CEG Blog

ಐಪಿಜಿಆರ್‌ಎಸ್ ಅಪ್ಲಿಕೇಶನ್ ಮೂಲಕ ನಿಮ್ಮ ಕುಂದುಕೊರತೆಗಳನ್ನು ನೋಂದಾಯಿಸಿಕೊಳ್ಳಿ.

maro news
ಐಪಿಜಿಆರ್‌ಎಸ್ ಅಪ್ಲಿಕೇಶನ್ ಮೂಲಕ ನಿಮ್ಮ ಕುಂದುಕೊರತೆಗಳನ್ನು ನೋಂದಾಯಿಸಿಕೊಳ್ಳಿ.

ಜನಸ್ಪಂದನʼ - ಕರ್ನಾಟಕ ಸರ್ಕಾರದ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (iPGRS)ಯು ರಾಜ್ಯದ ವಿವಿಧ ಇಲಾಖೆಗಳ ಸೇವೆಗಳಿಗೆ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಸಾರ್ವಜನಿಕ ಕುಂದುಕೊರತೆಗಳ/ ದೂರುಗಳ ದಾಖಲಾತಿಗಾಗಿ ನಿರ್ಮಿಸಲಾಗಿರುವ ಒಂದು ತಾಂತ್ರಿಕ ವೇದಿಕೆಯಾಗಿದೆ.       ದೂರುಗಳ ನಿವಾರಣಾ ಕ್ರಮದ ಬಗ್ಗೆ ನಾಗರಿಕರ ಅಭಿಪ್ರಾಯವನ್ನು ಸಂಗ್ರಹಿಸುವ ದೃಷ್ಟಿಯಿಂದ ಬಹು-ಮುಖಿಯಾದ, ಸದೃಢವಾದ, ದತ್ತಾಂಶ-ಆಧಾರಿತ ಮತ್ತು ಕಾಗದರಹಿತ ತಂತ್ರಾಂಶದ ವ್ಯವಸ್ಥೆಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (iPGRS)ಯಾಗಿ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯಡಿ 40 + ಇಲಾಖೆಗಳ ಯೋಜನೆಗಳು/ಸೇವೆಗಳಿಗೆ ಸಂಬಂಧಿಸಿದಂತೆ ನಾಗರಿಕರು ತಮ್ಮ ದೂರನ್ನು ದಾಖಲಿಸಬಹುದು.ಕುಂದುಕೊರತೆಗಳನ್ನು ದಾಖಲಿಸುವುದು ಹೇಗೆ?•ಜಾಲತಾಣಕ್ಕೆ ಭೇಟಿ ನೀಡಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ
• ನಾಗರಿಕ ಆಯ್ಕೆಯನ್ನು ಆರಿಸಿ, OTP ಸ್ವೀಕರಿಸಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
• OTP ನಮೂದಿಸಿ ಮತ್ತು ಲಾಗಿನ್ ಮಾಡಿಕೊಳ್ಳಿ
• ಕುಂದುಕೊರತೆಗಳು ಎಂಬ ಆಯ್ಕೆ ಅಡಿಯಲ್ಲಿ, ಕುಂದುಕೊರತೆ ಸಲ್ಲಿಕೆ ಎಂಬ ಆಯ್ಕೆಯನ್ನು ಆಯ್ಕೆಮಾಡಿ
• ಕುಂದುಕೊರತೆಗಳು ಪಟ್ಟಿ ಮಾಡಲಾದ ಯಾವುದೇ ಸಮಸ್ಯೆಗಳನ್ನು ಒಳಗೊಂಡಿಲ್ಲ ಎಂದು ಒಪ್ಪಿಕೊಳ್ಳಲು ಸ್ವಯಂ ಘೋಷಣೆ ಬಟನ್ ಮೇಲೆ ಕ್ಲಿಕ್ ಮಾಡಿ
• ವೈಯಕ್ತಿಕ ಮಾಹಿತಿಯನ್ನು ಸ್ವಯಂ-ಪಡೆಯಲಾಗುತ್ತದೆ
• ಕುಂದುಕೊರತೆ, ವ್ಯಕ್ತಿ ಅಥವಾ ಸಮುದಾಯ ಯಾರಿಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಆಯ್ಕೆಮಾಡಿ. ಮತ್ತು ಆದ್ಯತೆಯನ್ನು ಆರಿಸಿ.
• ಕುಂದುಕೊರತೆಯ ಪ್ರಕಾರವನ್ನು ಆಯ್ಕೆಮಾಡಿ
• ಕುಂದುಕೊರತೆಗಳನ್ನು ನೋಂದಾಯಿಸಬೇಕಾದ ಇಲಾಖೆಯ ಹೆಸರು, ಲೈನ್ ಇಲಾಖೆ, ಸೇವೆಯ ಹೆಸರು, ಕುಂದುಕೊರತೆ, ಕುಂದುಕೊರತೆ ವರ್ಗ ಮತ್ತು ಕುಂದುಕೊರತೆ ಉಪವರ್ಗವನ್ನು ಆಯ್ಕೆಮಾಡಿ.
• ಯಾವುದಾದರೂ ದಾಖಲೆಗಳನ್ನು ಅಪ್‌ಲೋಡ್  ಮಾಡುವುದಾದಲ್ಲಿ ಚೂಸ್‌  ಫೈಲ್‌ ಎಂಬ ಆಯ್ಕಯನ್ನು ಆರಿಸಿ.
 • ಸ್ಥಳ, ಜಿಲ್ಲೆ, ತಾಲೂಕು, ಗ್ರಾಮ-ಗ್ರಾಮ ಪಂಚಾಯತ್, ಮನೆ ಸಂಖ್ಯೆ, ಬೀದಿ ವಿಳಾಸ, ಸ್ಥಳ ಮತ್ತು ಪಿನ್‌ಕೋಡ್ ಅನ್ನು ನಮೂದಿಸಿ
• ಕುಂದುಕೊರತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸಹ ನಮೂದಿಸಿ ಮತ್ತು ನೋಂದಾಯಿಸಿಕೊಳ್ಳಿ.ನೋಂದಣಿಗೊಂಡ ನಂತರ, ಸ್ವಯಂಚಾಲಿತ ವ್ಯವಸ್ಥೆಯಿಂದ ರಚಿಸಲಾದ ವಿಶಿಷ್ಟ ಕುಂದುಕೊರತೆ ID ಪರದೆಯ ಮೇಲೆ ಕಾಣಿಸುತ್ತದೆ. ಭವಿಷ್ಯದ  ಬಳಕೆಗಾಗಿ ಕುಂದುಕೊರತೆ ID ಯನ್ನು ಗಮನದಲ್ಲಿಟ್ಟುಕೊಳ್ಳಲು ನಾಗರಿಕರಿಗೆ ವಿನಂತಿಸಲಾಗಿದೆ. ಹೀಗೆ ಸಲ್ಲಿಸಿದ ಕುಂದುಕೊರತೆಗಳು ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ವಯಂಚಾಲಿತವಾಗಿ ರವಾನೆಯಾಗುತ್ತದೆ. ಇದೇ ರೀತಿಯ ಇನ್ನಷ್ಟು ಹೆಚ್ಚಿನ ಸೇವೆಗಳನ್ನು ತಿಳಿದುಕೊಳ್ಳಲು ಜಾಲತಾಣಕ್ಕೆ ಭೇಟಿ ನೀಡಿ ipgrs.karnataka.gov.in

Admin

Admin

 

1 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ