ನೇಮ್ ಸ್ಕೇಪ್

 

ಪರಿಚಯ  

   ಸಿಇಜಿ ಕೆಆರ್‌ಡಿಎಚ್‌ ಪ್ರಾಜೆಕ್ಟ್‌ ಮೂಲಕ ನೇಮ್‌ಸ್ಕೇಪ್‌ ಪರಿಕರವನ್ನು ಜಾರಿಗೆತಂದಿದೆ. ಅದು ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಹೆಸರುಗಳ ಹೋಲಿಕೆ ಮಾಡಿ ನಿಖರವಾದ ಅಂಕ ನೀಡುತ್ತದೆ. ಇದನ್ನು ವಿಂಡೋಸ್ಸ್‌ ಫ್ಲಾಟ್‌ಫಾರ್ಮನಲ್ಲಿರುವ ಸ್ಟೇಟ್‌ ಡಾಟಾ ಸೆಂಟರ್‌ (ಎಸ್‌ ಡಿ ಸಿ) ನಲ್ಲಿ ನಿಯೋಜಿಸಲಾಗಿದೆ. ಇದನ್ನು ಸಾರ್ವಜನಿಕ ಮತ್ತು ಖಾಸಗಿ ನೆಟವರ್ಕಗಳಲ್ಲಿ ಬಳಕೆ ಮಾಡಬಹುದು. 

 

ಸೀಡಿಂಗ್‌ ಮಾಡುವ ಉದ್ದೇಶಕ್ಕಾಗಿ, ಅವನ / ಅವಳ ಆಧಾರ್‌ನಲ್ಲಿರುವ ಫಲಾನುಭವಿಯ ಹೆಸರನ್ನು ಅವನ / ಅವಳ ಹೆಸರಿನೊಂದಿಗೆ ಫಲಾನುಭವಿಗಳ ಪಟ್ಟಿಯಲ್ಲಿ ಹೋಲಿಸಲು ನೇಮ್‌ಸ್ಕೇಪ್ ಪರಿಕರವನ್ನು ಬಳಸಲಾಗುತ್ತದೆ. ಆದ್ದರಿಂದ ಪ್ರಾಥಮಿಕ ಹೆಸರು ಫಲಾನುಭವಿಗಳ ಪಟ್ಟಿಯ ಪ್ರಕಾರ ಫಲಾನುಭವಿಗಳ ಹೆಸರಾಗಿರುತ್ತದೆ ಮತ್ತು ವ್ಯಕ್ತಿಯ / ಅವನ ಆಧಾರ್‌ನಲ್ಲಿರುವ ಹೆಸರನ್ನು ದ್ವಿತೀಯ ಹೆಸರಾಗಿ ಪರಿಗಣಿಸಲಾಗುತ್ತದೆ

 

ನೇಮ್‌ಸ್ಕೇಪ್‌ ತಂತ್ರಾಂಶವು ಪದದಿಂದ ಪದಕ್ಕೆ ಹೋಲಿಕೆ, ಬೃಹತ್ ಪದಗಳಿಂದ ಪದಗಳ ಹೋಲಿಕೆ ಇಂಗ್ಲಿಷ್‌ನಿಂದ ಕನ್ನಡ ಹೆಸರುಗಳು ಮತ್ತು ಪ್ರತಿಯಾಗಿ ಹೋಲಿಕೆ ಮಾಡುವ ಕಾರ್ಯಗಳನ್ನು ಒಳಗೊಂಡಿದೆ.

 

 ಈ ವೇದಿಕೆಯು ದ್ವಿಮುಖ ಇಂಟರ್‌ಫೇಸ್ಸ್‌ನ್ನು ಒದಗಿಸುತ್ತದೆ.

  1. ಬ್ರೌಸರ್ ಆಧಾರಿತ ಅಪ್ಲಿಕೇಶನ್.
  2. ವೆಬ್ ಆಧಾರಿತ ಸೇವೆಗಳು.

 

ವೇದಿಕೆಯು ಮೂರು ಬಗೆಯ ಸೇವೆಗಳನ್ನು ಒದಗಿಸುತ್ತದೆ.

1.ಎರಡು ಹೆಸರುಗಳ ಹೋಲಿಕೆ: ಎರಡು ಹೆಸರುಗಳ ಹೋಲಿಕೆಯ ನಂತರ ದೋಷವಿದ್ದಲ್ಲಿ ಸೊನ್ನೆಯಿಂದ ನೂರು ಅಥವಾ ನಕಾರಾತ್ಮಕ ಅಂಕವನ್ನು ನೀಡುತ್ತದೆ.  

2. ಪಥದ ಮೂಲಕ ಎರಡು ಫೈಲ್‌ಗಳ ಹೋಲಿಕೆ:ಹೆಸರುಗಳ ಪಟ್ಟಿಯನ್ನು ಹೊಂದಿರುವ ಎರಡು ಫೈಲ್‌ಗಳನ್ನು ಹೋಲಿಸಬಹುದು. ಮತ್ತು ಈ ಫೈಲ್‌ಗಳನ್ನು ನೇಮ್‌ಸ್ಕೇಪ್ ಪ್ಲಾಟ್‌ಫಾರ್ಮ್ ನಿಯೋಜಿಸಲಾಗಿರುವ ಅಪ್ಲಿಕೇಶನ್ ಸರ್ವರ್‌ನಲ್ಲಿ ಸಂಗ್ರಹಿಸಬಹುದು.  

3.ಆಬ್ಜೆಕ್ಟ್ ಮೂಲಕ ಎರಡು ಫೈಲ್‌ಗಳ ಹೋಲಿಕೆ:ವೆಬ್ ಎಪಿಐ ವಿಧಾನಕ್ಕೆ ಆಬ್ಜೆಕ್ಟ್ ಮೂಲಕ ಫೈಲ್ ಅನ್ನು ಬೈಟ್ ಅರೇನಲ್ಲಿ ಕಳುಹಿಸುವ ಮೂಲಕ ನಾವು ಫೈಲ್‌ಗಳನ್ನು ಹೋಲಿಸಬಹುದು. 

 

ಸಿಇಜಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಹೆಸರುಗಳ ಹೋಲಿಕೆಗಾಗಿ ಜಿಐಎಸ್ಟಿ ನೇಮ್ಸ್ಕೇಪ್ ಉಪಕರಣವನ್ನು ಬಳಸುತ್ತದೆ. ನೇಮ್‌ಸ್ಕೇಪ್ ಪರಿಕರವು ಒಂದು ಅತ್ಯಾಧುನಿಕ ಸಾಧನವಾಗಿದ್ದು, ಇದು ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ನೋಟ-ಸಮಾನತೆ ಮತ್ತು ಧ್ವನಿ-ಸಮಾನತೆಗಳನ್ನು ಶೋಧಿಸಿ ಗುರುತ್ತಿಸುತ್ತದೆ.ನೇಮ್‌ಸ್ಕೇಪ್ ಪರಿಕರವು ಪರಿಶೀಲನೆಗೆ ಸಹಾಯ ಮಾಡುವ ಹೋಲಿಕೆಯಾಗಿದೆ ಮತ್ತು ಸಂಭವನೀಯ ದೋಷಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.  ನೇಮ್‌ಸ್ಕೇಪ್‌ ಪರಿಕರವು ಸಮರಕ್ಷಣೆ, ಡಿಬಿಟಿ,ರಾಜ್ಯವಿದ್ಯಾರ್ಥಿವೇತನ ಪೋರ್ಟಲ್, ಫಲಾನುಭವಿ ನಿರ್ವಹಣಾ ವ್ಯವಸ್ಥೆಗಳು ಶಕ್ತಗೊಂಡ ಅಪ್ಲಿಕೇಶನ್ ಇತ್ಯಾದಿಗಳಂತಹ ಸಮಯ ಪರಿಮಿತಿ ನಿರ್ಣಾಯಕ ಅಪ್ಲಿಕೇಶನ್‌ನಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

 

ಆನ್‌ಬೋರ್ಡಿಂಗ್ ಪ್ರಕ್ರಿಯೆ

ನೇಮ್‌ಸ್ಕೇಪ್‌ ಸೇವೆಗಳನ್ನು ಪಡೆಯಲು ಇಲಾಖೆಗಳು ಈ ಕೆಳಗಿನ ವಿಧಾನಗಳನ್ನು ಅನುಸರಿಸಬೇಕು:

ಸೇವೆಗಳನ್ನು ಪಡೆಯಲು ಸಿಇಜಿ ಸಿಇಒ ಗೆ ಮೆನವಿ ಪತ್ರವನ್ನು ರವಾನಿಸಬೇಕು.

ಅನುಮೋದನೆಯ ಮೇರೆಗೆ, ನಿಯಮಗಳು ಮತ್ತು ನೀತಿಗಳೊಂದಿಗೆ ನೇಮ್‌ಸ್ಕೇಪ್ ತಾಂತ್ರಿಕ ಡಾಕ್ಯುಮೆಂಟ್ ಅನ್ನು ಹಂಚಿಕೊಳ್ಳಲಾಗುತ್ತದೆ.

ಸಿಇಜಿ ಇಲಾಖೆಯ ಅಪ್ಲಿಕೇಶನ್ ಸರ್ವರ್ ಮೂಲಕ ನೇಮ್ಸ್ಕೇಪ್ ಸೇವೆಗಳನ್ನು ಪ್ರವೇಶಿಸಲು ಫೈರ್‌ವಾಲ್ ವಿನಂತಿಯನ್ನು ರವಾನಿಸುತ್ತದೆ.

 

ಆನ್-ಬೋರ್ಡ್ ಆದ ಇಲಾಖೆಗಳ ಸಂಖ್ಯೆ 

ಪ್ರಸ್ತುತ ನೇಮ್‌ಸ್ಕೇಪ್‌ ಪರಿಕರವನ್ನು ಬಳಸುತ್ತಿರುವ ಇಲಾಖೆಗಳು

ಪಿಎಂ ಕಿಸಾನ್

ಸಮರಕ್ಷನ್

ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್

ಫಲಾನುಭವಿ ನಿರ್ವಹಣಾ ವ್ಯವಸ್ಥೆ

ನ್ಯಾಷನಲ್ ಸೆಕ್ಯುರಿಟೀಸ್ ರೆಪೊಸಿಟರಿ ಲಿಮಿಟೆಡ್., (ಎನ್‌ಎಸ್‌ಡಿಎಲ್)

 

 

 

 

ಇತ್ತೀಚಿನ ನವೀಕರಣ​ : 13-03-2020 11:14 AM ಅನುಮೋದಕರು: Admin