CEG Blog

ರೈತರು ಫ್ರೂಟ್ಸ್‌ನಲ್ಲಿ ನೋಂದಾಯಿಸಲಾದ ಮಾಹಿತಿಯನ್ನು ಬದಲಾಯಿಸಬೇಕೆ?

maro news
ರೈತರು ಫ್ರೂಟ್ಸ್‌ನಲ್ಲಿ ನೋಂದಾಯಿಸಲಾದ ಮಾಹಿತಿಯನ್ನು ಬದಲಾಯಿಸಬೇಕೆ?
ಫ್ರೂಟ್ಸ್‌ – ಸರ್ಕಾರದ ಸವಲತ್ತುಗಳನ್ನು ಪಡೆಯಲು ಬಯಸುವ ರೈತರಿಗೆ ಅನುಕೂಲ ಮಾಡಿಕೊಡುವ ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯಾಗಿದೆ. ಇದು ಕರ್ನಾಟಕ ಸರ್ಕಾರದ, ಇ-ಆಡಳಿತ ಕೇಂದ್ರದಡಿಯಲ್ಲಿ ಬರುವ ಒಂದು ಉಪಕ್ರಮವಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯಡಿಯಲ್ಲಿ ಬರುತ್ತದೆ.ಖಾತೆಯನ್ನು ತೆರೆಯುವುದು ಹೇಗೆ?
ಫ್ರೂಟ್ಸ್‌ನಲ್ಲಿರುವ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇ       ಕಿದ್ದಲ್ಲಿ ನೀವು ನೋಂದಣಿ ಮಾಡಿಕೊಳ್ಳಬೇಕು. ಆಧಾರ್‌ ಅಥವಾ ಮೊಬೈಲ್‌ ಸಂಖ್ಯೆಯನ್ನು ಬಳಸಿಕೊಂಡು ನೋಂದಣಿ ಮಾಡಿಕೊಳ್ಳಬಹುದು. ನಂತರ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತುಂಬಿ ನಿಮ್ಮ ಖಾತೆಯನ್ನು  ತೆರೆದುಕೊಳ್ಳಬಹುದು. ಫ್ರೂಟ್ಸ್‌ ಯೋಜನೆಯಡಿಯಲ್ಲಿ ಬರುವ ಹಲವಾರು ಸೇವೆಗಳ ಕುರಿತು ನೀವು ತಿಳಿದುಕೊಳ್ಳಬಹುದು.ಮಾಹಿತಿಗಳನ್ನು ಬದಲಾಯಿಸಿಕೊಳ್ಳುವುದು ಹೇಗೆ?
  1.   1. fruits.karnataka.gov.in ಜಾಲತಾಣಕ್ಕೆ ಭೇಟಿ ನೀಡಿ,
  2.   2. ನೀವು ನೋಂದಾಯಿಸಿಕೊಳ್ಳಲಾದ ಖಾತೆಗೆ ಲಾಗಿನ್‌ ಮಾಡಿಕೊಳ್ಳಿ.
  3.   3. ʼಬದಲಾಯಿಸಿʼ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
  4.   4. ನಿಮ್ಮ ಅವಶ್ಯಕ ವಿವರಗಳನ್ನು ಬದಲಾಯಿಸಿಕೊಳ್ಳಬಹುದು. ನಿಮ್ಮ ಮೊಬೈಲ್‌ ಸಂಖ್ಯೆ, ಬ್ಯಾಂಕ್‌ನ ವಿವರ, ಭೂಮಿಯ ಪ್ರಕಾರ, ಜಾತಿ, ಭಾವಚಿತ್ರ, ಲಿಂಗ, ಆಧಾರ್‌ ಪ್ರಕಾರದ ಹೆಸರು, ದೈಹಿಕ ವಿಕಲಚೇತನ, ವಿಳಾಸ, ಹುಟ್ಟಿದ ದಿನಾಂಕ, ಹೆಸರು, ಹೆಸರನ್ನು ಕನ್ನಡದಲ್ಲಿ ನವೀಕರಿಸುವುದು ಮುಂತಾದ ಬದಲಾವಣೆಗಳನ್ನು ಮಾಡಬಹುದು
ಫ್ರೂಟ್ಸ್‌ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಜಾಲತಾಣಕ್ಕೆ ಭೇಟಿ ನೀಡಿ fruits.karnataka.gov.in
Admin

Admin

 

0 ಕಾಮೆಂಟ್‌ಗಳು.

ಪ್ರತಿಕ್ರಿಯೆಯನ್ನು ಬಿಡಿ

ಕಾಮೆಂಟ್ ಅನ್ನು ಪೋಸ್ಟ್ ಮಾಡಲು ನೀವು ಲಾಗಿನ್ ಮಾಡಬೇಕು. ಈಗಾಗಲೇ ಸದಸ್ಯ ಲಾಗಿನ್ ಮಾಡಿ | ಹೊಸ ನೋಂದಣಿ