ಅಭಿಪ್ರಾಯ / ಸಲಹೆಗಳು

ವಿ ಸ್ಯಾಟ್ ಸೇವೆಗಳು

ವಿ-ಸ್ಯಾಟ್ ಎಂಬುದು Small Aperture Terminal ಆಗಿದ್ದು, ಸಂವಹನ ಸಂಕೇತಗಳನ್ನು uplink ಮತ್ತು downlink ಮಾಡಲು ನಿರ್ದಿಷ್ಟ ಉಪಗ್ರಹವೊಂದರೆಡೆಗೆ ಸಂಪರ್ಕ ಇಟ್ಟುಕೊಂಡಿರುತ್ತದೆ.

ವಿ-ಸ್ಯಾಟ್ ಏಕೆ?

ತಾಮ್ರದ ತಂತು, ಆಪ್ಟಿಕಲ್ ಫೈಬರ್, ರೇಡಿಯೋ, ಮೈಕ್ರೋವೇವ್ ಮತ್ತಿತರ ಕೇಬಲ್ ಯುಕ್ತ / ನಿಸ್ತಂತು ಲಿಂಕುಗಳೇ ಮುಂತಾದ ಸಾಂಪ್ರದಾಯಿಕ ಮಾಧ್ಯಮಗಳ ಮೂಲಕ ಸಂಪರ್ಕ ಕಲ್ಪಿಸಲುಸಾಧ್ಯವಾಗದ ಸ್ಥಳಗಳಿಗೂ ಸಂಪರ್ಕ ಸಾಧ್ಯ ಮಾಡಲಾಗಿದೆ. ವಿ-ಸ್ಯಾಟ್ ಒಂದು ಬಹುಮುಖ ಸಾಮರ್ಥ್ಯವುಳ್ಳದ್ದು. ಇದೊಂದು ಸಂಪರ್ಕರಹಿತ ಪ್ರದೇಶಕ್ಕೂ ವಿಶ್ವಾಸಾರ್ಹವಾಗಿ ಪ್ರಾಥಮಿಕ ಲಿಂಕ್ಒದಗಿಸುವುದಲ್ಲದೆ ಬ್ಯಾಕ್ ಲಿಂಕ್ ಆಗಿಯೂ ಬಹು ಸಫಲ ಪರ್ಯಾಯ ತಂತ್ರಜ್ಞಾನವಾಗಿದೆ. ಇದು ದತ್ತಾಂಶ ರವಾನೆ, ಅಂತರ್ಜಾಲ, ಧ್ವನಿ, ವಿಡಿಯೋ, ಇತ್ಯಾದಿ ಅನೇಕಾನೇಕ ದೂರಸಂಪರ್ಕಸೇವೆಗಳನ್ನು ಒದಗಿಸುತ್ತದೆ.

 

ವಿ-ಸ್ಯಾಟ್  ಉಪಕರಣಗಳು:

  • ಐಡಿಯು (ಇನ್-ಡೋರ್ ಘಟಕ) ಎಂಬುದು ಒಂದು ಉಪಗ್ರಹ ಮಾಡೆಮ್ ಆಗಿದ್ದು, ಇದು ಐಪಿ ಸಿಗ್ನಲ್ ಗಳನ್ನು ರೇಡಿಯೋ ತರಂಗಗಳಾಗಿ ಬದಲಾಯಿಸುತ್ತದೆ.
  • ಓಡಿಯು (ಔಟ್-ಡೋರ್ ಘಟಕ) ಎಂಬುದರಲ್ಲಿ ಡಿಶ್ ಆಂಟೆನಾ, ಅಪ್ ಕನ್ವರ್ಟರ್ ಹಾಗೂ ಆಂಪ್ಲಿಫೈಯರ್ ಹೊಂದಿರುತ್ತದೆ.

 

ಸಂಚಾರಿ ವಾಹನದಲ್ಲಿ ವಿ-ಸ್ಯಾಟ್ ಆಂಟೆನಾದ ಚಾಲನೆ

  • ವಿ-ಸ್ಯಾಟ್ ಆಂಟೆನಾ ಚಾಲನೆಗೊಳಿಸುವ ಮೊದಲು, ಪ್ರಪ್ರಥಮವಾಗಿ ಪರೀಕ್ಷಿಸಬೇಕಾದ್ದು ಆಯಾ ಉಪಗ್ರಹದ ದಿಕ್ಕಿನಲ್ಲಿ ಎಲ್.ಓ.ಎಸ್ ನ (ಲೈನ್ ಆಫ್ ಸೈಟ್ – ದೃಷ್ಟಿಗೆ ನೇರವಾಗಿ ನಿಲುಕುವ)ಸ್ಪಷ್ಟತೆ.
  • ವಾಹನವನ್ನು ಚಪ್ಪಟೆ ನೆಲದ ಮೇಲೆ ನಿಲ್ಲಿಸಲು ಪ್ರಯತ್ನಿಸುವುದು
  • ಅರ್ತಿಂಗ್ ಮಾಡಿರಬೇಕು
  • ಹೈಡ್ರಾಲಿಕ್ ಜ್ಯಾಕ್ ಗಳನ್ನು ನಿಯೋಜಿಸಿರಬೇಕು. ಇದರಿಂದಾಗಿ ವಾಹನವು ಸಂಪರ್ಕದ ಸಮಯದಲ್ಲಿ ಅಳ್ಳಾಡುವುದಿಲ್ಲ.
  • ವಿದ್ಯುತ್ ಸಂಪರ್ಕದ ಸ್ಥಳಕ್ಕೆ ವಿದ್ಯುಚ್ಛಕ್ತಿಯ ಸರಬರಾಜು ಮಾಡುವುದು ಅಥವಾ ಜನರೇಟರ್ ಚಾಲನೆಗೊಳಿಸುವುದು
  • ವಿದ್ಯುಚ್ಛಕ್ತಿ ಸರಬರಾಜನ್ನು ಸರಿಯಾಗಿ ಪರೀಕ್ಷಿಸಿದಾಗ, ಸಂಚಾರಿ ವಾಹನದೊಳಗಿನ ಪವರ್ ಪ್ಯಾನಲ್ ನಿಂದ ಸಂಬಂಧಿತ ಎಂ.ಸಿ.ಬಿ ಯನ್ನು ಸ್ವಿಚ್ ಆನ್ ಮಾಡುವುದು. ನಂತರ ಯುಪಿಎಸ್ ಅನ್ನುಮತ್ತು ಎ.ಸಿ.ಯು ವನ್ನು (ಆಂಟೆನಾ ಕಂಟ್ರೋಲ್ ಘಟಕ) ಸ್ವಿಚ್ ಆನ್ ಮಾಡುವುದು.
  • ಎ.ಸಿ.ಯು ನಲ್ಲಿ ಮೊದಲು ಆಂಟೆನಾವನ್ನು ನಿಯೋಜಿಸುವುದು, ಇದಾದ ನಂತರ ಬೇಕಾದ ಕೋನದ ಅಳತೆಯನ್ನು ನಮೂದಿಸುವುದು
  • ಇಷ್ಟಾದ ನಂತರ, ಮಾಡೆಮ್ ಅನ್ನು (ಐಪಿ ಸ್ಟಾರ್) ಉಸ್ತುವಾರಿ ಮಾಡುತ್ತಾ ಇರುವುದು.
  • ಕೊನೆಗೆ, ಬೇಕಾದಷ್ಟು ಸಿಗ್ನಲ್ ಸಿಗುವ ತನಕ ಆಂಟೆನಾವನ್ನು ಟ್ಯೂನ್ ಮಾಡಬೇಕು. ಒಮ್ಮೆ ಸಿಗ್ನಲ್ ಬಂತೆಂದರೆ, ವಿ.ಕಾ ವನ್ನು ನೆರವೇರಿಸಬಹುದು.

 

ವಿ-ಸ್ಯಾಟ್ ಮೇಲೆ ಕೆಸ್ವಾನ್  ಪಾಯಿಂಟ್-ಟು-ಪಾಯಿಂಟ್ ವಿಡಿಯೋ ಕಾನ್ಫರೆನ್ಸಿಂಗ್ :-

ಕೆಸ್ವಾನ್ ಅಡಿಯಲ್ಲಿ ನಮ್ಮಲ್ಲಿ 2 ಸಂಚಾರಿ ವಾಹನಗಳಿದ್ದು, ತಮ್ಮದೇ ವಿ.ಕಾ ಸೌಲಭ್ಯವಿಲ್ಲದ ಇಲಾಖೆಗಳಿಗೆ ಅಥವಾ ನೆರೆ, ಗಲಭೆ ಮತ್ತಿತರ ತೊಂದರೆಯ ತುರ್ತು ಸಂದರ್ಭಗಳಲ್ಲಿ ಸಂಚಾರಿ ವಿ.ಕಾವಾಹನಗಳ ಸೌಲಭ್ಯವನ್ನು ಒದಗಿಸುತ್ತದೆ.

ಈ ವಿ.ಕಾ ವಾಹನಗಳು ರಾಜ್ಯದ ಎಲ್ಲಿಂದರಾದರೂ ವಿ.ಕಾ ಗೋಷ್ಠಿಗಳನ್ನು ಕಾರ್ಯಗತಗೊಳಿಸಲು ವಿ.ಕಾ ಸ್ಟುಡಿಯೋವೊಂದನ್ನು ಹಾಗೂ ವಿ-ಸ್ಯಾಟ್ ಸಂಪರ್ಕವೊಂದನ್ನು ಅಳವಡಿಸಿಕೊಳ್ಳುತ್ತದೆ.  ಉತ್ತರಮತ್ತು ದಕ್ಷಿಣ ಕರ್ನಾಟಕದ ಕೇಂದ್ರೀಕೃತ ಪ್ರದೇಶವೊಂದರಲ್ಲಿ ಒಂದೊಂದು ಸಂಚಾರಿ ವಾಹನವನ್ನು ನೆಲೆಯೂರಿಸಲಾಗಿದೆ.

ಇತ್ತೀಚಿನ ನವೀಕರಣ​ : 28-05-2019 12:33 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080