ಅಭಿಪ್ರಾಯ / ಸಲಹೆಗಳು
Grivience ಕುಂದುಕೊರತೆ

ಇ-ಆಡಳಿತ ಕೇಂದ್ರದ ಬಗ್ಗೆ

ಇ-ಆಡಳಿತ ಕೇಂದ್ರದ ಜಾಲತಾಣ ಪುಟಗಳಿಗೆ ಸ್ವಾಗತ.  ಕರ್ನಾಟಕ ಸರ್ಕಾರವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದ್ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅನುಕರಣೀಯ ಮಾದರಿಯಾಗಿದ್ದು, ರಾಷ್ಟ್ರದಲ್ಲಿ ವಿದ್ಯುನ್ಮಾನ-ಆಡಳಿತದ (ಇ-ಆಡಳಿತ) ಉಪಕ್ರಮಿಕೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಕ್ರಿಯವಾಗಿದೆ. ರಾಜ್ಯದ ಇ-ಆಡಳಿತ ನೀತಿ ಮತ್ತು ತಂತ್ರಗಾರಿಕೆಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲು ಇ-ಆಡಳಿತ ಕೇಂದ್ರವನ್ನು ಸಂಘ-ಸಂಸ್ಥೆಗಳ ನೋಂದಾವಣೆ ಅಧಿನಿಯಮದ ಅಡಿಯಲ್ಲಿ 2006 ರಲ್ಲಿ ಒಂದು ನೋಡಲ್ ಸಂಸ್ಥೆಯಾಗಿ ಸೃಷ್ಟಿಸಲಾಗಿದೆ. ಇದು ರಾಜ್ಯದಲ್ಲಿ ಇ-ಆಡಳಿತ ಮೂಲಸೌಕರ್ಯಗಳ ಮತ್ತು ಮೂಲಭೂತ ಆಡಳಿತ ಸುಧಾರಣೆ ಆಧಾರಿತ ಅನ್ವಯಿಕಗಳನ್ನು ನಿರ್ವಹಿಸುವ ಪಾಲಕ ಸಂಸ್ಥೆಯಾಗಿದೆ. ವಸ್ತುತಃ ಈ ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ– (ಆಡಳಿತ ಸುಧಾರಣೆ – ಇ-ಆಡಳಿತ)) (ಡಿಪಿಎಆರ್- ಆಸು -ಇಆ) ಯ ಅಡಿಯಲ್ಲಿ ಸ್ಥಾಪಿತವಾಗಿದ್ದು, ಅದು ರಾಜ್ಯದ ಮುಖ್ಯಮಂತ್ರಿಗಳಿಗೇ ನೇರವಾಗಿ ಹೊಣೆಯಾಗಿರುವುದು ರಾಜ್ಯದಲ್ಲಿ ವಿಶೇಷವಾಗಿದೆ. 

ಪ್ರಸ್ತುತದಲ್ಲಿ, ಅತ್ಯಾಧುನಿಕ ಎರಡು ದತ್ತಾಂಶ ಕೇಂದ್ರಗಳು, ಎಂ.ಪಿ.ಎಲ್.ಎಸ್. ತಂತ್ರಜ್ಞಾನ ಆಧಾರಿತ ಕರ್ನಾಟಕ ರಾಜ್ಯ ವಿಸ್ತೃತ ಜಾಲ (ಕೆಸ್ವಾನ್) ಮತ್ತು ಮೂಲ ಅನ್ವಯಿಕಗಳಾದ ಇ-ಸಂಗ್ರಹಣೆ ಯೋಜನೆಯನ್ನು ನಿರ್ವಹಿಸುವ ಹೆಗ್ಗಳಿಕೆಯ ಕೇಂದ್ರವಾಗಿದ್ದು, ಶತ ಪ್ರತಿಶತ ಕಾರ್ಯನಿರ್ವಹಣೆಯ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬರುತ್ತಾ, ಕೆಲವು ಹೆಗ್ಗುರುತನ್ನೂ ಮೂಡಿಸಿದೆ. 

 

ನಮ್ಮ ಸಂದೇಶ



ಶ್ರೀ ರಾಜೀವ್ ಚಾವ್ಲಾ, ಭಾಆಸೇ, 

ಸರ್ಕಾರದ ಅಪರ ಮುಖ್ಯ​ಕಾರ್ಯದರ್ಶಿಗಳು,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ),

ಕರ್ನಾಟಕ ಸರ್ಕಾರ.

 

 ಇ-ಆಡಳಿತ ಕೇಂದ್ರವು ಕರ್ನಾಟಕ ಸರ್ಕಾರದ ಇ-ಪರಿವರ್ತನಾ ಕಾರ್ಯದ ನೇತೃತ್ವವನ್ನು ವಹಿಸಿದೆ. ಇದರ ಗುರಿಯು ಸರ್ಕಾರಕ್ಕೆ ಉತ್ತಮ ಗುಣಮಟ್ಟದ ಜಾಗತಿಕ ನೈಪುಣ್ಯತೆ, ಸೂಕ್ತ ತಂತ್ರಜ್ಞಾನ, ದಕ್ಷ ಪ್ರಕ್ರಿಯೆ ಮತ್ತು ಅಗತ್ಯ ಆರ್ಥಿಕ ಯೋಜನೆಗಳನ್ನು ಒದಗಿಸಿ, ಇಲಾಖೆಗಳಿಗೆ ಇ-ಆಡಳಿತ ಉಪಕ್ರಮಿಕೆಗಳ ವಿನ್ಯಾಸ ಮಾಡಿ ಅನುಷ್ಠಾನಗೊಳಿಸುವುದೇ ಆಗಿರುತ್ತದೆ.​ ನಮ್ಮ ಉಪಕ್ರಮಗಳಿಂದ ರಾಜ್ಯ ಹಾಗೂ ನಾಗರೀಕರು ಸಾಕಷ್ಟು ಪ್ರಯೋಜನ ಪಡೆಯುವರೆಂದು ನಾವಾದರೂ ನಂಬಿದ್ದೇವೆ.

 

 

ಶ್ರೀ. ವಿಪಿನ್‌ ಸಿಂಗ್,  ಐಎಫ್ಎಸ್,            
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,

ಇ-ಆಡಳಿತ ಕೇಂದ್ರ.

 ಇ-ಆಡಳಿತ ಕೇಂದ್ರವನ್ನು ಮಾಹಿತಿ ತಂತ್ರಜ್ಞಾನದ ಬಳಕೆಯೊಂದಿಗೆ ವಿಶ್ವಮಟ್ಟದ ಆಡಳಿತ ಸುಧಾರಣಾ ಸಂಸ್ಥೆಯಾಗಿ ರೂಪಿಸುವ ಮೂಲಕ ಈ ಜ್ಞಾನದ ಸಂಪೂರ್ಣ ಪ್ರಯೋಜನ ಪಡೆದು ಜನತೆಗೆ ಉತ್ತಮ ಆಡಳಿತ ನೀಡುವುದು ಕೇಂದ್ರದ ಗುರಿಯಾಗಿದೆ.  ಅಂತೆಯೇ ಹಲವು ಹೆಗ್ಗುರುತುಗಳನ್ನು ಮೂಡಿಸುವಲ್ಲಿ ಸಫಲರಾಗಿದ್ದೇವೆ. ಜನತೆಯು ನಮ್ಮ ಯೋಜನೆಗಳ ಗರಿಷ್ಠ ಲಾಭ ಪಡೆದುಕೊಳ್ಳುವ ಮೂಲಕ ನಮಗೆ ಸ್ಫೂರ್ತಿ ನೀಡಿದಂತಾಗುತ್ತದೆ.

 


  

ಇತ್ತೀಚಿನ ನವೀಕರಣ​ : 08-09-2021 05:38 PM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು
  • ಗೌಪ್ಯತಾ ನೀತಿ
  • ಸಹಾಯ
  • ಪರದೆ ವಾಚಕ
  • ಮಾರ್ಗಸೂಚಿಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ