ಅಭಿಪ್ರಾಯ / ಸಲಹೆಗಳು

ವಿಡಿಯೋ ಸೇವೆಗಳು

ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆಯ ಅಂಗವಾಗಿ ಇ-ಆಡಳಿತ ಕೇಂದ್ರವು ರಾಜ್ಯದಲ್ಲಿನ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿಯೂ ಹೈ ಡೆಫಿನಿಷನ್ ಸ್ಟುಡಿಯೋ ಆಧಾರಿತ ವಿಡಿಯೋ ಕಾನ್ಫರೆನ್ಸ್ (ವಿ.ಕಾ) ಸೌಲಭ್ಯವನ್ನು ಅನುಷ್ಠಾನಗೊಳಿಸಿದೆ. ಈ ಸೌಲಭ್ಯವು ತಾಲ್ಲೂಕು ಕೇಂದ್ರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಮತ್ತು ರಾಜ್ಯ ಕೇಂದ್ರ ಕಛೇರಿಯಲ್ಲಿನ ಸರ್ಕಾರಿ ಅಧಿಕಾರಿಗಳ ನಡುವೆ ವರ್ಚುಯಲ್ ಸಭೆಗಳಿಗೆ ಅನುಕೂಲ ಕಲ್ಪಿಸುವುದು.  ಇದು ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ವೆಚ್ಚವನ್ನೂ ಅಂತೆಯೇ ಸಮಯವನ್ನೂ ಉಳಿತಾಯಮಾಡುತ್ತದೆ.

ಇ-ಆಡಳಿತ ಇಲಾಖೆಯಿಂದ ಸೃಷ್ಟಿಯಾಗಿರುವ ನ್ಯೂ ಎಚ್.ಡಿ.ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯದ ವಿಶಿಷ್ಟ ಗುಣಗಳು:

ಇದೊಂದು ಸ್ಟುಡಿಯೋ ಆಧಾರಿತ ವಿ.ಕಾ ಸೌಲಭ್ಯವಾಗಿದ್ದು, ಹೈ ಡೆಫಿನಿಷನ್ ಗುಣಮಟ್ಟದ್ದಾಗಿದೆ.

ಪ್ರಸ್ತುತವಿರುವ ಸ್ಟುಡಿಯೋಗಳ ಜೊತೆಗೆ, ಈ ಎಚ್.ಡಿ.ಸೌಲಭ್ಯವನ್ನು ಎಲ್ಲಾ ಜಿಲ್ಲಾಧಿಕಾರಿಗಳ ಕಛೇರಿಗಳಿಗೂ, ರಾಜ್ಯದ ಕೇಂದ್ರ ಕಛೇರಿಯ ಇಲಾಖಾ ಮುಖ್ಯಸ್ಥರುಗಳಿಗೂ ಹಾಗೂ ತಹಶೀಲುದಾರರುಗಳ ಕಛೇರಿಗಳಿಗೂ ಆದ್ಯತೆಯ ಮೇರೆಗೆ ವಿಸ್ತೃತಗೊಳಿಸಲಾಗಿದೆ.

ಪ್ರತಿಯೊಬ್ಬ ಅಧಿಕಾರಿಯೂ ವಿ.ಕಾ ಸೌಲಭ್ಯಕ್ಕೆ ತಮ್ಮ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ಗಳ ಮೂಲಕ ಸಂಪರ್ಕಗೊಳ್ಳಬಹುದು.

ಚಲನೆಯಲ್ಲಿ  ಪ್ರಯಾಣದಲ್ಲಿರುವ ಅಧಿಕಾರಿಗಳು ವಿ.ಕಾ ವನ್ನು ತಮ್ಮ ಸ್ಮಾರ್ಟ್ ಫೋನಿನ ಮೂಲಕ ಸೇರಿಕೊಳ್ಳಬಹುದಾಗಿದೆ.

ವಿಡಿಯೋ ಕಾನ್ಫರೆನ್ಸಿಂಗ್ ರೆಕಾರ್ಡಿಂಗ್ ಸೌಲಭ್ಯವನ್ನೂ ಆಡಳಿತ ಉದ್ದೇಶಗಳಿಗಾಗಿ ಒದಗಿಸಲಾಗಿದೆ.

ವಿವಿಧ ಇಲಾಖೆಗಳಲ್ಲಿ ಏಕಕಾಲಕ್ಕೆ ಪ್ಯಾರಲಲ್ ಮಲ್ಟಿಪಲ್ ವಿಡಿಯೋ ಕಾನ್ಫರೆನ್ಸನ್ನು (ಎಂ.ಸಿ.ಯು ಗಳು) ಆಯೋಜಿಸಬಹುದಾಗಿದೆ.

ವಿಭಾಗೀಯ ಕೇಂದ್ರಗಳಲ್ಲಿ ನಾಲ್ಕು ಎಂ.ಸಿ.ಯು ಗಳನ್ನು ಅಳವಡಿಸಲಾಗಿದೆ. ಒಂದು ವಿಫಲವಾದರೆ, ತನಗೆ ತಾನೇ ಮತ್ತೊಂದಕ್ಕೆ ವಿ.ಕಾ. ಗೋಷ್ಠಿಗೆ ಪರ್ಯಾಯ ಮಾರ್ಗ ಕಲ್ಪಿಸುತ್ತದೆ.

ಈ ಸೌಲಭ್ಯವು 24/7 ಲಭ್ಯವಿರುವುದರಿಂದ ಯಾವುದೇ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಲು ಯಾವುದೇ ಇಲಾಖಾ ಮುಖ್ಯಸ್ಥ ಅಧಿಕಾರಿಯೊಬ್ಬರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ಅಂತೆಯೇ ಯಾವುದೇ ಜಿಲ್ಲಾಧಿಕಾರಿಯು ತಮ್ಮ ತಹಶೀಲುದಾರರೊಡನೆಯಾವುದೇ ಸಮಯದಲ್ಲಿ ಮಾತನಾಡಬಹುದು.

ಇಲಾಖೆಗಳಿಗೆ ತಮ್ಮ ವಿ.ಕಾ ಅನ್ನು ಬೇಕಾದ ಅವಧಿಗೆ ಮುಂಗಡ ಕಾಯ್ದಿರಿಸಲು ಅಧಿಕೃತ ಕಾಯ್ದಿರಿಸುವ ಸೌಲಭ್ಯವನ್ನು ಒದಗಿಸಲಾಗಿದೆ.

ಸೌಲಭ್ಯದ ಲಾಭಗಳು

 • ಇದು ರಾಜ್ಯದ ಬೊಕ್ಕಸಕ್ಕೆ ಪ್ರಯಾಣದ ವೆಚ್ಚವನ್ನು ಸಾಕಷ್ಟು ಪ್ರಮಾಣದಲ್ಲಿ ಇಳಿಮುಖವಾಗಿಸುತ್ತದೆ.
 • ಇದು ಸರ್ಕಾರಿ ಸಿಬ್ಬಂದಿಗೆ ಪ್ರಯಾಣದ ಸಮಯವನ್ನು ನಿವಾರಿಸುತ್ತದೆ. ತನ್ಮೂಲಕ ಉತ್ಪಾದಕತೆಯಲ್ಲಿ ಸುಧಾರಣೆ ಕಾಣುತ್ತದೆ.
 • ವಿಡಿಯೋ ಕಾನ್ಫರೆನ್ಸಿಂಗ್ ಬಳಕೆದಾರರುಗಳೊಡನೆ ದಿಢೀರ್ ಸಂಪರ್ಕಗೊಳಿಸಿ ಸಮಯ ಉಳಿಸುತ್ತದೆ.  ಪ್ರಯಾಣದ ಸಮಯವನ್ನು ನಿವಾರಿಸಿ ಉಳಿಸಿದ ಸಮಯದಿಂದಾಗಿ ವಿಡಿಯೋ ಕಾನ್ಫರೆನ್ಸನ್ನು ವೆಚ್ಚನಿಯಂತ್ರಿತ ಸೌಲಭ್ಯವಾಗಿಸಿದೆ.
 • ರಾಜ್ಯದ ಕೇಂದ್ರ ಕಛೇರಿಯಲ್ಲಿನ ಇಲಾಖಾ ಮುಖ್ಯಸ್ಥರುಗಳು ತಾಲ್ಲೂಕು ಮಟ್ಟದ ಅಧಿಕಾರಿಗಳೊಡನೆ/ ಸಿಬ್ಬಂದಿಗಳೊಡನೆ ಸಭೆ ನಡೆಸಬಹುದಾಗಿದೆ.
 • ಕರ್ನಾಟಕ ಮಾಹಿತಿ ಆಯೋಗದ ಮಾಹಿತಿ ಆಯೋಗ ನ್ಯಾಯಾಲಯದ ವಿಚಾರಣೆ ಉದ್ದೇಶಗಳಿಗೆ ಸೌಲಭ್ಯವನ್ನು ಬಳಸಬಹುದಾಗಿದೆ. ಇದರಿಂದ ನಾಗರೀಕ್ರ ಪ್ರಯಾಣದ ವೆಚ್ಚ ಹಾಗೂ ಸಮಯದ ಉಳಿತಾಯ.
 • ನೆರೆ ಹಾವಳಿ, ಬರ ಮತ್ತಿತರ ಯಾವುದೇ ವಿಪತ್ತು ಪರಿಸ್ಥಿತಿಗಳ ತುರ್ತು ಉದ್ದೇಶಗಳಿಗೆ ವಿ.ಕಾ ಸೌಲಭ್ಯವನ್ನು ಬಳಸಬಹುದಾಗಿದೆ.
 • ವಿ.ಕಾ ಸಂಪರ್ಕವಿರುವ ಯಾವುದೇ ಸ್ಥಳದಿಂದ ಪ್ರಾತ್ಯಕ್ಷಿಕೆಗಳು, ಫೋಟೋಗಳು ಹಾಗೂ ದೃಶ್ಯ-ಶ್ರವ್ಯ ತುಣುಕುಗಳನ್ನೂ ಸಹ ಇಲಾಖಾ ಮುಖ್ಯಸ್ಥರುಗಳಿಗೆ ಪ್ರದರ್ಶಿಸಬಹುದು/ ಹಂಚಿಕೊಳ್ಳಬಹುದಾಗಿದೆ.
 • ಸಮಯ ಉಳಿತಾಯ, ಪ್ರಯಾಣ ದರಗಳ ನಿವಾರಣೆ ಹಾಗೂ ಉತ್ಪಾದಕತೆಯ ಹೆಚ್ಚಳಗಳಿಂದಾಗಿ ವೇಗವರ್ಧಿತ, ಗಣನೀಯ ಹಾಗೂ ಸಾಕಷ್ಟು ಮಟ್ಟದ ಹೂಡಿಕೆಯಿಂದ ಗಳಿಸುವ ಲಾಭವನ್ನು ಅಳೆಯುವಲ್ಲಿ ಆಡಳಿತಕ್ಕೆ ಅನುಕೂಲ ಕಲ್ಪಿಸುತ್ತದೆ.
 • ಈ ಸೌಲಭ್ಯವನ್ನು ತರಬೇತಿ ಉದ್ದೇಶಗಳಿಗೂ ಮಾನವಶಕ್ತಿ, ಸಮಯ ಮತ್ತು ವೆಚ್ಚದ ಉಳಿತಾಯ ಮಾಡಲು ಬಳಸಬಹುದಾಗಿದೆ.

ಬೆಂಬಲ ಮತ್ತು ಸಹಾಯಕ್ಕಾಗಿ:

09591333016 ಹಾಗೂ 09480282171

ಏನಾದರೂ ವ್ಯತ್ಯಯವಾದಲ್ಲಿ:-

ಪ್ರಜೇಶ್ ಕುಮಾರ್
ವಿ.ಕಾ – ಅಡ್ಮಿನ್

9880783562

apmceg@karnataka.gov.in   

ಇತ್ತೀಚಿನ ನವೀಕರಣ​ : 28-05-2019 12:33 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080