CEG Blog

ಇ-ಆಡಳಿತ ಸೇವೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

maro news
ಇ-ಆಡಳಿತ ಸೇವೆಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕರ್ನಾಟಕ ಸರ್ಕಾರದ ಇ-ಆಡಳಿತ ಸೇವೆಗಳನ್ನು ಬಳಸುವ ನಾಗರಿಕರ ಅನುಭವಗಳು ಮತ್ತು ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಲು, ರಾಷ್ಟ್ರೀಯ ಇ-ಆಡಳಿತ ಸೇವೆ ವಿತರಣಾ ಮೌಲ್ಯಮಾಪನವು (NeSDA), ನಾಗರಿಕ ಸಮೀಕ್ಷೆಯನ್ನು ನಡೆಸುತ್ತದೆ. ಎಲ್ಲಾ ರಾಜ್ಯ/UT ಗಳಿಂದ ಇ-ಸೇವೆಗಳನ್ನು ಪಡೆಯುವಲ್ಲಿ ನಾಗರಿಕರ ಅನುಭವವನ್ನು ತಿಳಿದುಕೊಳ್ಳುವುದು ಸಮೀಕ್ಷೆಯ ಉದ್ದೇಶವಾಗಿದೆ.

 ನಾಗರಿಕರಿಂದ ನಿಖರವಾದ ಮಾಹಿತಿ ಮತ್ತು ಅದರ ಕುರಿತ ವಿಶ್ಲೇಷಣೆಯನ್ನು ಪಡೆಯುವುದರಿಂದ, ರಾಜ್ಯ/UTಗಳಿಗೆ ಭವಿಷ್ಯದಲ್ಲಿ ಸೇವೆಯ ವಿತರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಒದಗಿಸಲಾದ ಸರ್ಕಾರಿ ಸೇವೆಗಳ ಪರಿಣಾಮ, ದಕ್ಷತೆ ಮತ್ತು ಬಳಕೆದಾರರ ಅನುಭವವನ್ನು ನಿರ್ಣಯಿಸುವ ಗುರಿಯನ್ನು ಈ ಸಮೀಕ್ಷೆಯು ಹೊಂದಿದೆ.

ಭಾಗವಹಿಸುವುದು ಹೇಗೆ?

 ಈ ಸಮೀಕ್ಷೆಯಲ್ಲಿ ನೀವು ಭಾಗವಹಿಸಲು ಬಯಸುವುದಾದಲ್ಲಿ, ಜಾಲತಾಣಕ್ಕೆ ಭೇಟಿ ನೀಡಿ bit.ly/3GcQYdt  ಕ್ಯಾಪ್ಚವನ್ನು ನಮೂದಿಸಿ, ಸಮೀಕ್ಷೆಯನ್ನು ತೆಗೆದುಕೊಳ್ಳಿ.

ಮೊದಲಿಗೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತುಂಬಿ ನಂತರ ಇ-ಆಡಳಿತ ಸೇವೆಗಳ ಕುರಿತು ಪ್ರಶ್ನೆಗಳಿಗೆ ನಿಮ್ಮ ಅನುಭವದ ಉತ್ತರಗಳನ್ನು ನೀಡಿ.

ಈ ಸಮೀಕ್ಷೆಯ ಮೂಲಕ ನಾಗರಿಕರು ಒದಗಿಸಿದ ಪ್ರತಿಕ್ರಿಯೆಯು ಭವಿಷ್ಯದಲ್ಲಿ ಇ-ಆಡಳಿತ ಸೇವೆಗಳ ವಿನ್ಯಾಸ, ವಿತರಣೆ ಮತ್ತು ಬಳಕೆದಾರರ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

Admin

Admin

 

0 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ