CEG Blog

ನೀರು ಸರಬರಾಜು ಸಂಪರ್ಕದ ಅನುಮತಿಗೆ ಅರ್ಜಿ ಸಲ್ಲಿಸುವುದು ಹೇಗೆ?

maro news
ನೀರು ಸರಬರಾಜು ಸಂಪರ್ಕದ ಅನುಮತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಈ ಸೇವೆಯು ಸೇವಾಸಿಂಧು ಯೋಜನೆಯಡಿಯಲ್ಲಿದ್ದು,  ನಾಗರಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ನಾಗರಿಕರು ತಮಗೆ  ನೀರು ಪೂರೈಕೆಯ ಹೊಸ ಲೈನ್  ಸಂಪರ್ಕ ಬೇಕಿದ್ದಲ್ಲಿ, ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬಹುದು.

ಸೇವಾ ಸಿಂಧು ಎಂದರೇನು?

ಸೇವಾಸಿಂಧು ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆಬಾಗಿಲಿಗೆ ತಲುಪಿಸುವ ಗುರಿ ಹೊಂದಿದ್ದು, ಎಲ್ಲಾ ಇಲಾಖೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿಒದಗಿಸಲು ಕಾರ್ಯನಿರ್ವಹಿಸುತ್ತದೆ. ಇದು ಕರ್ನಾಟಕ ಸರ್ಕಾರದ ಒಂದು ಉಪಕ್ರಮವಾಗಿದ್ದು, ಇ-ಆಡಳಿತ ಕೇಂದ್ರದ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿಯಲ್ಲಿ ಬರುತ್ತದೆ.

sevasindhuservices.karnataka.gov.in ಜಾಲತಾಣಕ್ಕೆ ಭೇಟಿ ನೀಡಿ, ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಬಳಸಿಕೊಂಡು ಓ.ಟಿ.ಪಿಯ ಮೂಲಕ ಲಾಗಿನ್‌ ಮಾಡಿಕೊಂಡು, ಸೇವಾಸಿಂಧು ಒದಗಿಸುವ ಹಲವಾರು ಸೇವೆಗಳನ್ನು ಪಡೆದುಕೊಳ್ಳಬಹುದು. 

ನೀರು ಸರಬರಾಜು ಸಂಪರ್ಕದ ಅನುಮತಿಗೆ ಅರ್ಜಿ ಸಲ್ಲಿಸುವುದು ಹೇಗೆ?

ನಾಗರಿಕರು ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ,

ಸೇವಾಸಿಂಧು ಜಾಲತಾಣಕ್ಕೆ ಭೇಟಿ ನೀಡಿ, sevasindhuservices.karnataka.gov.in

ವರ್ಗವಾರು ಸೇವೆಗಳ ಮೇಲೆ ಕ್ಲಿಕ್‌ ಮಾಡಿ.

ಕೈಗಾರಿಕೆ ಮತ್ತು ವಾಣಿಜ್ಯ ಎಂಬ ಆಯ್ಕೆಯನ್ನು ಆರಿಸಿ.


ಅದರಲ್ಲಿ ಭೂಮಿ ಮತ್ತು ಕಟ್ಟಡ ಸಂಬಂಧಿತ ಸೇವೆಗಳನ್ನು ಕ್ಲಿಕ್‌ ಮಾಡಿ

ನೀರು ಸರಬರಾಜು ಸಂಪರ್ಕಕ್ಕೆ ಅನುಮತಿ ಎಂಬ ಮೊದಲನೆ ಆಯ್ಕೆಯನ್ನು ಆರಿಸಿ.

ಆನ್ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯನ್ನು ಕ್ಲಿಕ್‌ ಮಾಡಿ

ಸೇವೆಯ ಕುರಿತ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಅರ್ಜಿಯ ಶುಲ್ಕ, ಅರ್ಹತೆ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಎಂಬುದನ್ನು ಸಹ ತಿಳಿದುಕೊಳ್ಳಬಹುದು.

ಇನ್ನು ಹಲವು ಸೇವೆಗಳನ್ನು ಹಾಗೂ ಅದರ ಕುರಿತು ಮಾಹಿತಿಯನ್ನು ಪಡೆಯಲು ಸೇವಾಸಿಂಧು ಜಾಲತಾಣಕ್ಕೆ ಭೇಟಿ ನೀಡಿ sevasindhu.karnataka.gov.in

Admin

Admin

 

0 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ