CEG Blog

ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

maro news
ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ವಿದ್ಯಾರ್ಥಿಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಪ್ರೋತ್ಸಾಹಿಸಲು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತದೆ. ಸಕಾಲ ಜಾಲತಾಣದ ಮೂಲಕ ನೀವು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

·       ಸಕಾಲ ಜಾಲತಾಣಕ್ಕೆ ಭೇಟಿ ನೀಡಿ sakala.kar.nic.in

·       ಸೇವೆಗಳ ಕಾರ್ಯವಿಧಾನ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

·       ಇಲಾಖೆಯನ್ನು ಆಯ್ಕೆ ಮಾಡುವಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಆಯ್ಕೆ ಮಾಡಿ

·       ನಂತರ ಸೇವೆಗಳ ಆಯ್ಕೆಯಲ್ಲಿ ಡಿ.ದೇವರಾಜು ಅರಸು ಪ್ರತಿಭಾ ಪುರಸ್ಕಾರವನ್ನು ಆರಿಸಿ.

·       ಅರ್ಜಿ ಸಲ್ಲಕೆ ಕುರಿತು ಪೂರ್ಣ ಮಾಹಿತಿಯನ್ನು ಪಡೆಯಿರಿ.

ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರದ ಸೇವೆಯನ್ನು ಪಡೆಯಲು ನೀವು ತಾಲ್ಲೂಕು ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು. ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಸಕಾಲವು 120 ಕೆಲಸದ ದಿನಗಳ ಕಾಲಮಿತಿಯೊಳಗೆ ಈ ಸೇವೆಯನ್ನು ಒದಗಿಸುತ್ತದೆ. ನಿಗದಿತ ದಿನಾಂಕದೊಳಗೆ ನೀಡದಿದ್ದಲ್ಲಿ ಅಥವಾ ಇದನ್ನು ತಿರಸ್ಕರಸಿದ್ದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು.

ಇದೇ ರೀತಿ ನೀವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಲವಾರು ಸೇವೆಗಳನ್ನು ಸಕಾಲ ಜಾಲತಾಣದಲ್ಲಿ ಪಡೆದುಕೊಳ್ಳಬಹುದು ಹಾಗೂ ಅರ್ಜಿ ಸಲ್ಲಿಕೆ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಕಾಲ ಜಾಲತಾಣಕ್ಕೆ ಭೇಟಿ ನೀಡಿ sakala.kar.nic.in

Admin

Admin

 

1 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ