ಇ ಸೈನ್

 

ಪರಿಚಯ 

ಪ್ರಸ್ತುತ ವೈಯಕ್ತಿಕ ಡಿಜಿಟಲ್ ಸಹಿಗೆ ವ್ಯಕ್ತಿಯ ಗುರುತಿನ ಪರಿಶೀಲನೆ ಮತ್ತು ಪಾಸ್ ವರ್ಡ/ ಪಿನ್ನೊಂದಿಗೆ ಸುರಕ್ಷಿತೆ ಹೊಂದಿರುವ ಯುಎಸ್ ಬಿ ಡಾಂಗಲ್ ನೀಡುವುದು ಅಗತ್ಯವಾಗಿದೆ. ಭೌತಿಕ ಪರಿಶೀಲನೆ,ದಾಖಲೆ ಆಧಾರಿತ ಗುರುತಿನ ಮೌಲ್ಯಮಾಪನ ಮತ್ತು ಭೌತಿಕ ಡಾಂಗಲ್ಗಳ ವಿತರಣೆಯ ಪ್ರಸ್ತುತ ಈ ಯೋಜನೆಯು ಒಂದು ಶತಕೋಟಿ ಜನರಿಗೆ ತಲುಪುವುದಿಲ್ಲ. ಸಂಪೂರ್ಣ ಕಾಗದರಹಿತ ನಾಗರಿಕ ಸೇವೆಗಳನ್ನು ನೀಡಲು,ಡಿಜಿಟಲ್ ಸಹಿಯನ್ನು ಸಾಮೂಹಿಕವಾಗಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ.ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ಗಳಿಗೆ ಡಿಜಿಟಲ್ ಸಹಿ ಮಾಡುವ ಸಾಮರ್ಥ್ಯವನ್ನು ಪ್ರತಿಯೊಬ್ಬರಿಗೂ ಹೊಂದಲು ಅನ್ ಲೈನ್ ಸೇವೆಯನ್ನು ಸರಳವಾಗಿ  ಬಳಸಲು ಅಗತ್ಯವಿರುವುದನ್ನು ಮನಗಂಡು ಇ-ಸೈನ್‌ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.

 

  ಸೈನ್ ಸೇವೆ

 ಇ-ಸೈನ್ ಎನ್ನುವುದು ಅನ್ಲೈನ್ ಸೇವೆಯಾಗಿದ್ದು ಆಧಾರ್ ಹೊಂದಿರುವವರಿಂದ ದಾಖಲೆಗಳಿಗೆ ಡಿಜಿಟಲ್ ಸಹಿ ಮಾಡಲು ಅನುಕೂಲವಾಗುವಂತೆ ತೆರೆದ ಎಪಿಐ ಮೂಲಕ ವಿವಿಧ ಸೇವಾ ವಿತರಣಾ ಅಪ್ಲಿಕೇಶನ್ ಗಳಲ್ಲಿ ಸಂಯೋಜಿಸಬಹುದು, ಆಧಾರ್ ದೃಢೀಕರಣ ಮತ್ತು ಇ-ಕೆವೈಸಿ ಸೇವೆಯ ಮೂಲಕ ಗ್ರಾಹಕರ ಡಿಜಿಟಲ್ ಸಹಿ ಅಪ್ಲಿಕೇಶನ್ ಗಳನ್ನು ಲಗ್ಗತ್ತಿಸಬಹುದು.

 

ಎಲ್ಲಿಯಾದರು, ಯಾವಾಗ ಬೇಕಾದರು ಸಹಿ ಮಾಡುವ ಸುಲಭ ಮತ್ತು ಸುರಕ್ಷಿತ ಮಾರ್ಗ

ಡಾಂಗಲ್ ಗಳನ್ನು ಬಳಸದ ಇ-ಸೈನ್ ಅನ್ ಲೈನ್ ಸೇವೆಯಾಗಿದ್ದು, ಇದು ಅಪ್ಲಿಕೇಶನ್ ಸೇವಾ ಪೂರೈಕೆದಾರರಿಗೆ ಸಹಿ ಮಾಡುವವರನ್ನು ಡೃಢೀಕರಿಸಲು ಮತ್ತು ಆಧಾರ್ ಇ-ಕೆವೈಸಿ ಸೇವೆಯನ್ನು ಬಳಸಿಕೊಂಡು ದಾಖಲೆಗಳ ಡಿಜಿಟಲ್ ಸಹಿ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.

 

ಕಾನೂನು ಬದ್ಧ ಮಾನ್ಯ ಸಹಿ ಒದಗಿಸುವುದು

ಇ-ಸೈನ್ ಪ್ರಕ್ರಿಯೆಯು ಗ್ರಾಹಕರ ಒಪ್ಪಿಗೆ, ಡಿಜಿಟಲ್ ಸಹಿ ಪ್ರಮಾಣಪತ್ರ ಉತ್ಪಾದನೆ, ಡಿಜಿಟಲ್ ಸಿಗ್ನೇಚರ್ ರಚನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ. ಎಪಿಐ ನಿರ್ದಿಷ್ಟತೆ ಮತ್ತು ಎಪಿಐ ಪರವಾನಿಗೆ ಮಾದರಿಗಳು, ವಹಿವಾಟುಗಳ ಮೌಲ್ಯವನ್ನು ಖಚಿತ ಪಡಿಸಲು ಒದಗಿಸಿರುವ ಸಮಗ್ರ ಡಿಜಿಟಲ್ ಪರೀಕ್ಷೆ ಮೂಲಕ ಇದರ ಅಂಗಿಕಾರವಾಗುತ್ತಿದೆ ಮತ್ತು ಅವುಗಳನ್ನು ಸಂಮರಕ್ಷಿಸಲಾಗುತ್ತದೆ.

 

ಸ್ಪಂದನಾತ್ಮಕ ಮತ್ತು ಸುಲಭ ಕಾರ್ಯಗತ

ಇ-ಸೈನ್‌ ಎನ್ನುವುದು ಆಧಾರ್‌ ಇ-ಕೆವೈಸಿ ಸೇವೆಗೆ ಅನುಗುಣವಾಗಿ ಹೊಂದಿಕೊ‍‍‍ಳ್ಳಬಹುದಾದ ದೃಢೀಕರಣ ಆಯ್ಕೆಗಳನು ಒದಗಿಸುತ್ತದೆ ಮತ್ತು ಸಹಿ ಮಾಡುವವರ ಗುರುತುಗಳನ್ನು ಪರಿಶೀಲಿಸಲು ಆಧಾರ್ ಐಡಿಯನ್ನು ದಾಖಲಿಸಲಾಗುತ್ತದೆ. ಸಹಿ ಆಯ್ಕೆಯು ಆಧಾರ್ ಡೇಟಾಬೇಸ್ ನಲ್ಲಿ ನೊಂದಾಯಿತ ಮೊಬೈಲ್ ಮೂಲಕ ಬಯೋಮೆಟ್ರಿಕ್ ಅಥವ ಒಟಿಪಿ ದೃಢೀಕರಣದ ಆಯ್ಕೆಯನ್ನು ಒಳಗೊಂಡಿದೆ.  ಇ-ಸೈನ್ ಆಧಾರ್ ಹೊಂದಿರುವವರಿಗೆ ಕಾನೂನುಬದ್ಧವಾಗಿ ಮಾನ್ಯ ಡಿಜಿಟಲ್ ಸಿಗ್ನೇಚರ್ ಸೇವೆಯನ್ನ ಪಡೆಯಲು  ಸುಲಭ ಮಾರ್ಗವಾಗಿದೆ.

 

ಗೌಪ್ಯತೆಯ ಗೌರವ

ಇ-ಸೈನ್, ದಾಖಲೆಗಳಿಗೆ ಬದಲಾಗಿ ಸಹಿ ಮಡುವುದಕ್ಕೆ ಹೆಬ್ಬೆರಳು (ಹ್ಯಾಷ್) ಅನ್ನು ಮಾತ್ರ ಸಲ್ಲಿಸುವ ಮೂಲಕ ಗ್ರಾಹಕರ ಗೌಪ್ಯತೆಯನ್ನು ಖಚಿತ ಪಡಿಸುತ್ತದೆ.

 

ಸುರಕ್ಷಿತ ಆನ್ಲೈನ್ ಸೇವೆ

ಇ-ಸೈನ್ ಸೇವೆಯ ಇ-ದೃಢೀಕರಣ ಮಾರ್ಗಸೂಚಿಗಳ ಮೂಲಕ ನಿರ್ವಹಿಸಲ್ಪಡುತಿದೆ. ಆಧಾರ್ ಇ-ಕೆವೈಸಿ ಬಳಸಿ ದೃಢೀಕರಣವನ್ನು ಕೈಗೊಳಲಾಗುತದೆ.ದಾಖಲೆಗಳಲ್ಲಿ ಸಹಿಯು ಬ್ಯಾಕೆಂಡ್ ಸರ್ವರ್‌ನಲ್ಲಿ ನಡೆಸಲಾಗುತ್ತಿದೆ ಮತ್ತು ಅದು ಇ-ಸೈನ್ ಪೂರೈಕೆದಾರವಾಗಿರುತ್ತದೆ. ಪ್ರಸ್ತುತ, ಮೂರನೇ ವ್ಯಕ್ತಿ ಪ್ರಮಾಣಕರಿಸುವ ಪ್ರಾಧಿಕಾರದ ವಿಶ್ವಾಸಾರ್ಹ ಸೇವಾ ಪೂರೈಕೆದಾರರಿಂದ ಇ-ಸೈನ್ ಸೇವೆಗಳನ್ನು ನೀಡಲಾಗುತ್ತದೆ. ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ದುರುಪಯೋಗವನ್ನು ತಡೆಯಲು ಹಾರ್ಡ್ವೇರ್ ಸೆಕ್ಯೂರಿಟಿ ಘಟಕ (ಹೆಚ್.ಎಸ್.ಎಂ)ನಲ್ಲಿ ಪ್ರಮಾಣಪತ್ರ ಹೊಂದಿರುವವರ ಖಾಸಗಿ ಕೀಲಿಗಳನ್ನು ರಚಿಸಲಾಗುತ್ತದೆ ಮತ್ತು ಒಂದು ಸಮಯದ ನಂತರ ಅದನ್ನು ನಾಶಮಾಡಲಾಗುವುದು.

 

ಇ ಸೈನ್ ಹೇಗೆ ಕೆಲಸ ಮಾಡುತ್ತದೆ

 

 

 -ಸೈನ್ ಎಪಿಐ ಮತ್ತು ಗೇಟ್‌ವೇ

ಇ-ಸೈನ್ ಅಪ್ಲಿಕೇಷನ್ ಪೋಗ್ರಾಮಿಂಗ್ ಇಂಟರ್ಫೇಸಗಳು (ಎಪಿಐ) ಗಳು ಪ್ರಮುಖ ಸಂರಚನೆ ಅಂಶಗಳುನ್ನ ಅರ್ಥೈಸುತ್ತವೆ ಮತ್ತು  ಪಾಲುದಾರರಾದ ಅಪ್ಲಿಕೇಷನ್‌ ಸೇವಾ ಪೂರೈಕೆದಾರರು, ಪ್ರಮಾಣಿಕರಣ ಪ್ರಾಧಿಕಾರ,  ವಿಶ್ವಾಸಾರ್ಹ ಮೂರನೇ ವ್ಯಕ್ತಿ, ಆಧಾರ್‌ ಇ-ಕೆವೈಸಿ ಮತ್ತು ಅಪ್ಲಿಕೇಷನ್‌ ಗೇಟ್‌ ವೇಗಳ ಸಂಹವನ ಸ್ವರೂಪ ಮತ್ತು ಅಂಶಗಳನ್ನು ವಿವರಿಸುತ್ತವೆ. ಈ ಗುಣಮಟ್ಟದ ಇ-ಸೈನ್‌ ಅಪ್ಲಿಕೇಷನ್‌ ಸೇವಾ ಪೂರೈಕೆದಾರು ಇ-ಸೈನ್‌ ಎಪಿಐಅನ್ನು ಕಡಿಮೆ ಸಮಯದಲ್ಲಿ ತಮ್ಮ ಅಪ್ಲಿಕೇಷನ್‌ ನಲ್ಲಿ ಸಂಯೋಜಿಸಲು ಸಾಧ್ಯವಾಗಿಸುತ್ತದೆ. ಸಿಡಿಎಸಿ ಇ-ಸೈನ್ ಗೇಟ್ ವೇ ಪೂರೈಕೆದಾರ ಸಂ‍ಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

 

-ಸೈನ್ ಅನ್ನು ಎಲ್ಲರು ಎಲ್ಲಿಯಾದರು ಬಳಸಬಹುದು

ಇ-ಸೈನ್ ವೈಯಕ್ತಿಕ ಬಳಕೆಗೆ, ಉದ್ದಿಮೆಗಳಿಗೆ ಸರ್ಕಾರಿ ಬಳಕೆಗೆ ಸ್ಪಂದನಾತ್ಮಕ ಮಾದರಿಯಾಗಿದೆ.ದತ್ತಾಂಶ ಹೊಂದಾಗಳಿಕೆಯ ಅಪಾಯಗಳು ಮತ್ತು ಪರಿಣಾಮಗಳು ಕಡಿಮೆಯಾಗಿದರೂ, ಅವು ಪ್ರಮುಖ ಮಹತ್ವವೆಂದು ಪರಿಗಣಿಸುವುದಿಲ್ಲ. ಇ-ಸೈನ್ ಬಯೊಮೇಟ್ರಿಕ್ ದೃಡೀಕರಣದ ಆಧಾರದ ಮೇಲೆ ಮತ್ತು ಅಪಾಯಗಳು ಡೇಟಾ ರಾಜಿಗಳ ಪರಿಣಾಮಗಳು ಮಧ್ಯಮವಾಗಿವೆ. ಇದು ಗಣನೀಯ ವಿತ್ತೀಯ ಮೌಲ್ಯ ಅಥವಾ ವಂಚನೆಯ ಅಪಾಯವನ್ನು ಹೋಂದಿರುವ ವ್ಯವಹಾರಗಳನ್ನು ಓಳಗೊಂಡಿರಬಹುದು ಅಥವಾ ದುರುದ್ವೇಶಪೂರಿತ ಪ್ರವೇಶದ ಸಾಧ್ಯತೆಯ ಗಣನೀಯವಾಗಿರುವ ಖಾಸಗಿ ಮಾಹಿತಿಯ ಪ್ರವೇಶವನ್ನು ಒಳಗೊಂಡಿರುತ್ತದೆ. ಒಟಿಪಿ ಮೂಲಕ ದೃಢೀಕರಣಗೊಂಡ ಇ-ಸೈನ್‌ಗಳು ದತ್ತಾಂಶದೊಂದಿಗೆ ರಾಜಿಮಾಡಿಕೊಳ್ಳುವ ಪ್ರಸಂಗಗಳು ಕಡಿಮೆಯಾಗಿರುತ್ತವೆ ಆದರೂ ಅದನ್ನು ಮಹತ್ವದ್ದು ಎಂದು ಪರಿಗಣಿಸಲಾಗುವುದಿಲ್ಲ. ಬಯೋಮೆಟ್ರಿಕ್‌ ಮೂಲಕ ದೃಢೀಕರಣಗೊಂಡ ಇ-ಸೈನ್‌ಗಳು  ತಕ್ಕನಾಗಿದ್ದು  ಮತ್ತು ದತ್ತಾಂಶದೊಂದಿಗೆ ರಾಜಿಮಾಡಿಕೊಳ್ಳುವ ಪ್ರಸಂಗವು ಸಾಮಾನ್ಯವಾಗಿರುತ್ತದೆ.

 

ಆನ್-ಬೋರ್ಡಿಂಗ್ ಪ್ರಕ್ರಿಯೆ:

ಇಲಾಖೆಯಿಂದ ವಿನಂತಿ

ಇ-ಸೈನ್ ಸೇವೆಗಳನ್ನು ಅಳವಡಿಸಿಕೊಳ್ಳಲು, ಇಲಾಖೆಗಳು ಪತ್ರ / ಮೇಲ್ ಮೂಲಕ ಇ-ಆಡಳಿತ ಕೇಂದ್ರವನ್ನು ಕೋರಬೇಕು.

 

ಅನುಮೋದನೆ ಪಡೆಯಿರಿ

ಇ-ಆಡಳಿತ ಕೇಂದ್ರದಿಂದ ಅನುಮೋದನೆ ಪಡೆದ ನಂತರ, ಎಪಿಐ ಸ್ಪೆಸಿಫಿಕೇಶನ್ ಡಾಕ್ಯುಮೆಂಟ್ ಮತ್ತು ಬಳಕೆದಾರ ರುಜುವಾತುಗಳನ್ನು ಇಲಾಖೆಗೆ ಒದಗಿಸಲಾಗುತ್ತದೆ.


ಎಪಿಐ ಏಕೀಕರಣ

ಇಲಾಖೆಗಳು ತಮ್ಮ ಅಪ್ಲಿಕೇಶನ್‌ನಲ್ಲಿ ಎಪಿಐಗಳನ್ನು ಸಂಯೋಜಿಸುವ ಅಗತ್ಯವಿರುತ್ತದೆ.


ಅಪ್ಲಿಕೇಶನ್ ಪರೀಕ್ಷೆ(ಟೆಸ್ಟಿಂಗ್‌)

ಸಂಯೋಜನೆ / ಅಭಿವೃದ್ಧಿ ಪ್ರಕ್ರಿಯೆಯ ಪೂರ್ಣಗೊಂಡ ನಂತರ ಪರೀಕ್ಷಾರ್ಥ ಯುಆರ್‌ಎಲ್‌ ಬಳಸಿ ಅಪ್ಲಿಕೇಶನ್ ಅನ್ನು ಪರೀಕ್ಷಿಸಲಾಗುತ್ತದೆ.


ಪ್ರೊಡಕ್ಷನ್‌ಗೆ ಸೇರಿಸುವುದು

ಅಪ್ಲಿಕೇಶನ್ ಪರೀಕ್ಷೆ(ಟೆಸ್ಟಿಂಗ್‌)ಯಶಸ್ವಿಯಾಗಿ ಪೂರ್ಣಗೊಂಡ ನಂತರ ಇ-ಆಡಳಿತ ಕೇಂದ್ರ ಪ್ರೋಡಕ್ಷನ್‌ಗೆ ಇಲಾಖೆಗೆ ಅನುಮೋದನೆ ನೀಡುತ್ತದೆ.

 

ಆನ್-ಬೋರ್ಡ್ ಇಲಾಖೆಗಳ ಸಂಖ್ಯೆ:

ಪ್ರಿ-ಪ್ರೋಡ್ಯೂಕ್ಷನ್‌ಲ್ಲಿರುವ ಇಲಾಖೆಗಳು 

 ಪ್ರೋಡಕ್ಷನ್‌ನಲ್ಲಿರುವ ಇಲಾಖೆಗಳು 

 ಇ-ಆಡಳಿತ ಡಿಜಿಲಾಕರ್ ಕೇಂದ್ರ

 ಬಿಬಿಎಂಪಿ

 ಕೆಎಂಎಫ್

ಶಾಲಾ ವಿದ್ಯಾರ್ಥಿವೇತನ ಪೋರ್ಟಲ್

 

ಬೆಂಗಳೂರು ಒನ್

 

ಸೇವಾ ಸಿಂಧು ಯೋಜನೆ - ಇಡಿಸಿಎಸ್ ಇಲಾಖೆ

 

ಬಿಡಿಎ

 

ಪೊಲೀಸ್ ಇಲಾಖೆ

 

ಎ.ಜೆಎಸ್.ಕೆ.

 

ಇ -ಅಟ್ಟೆಸ್ಟೇಷನ್

 

ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆ

 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

 

ಕೃಷಿ ಇಲಾಖೆ

 

ವಿದ್ಯುತ್ ಪರಿವೀಕ್ಷಣಾ ಇಲಾಖೆ

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

 

ಪಿಎಂ-ಕಿಸಾನ್

 

ಕಾರ್ಮಿಕ ಇಲಾಖೆ

 

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ.

 

ಕರ್ನಾಟಕ ಗೃಹ ಮಂಡಳಿ.

 

ಕೆಐಎಡಿಬಿ - ದೊಡ್ಡ ಮತ್ತು ಬೃಹತ್‌ ಕೈಗಾರಿಕೆಗಳ ನಿರ್ದೇಶನಾಲಯ

 

ಕೆಎಂಡಿಎಸ್

 

ಇ-ಆಫೀಸ್

 

ಕೃಷಿ ಮಾರಾಟ ಇಲಾಖೆ

 

ಮುದ್ರಾಂಕ ಮತ್ತು ನೋಂದಣಿ ಇಲಾಖೆ

 

ಆದಾಯ -ಬಿಎಂಸಿ

 

ಬೆಸ್ಕಾಮ್

 

ಅಬಕಾರಿ ಇಲಾಖೆ

 

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

 

ಎಸ್‌ಎಸ್‌ಪಿ-ಪೋಸ್ಟ್‌ಮ್ಯಾಟ್ರಿಕ್ ಪ್ರಾಜೆಕ್ಟ್ (ಡಿಬಿಟಿ)

 

 

 

ಇತ್ತೀಚಿನ ನವೀಕರಣ​ : 13-03-2020 11:15 AM ಅನುಮೋದಕರು: Admin