧುನಿಕ ಅಂಕೀಯ ಹಾಗೂ ಆನ್-ಲೈನ್ ಗುರುತನ್ನು ಉಚಿತವಾಗಿ ಅನುವು ಮಾಡಲಾಗಿದೆ ಹಾಗೂ ದೇಶದಲ್ಲಿನ ಸೇವಾ ವಿತರಣಾ ಕಾರ್ಯಚಟುವಟಿಕೆಗಳ ಮಾರ್ಗವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

ಇತ್ತೀಚಿನ ನವೀಕರಣ​ : 05-11-2019 03:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಧಾರ್ ಕರ್ನಾಟಕ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080