ಅಭಿಪ್ರಾಯ / ಸಲಹೆಗಳು

ಎಯುಎ ಕೆಯುಎ ದೃಢೀಕರಣ ಸೇವೆಗಳು

ದೃಢೀಕರಣ

 

      ಆಧಾರ್ ದೃಢೀಕರಣ ಎಂದರೆ, ಆಧಾರ್ ಸಂಖ್ಯೆ ಜೊತೆಗೆ ಆಧಾರ್ ಹೊಂದಿರುವವರ ವೈಯಕ್ತಿಕ ಗುರುತಿನ ದತಾಂಶಗಳಾದ ಬಯೋಮೆಟ್ರಿಕ್/ ಡೆಮೊಗ್ರಫಿಕ್‍ ಮಾಹಿತಿಯ ಹೊಂದಾಣಿಕೆಗಾಗಿ ಯುಐಡಿ (ಸೆಂಟ್ರಲ್ ಐಡೆಂಟಿಟಿಎಸ್ ಡೇಟಾ ರೆಪೊಸಿಟರಿ-ಸಿಐಡಿಆರ್)ಗೆ ಸಲ್ಲಿಸಲಾಗುತ್ತದೆ. ಯುಐಡಿಎಐಯು ತನ್ನಲ್ಲಿ ಲಭ್ಯವಿರ ಮಾಹಿತಯೊಂದಿಗೆ ವ್ಯಕ್ತಿಯ ಮಾಹಿತಿಯನ್ನು ಹೋಲಿಕೆ ಮಾಡುವ ಮೂಲಕ ಆಧಾರ್‍ ಹೊಂದಿರುವವರ ಗುರುತ್ವವನ್ನು ಖಚಿಪಡಿಸುತ್ತದೆ. ದೃಢೀಕರಣದ ಪ್ರಮುಖ ಉದ್ದೇಶವೆಂದರೆ ಆಧಾರ್‍ ಹೊಂದಿರುವವರ ನಾಗರೀಕ ಗುರುತ್ವವನ್ನು ಸಾಬೀತು ಪಡೆಸುವುದು ಆಗಿರುತ್ತದೆ. ಗುರುತ್ವವು ದೃಢೀಕರಣಗೊಂಡ ಫಲಾನುಭವಿ ಸೇವೆಗಳ ಫಲಾನುಭವವನ್ನು ಪಡೆದುಕೊಳ‍್ಳಲು ಮತ್ತು ಸೇವಾದಾತರು ಸೌಲಭ್ಯವನ್ನು ನೀಡುವುದಕ್ಕೆ  ಅನುಕೂಲವಾಗುತ್ತದೆ.

 

 ದೃಢೀಕರಣದ ಪ್ರಕಾರಗಳು:

 

  1. ಬಯೋಮೆಟ್ರಿಕ್ ಹೋಲಿಕೆ (ಬೆರಳಚ್ಚು ಮತ್ತು / ಅಥವಾ ಐರಿಸ್ ದೃಢೀಕರಣ)
  2. ಡೆಮೊಗ್ರಫಿಕ್‍ ಹೋಲಿಕೆ
  3. ಒನ್-ಟೈಮ್-ಪಿನ್ (OTP) ನಂತಹ ಹೆಚ್ಚುವರಿ ಪ್ರಕಾರ

 

 -ಕೆವೈಸಿ ಸೇವೆ

 

 ಇದು ಆಧಾರ್ ಸಂಖ್ಯೆಯನ್ನು ಹೊಂದಿರುವ ನಾಗರೀಕರಿಗೆ ತಮ್ಮ ಡೆಮೊಗ್ರಫಿಕ್‍ ಮಾಹಿತಿ ಮತ್ತು ಛಾಯಾಚಿತ್ರವನ್ನು ಯುಐಡಿಎಐನ ಪಾಲುದಾರ ಸಂಸ‍್ಥೆಯೊಂದಿಗೆ ಸುರಕ್ಷಿತ, ಪರೀಕ್ಷಾತ್ಮಕ ರೀತಿಯಲ್ಲಿ ಅನುಮತಿಯೊಂದಿಗೆ ನಾಗರೀಕರ ಗಮನಕ್ಕೆ ಇರುವಂತೆ ಆನ್‍ಲೈನ್‍ ನಲ್ಲಿ ಹಂಚಿಕೊಳ್ಳಲು ಅನುವು ಮಾಡಿಕೊಡಲಾಗುತ್ತದೆ. ಬಯೋಮೆಟ್ರಿಕ್ ದೃಡೀಕರಣ ಅಥವಾ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ದೃಢೀಕರಣದ ಮೂಲಕ ನಾಗರೀಕರು ಒಪ್ಪಿಗೆಯನ್ನು ನೀಡಬಹುದು.

ಆಧಾರ್ ಹೊಂದಿರುವವರ ಡೆಮೊಗ್ರಫಿಕ್‍ ಮಾಹಿತಿ ಅಂದರೆ, ಪ್ರಸ್ತುತ ನಾಗರೀಕನೊಂದಿಗೆ ಲಭ್ಯವಿರುವ  ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ದೂರವಾಣಿ ಸಂಖ್ಯೆ ಮತ್ತು ಇಮೇಲ್ (ಲಭ್ಯವಿದ್ದಲ್ಲಿ) ಮತ್ತು ಛಾಯಾಚಿತ್ರ ಇ-ಕೆವೈಸಿ ಸೇವೆಯ ಮೂಲಕ ಹಂಚಿಕೊಳ‍್ಳಲಾಗಿದೆ.

 

 ಕಾರ್ಯವಿಧಾನ

 

ಯುಐಡಿಎಐನ ಮಾರ್ಗಸೂಚಿಗಳ ಪ್ರಕಾರ, ದೃಢೀಕರಣ ಮತ್ತು ಇ-ಕೆವೈಸಿ ಸೇವೆಗಳನ್ನು ಬಳಕೆ ಮಾಡಿಕೊಳ್ಳಲು ಇಲಾಖೆಗಳು ಯುಐಡಿಎಐನೊಂದಿಗೆ ವಿನಂತಿಸುವ ಘಟಕಗಳಾಗಿರುತ್ತವೆ. ಆದ್ದರಿಂದ ಇಲಾಖೆಗಳಿಗೆ ಪ್ರಾರಂಭದಿಂದಲೂ ಕೆಆರ್‌ಡಿಹೆಚ್‌ ಸಹಾಯ ಮಾಡುತ್ತಿದೆ. ಇದಕ್ಕಾಗಿ ಮೂರು ವಾರಗಳು ಎಂದು ನಿಗದಿ ಮಾಡಲಾಗಿರುತ್ತದೆ , ಆದರೆ ಇಲಾಖೆಗಳ ಮನವಿಗಳ ಪ್ರಮಾಣಕ್ಕನುಗುಣವಾಗಿ ನಿಗದಿತ ಸಮಯವು ಒಂದೆರಡು ತಿಂಗಳಾಗುವ ಸಾಧ್ಯತೆಯೂ ಇದೆ.

 

 ದೃಢೀಕರಣ ಮತ್ತು ಇ-ಕೆವೈಸಿ ಸೇವೆಗಳ ವಿತರಣೆಗೆ ಮತ್ತು ಸಂಯೋಜನೆಗೆ ರಾಜ್ಯ ಸರ್ಕಾರದ ಇಲಾಖೆಗಳು ತಂತ್ರಾಂಶವೊಂದನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ಈ ತಂತ್ರಾಂಶವನ್ನು ಇಲಾಖೆಗಳು ವಿವಿಧ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿಕೊಳ್ಳ ಬಹುದಾದರೂ, ಯುಐಡಿಎಐ ಮುಕ್ತ ತಂತ್ರಾಂಜ್ಞಾವನ್ನು ಬಳಸಿಕೊಂಡು ತಂತ್ರಾಂಶವನ್ನು ಅಭಿವೃದ್ಧಿ ಪಡಿಸುತ್ತದೆ.  ಇಲಾಖೆಗಳ ತಾಂತ್ರಿಕ ಸಿಬ್ಬಂದಿಯೂ ಇಲಾಖೆಗಳು ಬಳಕೆ ಮಾಡುವ ತಂತ್ರಜ್ಞಾನದಲ್ಲಿ ಪರಿನಿತಿಯನ್ನು ಹೊಂದಿರಬೇಕು ಮತ್ತು ಆವರ ಕಾರ್ಯವ್ಯಾಪ್ತಿಯ ಇಲಾಖೆಗೆ ಮಾತ್ರ ಸಿಮೀತವಾಗಿರುತ್ತದೆ.

 

ಇ-ಆಡಳಿತ ಕೇಂದ್ರವು ಆಧಾರ ಸಂಬಂಧಿತ ಸೇವೆಗಳಿಗೆ ನೋಡಲ್‌ ಎಜೆನ್ಸಿಯಾಗಿರುತ್ತದೆ  ಮತ್ತು ಆಧಾರ್‌ ಸಂಬಂಧಿತ ಸೇವೆಗಳನ್ನು ಸೇವೆಗಳನ್ನು ಬಳಕೆ ಮಾಡುವ ಇಲಾಖೆಗಳ ತಾಂತ್ರಿಕ ಸಿಬ್ಬಂದಿಗಳಿಗೆ ಆದಿಯಿಂದ ಅಂತ್ಯದ ವರೆ ತಾಂತ್ರಿಕ ನೆರವು ನೀಡುವ ಉದ್ದೇಶವನ್ನು ಹೊಂದಿರುತ್ತದೆ. ಅದರಂತೆಯೆ, ಎಯುಎ/ಕೆಯುಎನ ಆನ್‌ಬೋರ್ಡಿಂಗ್‌ ಪ್ರಕ್ರಿಯದ ಪ್ರಾರಂಭದಿಂದ ಇಲಾಖೆಗಳಿಗೆ ಸಹಾಯ ನೀಡಲು ಸೇವಾದಾರರನ್ನು ಇ-ಆಡಳಿತ ಕೇಂದ್ರವು ನೇಮಕ ಮಾಡಿಕೊಳ್ಳುತ್ತದೆ. ರಾಜ್ಯದ ಇಲಾಖೆಗಳಿಗೆ ನಿರ್ವಹಣಾ ಸೇವಾದಾರಿಗೆ ಇ-ಆಡಳಿತ ಕೇಂದ್ರವು ಎಯುಎ/ಕೆಯುಎ ಸೇವಾ ಪೂರೈಕೆದಾರ ಸಂಸ್ಥೆಯಾಗುರುತ್ತದೆ. ಇ-ಆಡಳಿತ ಕೇಂದ್ರದ ಎಯುಎ/ಕೆಯುಎ ಅಪ್ಲಿಕೇಷನ್‌, ಅಸ್ತಿತ್ವದಲ್ಲಿರುವ ಎಎಸ್‌ಎ/ಕೆಎಸ್‌ಎಗಳನ್ನು ನಿರ್ವಹಿಸುವುದೆ ಸೇವಾದಾರರ ಪ್ರಮುಖ ಉದ್ದೇಶವಾಗಿರುತ್ತದೆ.

 

ಆನ್-ಬೋರ್ಡಿಂಗ್ ಪ್ರಕ್ರಿಯೆ:

 

1.ವಿಚಾರಣೆ ಸಲ್ಲಿಕೆ

 

https://authportal.uidai.gov.in, ಗೆ ಲಾಗಿನ್‌ ಆಗುವ ಮೂಲಕ ಸಂಸ್ಥೆಯ ಹೆಸರು, ನೋಡಲ್ ವ್ಯಕ್ತಿಯ ಹೆಸರು, ಫೋನ್, ಇಮೇಲ್, ಉದ್ದೇಶಿತ ವ್ಯಾಪಾರ ವ್ಯಾಪ್ತಿ ಮುಂತಾದ ವಿವರಗಳು ಸಲ್ಲಿಸುವುದು.

 

2.ವಿಚಾರಣೆ ಸ್ವೀಕಾರ

 

ಮೌಲ್ಯಮಾಪನದ ನಂತರ ವಿಚಾರಣೆಯನ್ನು ಸ್ವೀಕರಿಸಲಾಗುತ್ತದೆ / ತಿರಸ್ಕರಿಸಲಾಗುತ್ತದೆ. 

 

3.ಅಪ್ಲಿಕೇಷನ್ ಸಲ್ಲಿಕೆ

 

ಸಂಸ್ಥೆ, ನೋಡಲ್ ಸಂಪರ್ಕ, ನಿರ್ವಹಣಾ ಸಂಪರ್ಕ, ತಾಂತ್ರಿಕ ಸಂಪರ್ಕ, ಎಎಸ್ಎ ನಿಶ್ಚಿಯತೆ, ಮಾಹಿತಿಯ ವ್ಯಾಪ್ತಿ, ಸಿದ್ಧತೆಯ ಚಟುವಟಿಕೆ, ದಾಖಲೆಗಳನ್ನು ಅಪ್‌ಲೋಡ್ ಮಾಡುವುದು, ಎಲ್ಲಾ ದಾಖಲೆಗಳ ಭೌತಿಕ ನಕಲು ಪ್ರತಿಗಳನ್ನು ಕಳುಹಿಸಿ, ಒಪ್ಪಂದಕ್ಕಾಗಿ 2 ಖಾಲಿ ಸ್ಟಾಂಪ್ ಪೇಪರ್‌ಗಳನ್ನು ಸಲ್ಲಿಸುವುದು.

 

4.ಅಪ್ಲಿಕೇಶನ್ ಅನುಮೋದನೆ

 

ಒದಿಗಿಸುರುವ ಮಾಹಿತಿ ಮತ್ತು ದಾಖಲೆಗಳು ತೃಪ್ತಿಕರವೆಂದು ಕಂಡುಬಂದಲ್ಲಿ ಮತ್ತು ದಸ್ತಾವೇಜನ್ನು ಪೂರ್ಣಗೊಂಡರೆ ಯುಐಡಿಎಐ ಅಪ್ಲಿಕೇಶನ್ ಅನ್ನು ಅನುಮೋದಿಸುತ್ತದೆ. ಹೆಚ್ಚುವರಿ ಮಾಹಿತಿ ಅಗತ್ಯವಿದ್ದರೆ ಯುಐಡಿಎಐ ಒಪ್ಪಂದವನ್ನು ಸಹಿಗಾಗಿ ಹಿಂದಿರುಗಿ ಕಳುಹಿಸುತ್ತದೆ.

 

5.ಅಧಿಕೃತ ಸಹಿ

 

ಸಹಿ ಮಾಡಿದ ಒಪ್ಪಂದವನ್ನು ಯುಐಡಿಎಐಗೆ ಸಲ್ಲಿಸಲಾಗುತ್ತದೆ.

 

6.ಪ್ರಿ-ಪ್ರೊಡಕ್ಷನ್ ಪ್ರವೇಶ

 

ಪ್ರಿ-ಪ್ರೊಡಕ್ಷನ್‌ ಪ್ರಕ್ರಿಯೆಗೆ ಯುಐಡಿಎಐ ಪ್ರವೇಶವನ್ನು ಒದಗಿಸುತ್ತದೆ.

 


7.ಆದಿಯಿದ ಅಂತ್ಯದವರೆಗೂ ಪರೀಕ್ಷೆ

 

100 ಪರೀಕ್ಷಾ ವಹಿವಾಟುಗಳನ್ನು ಇಲಾಖೆ ನಿರ್ವಹಿಸುತ್ತದೆ ಮತ್ತು ಯುಐಡಿಎಐಗೆ ಲೈವ್ ಮತ್ತು ಆಡಿಟ್ ಅನುಸರಣೆ ಪರಿಶೀಲನಾಪಟ್ಟಿ ಸಲ್ಲಿಸುವುದು.

 
8.ಪ್ರೊಡಕ್ಷನ್ ಪ್ರವೇಶ

 

ಯುಐಡಿಎಐ ಗೋ ಲೈವ್ ಮತ್ತು ಆಡಿಟ್ ಅನುಸರಣೆ ಪರಿಶೀಲನಾಪಟ್ಟಿ ವಿಮರ್ಶಿಸುತ್ತದೆ ಮತ್ತು ಪರೀಕ್ಷಾ ವಹಿವಾಟುಗಳನ್ನು ಪರಿಶೀಲಿಸುತ್ತದೆ. ಎಲ್ಲವು ಉತ್ತಮವಾಗಿದ್ದರೆ ಪ್ರೊಡಕ್ಷನ್  ಪ್ರವೇಶವನ್ನು ನೀಡಲಾಗುತ್ತದೆ.

 

 

ದೃಢೀಕರಣ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ದಯವಿಟ್ಟು ಕ್ಲಿಕ್ ಮಾಡಿ


https://ipgrs.karnataka.gov.in/ 

 

ಅಥವಾ ಮೇಲ್ ಮಾಡಿ


Mail To - Techsup1.krdh@karnataka.gov.in
Ph.No  - 8277802855/54

 

 ಆನ್-ಬೋರ್ಡ್ ಇಲಾಖೆಗಳ ಸಂಖ್ಯೆ:

 

 

ಡಿಬಿಟಿ ಮೂಲಕ ಇಲಾಖೆಗಳು KRDH ಮೂಲಕ ಇಲಾಖೆಗಳು
ಮಧ್ಯಾಹ್ನದ ಊಟದ ಮರುಪಾವತಿ (DBT)
ವಿಶ್ವಕರ್ಮ ಸಮುದಾಯಗಳು (DBT)
ನಿಜಶರಣ ಅಂಬಿಗರ ಚೌಡಯ್ಯ (ಡಿಬಿಟಿ)
ಉಪ್ಪಾರ ಅಭಿವೃದ್ಧಿ (ಡಿಬಿಟಿ)
ಸವಿತಾ ಸಮಾಜ ಅಭಿವೃದ್ಧಿ (ಡಿಬಿಟಿ)
ಮಡಿವಾಳ ಮಾಚಿದೇವ ಅಭಿವೃದ್ಧಿ (DBT)
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ(ಡಿಬಿಟಿ)
ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳು (DBT)
ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ (ಡಿಬಿಟಿ)
ಕೈಮಗ್ಗ ಮತ್ತು ಜವಳಿ ಇಲಾಖೆ
ಕಾರ್ಮಿಕ ಇಲಾಖೆ
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (DBT)
ಕುಟುಂಬ ಡಿಬಿ ಯೋಜನೆಯ ಅಡಿಯಲ್ಲಿ (ಡಿಬಿಟಿ ಆಧಾರ್‌ ಆಧಾರಿತ)
ಸಮಾಜ ಕಲ್ಯಾಣ ಇಲಾಖೆ (ಡಿಬಿಟಿ)
DBT ಆಧಾರ್ ಮೂಲಕ BBMP ಸೇವೆ
covid19 scheme to BPL-DSSP(DBT)
Covid19 Special Package For Education(DBT)
ತೋಟಗಾರಿಕೆ(ಹಣ್ಣುಗಳು)
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ (DBT)
ಸಕಾಲ ಮಿಷನ್ (DBT)
DBT ಮೂಲಕ LIDKAR
ವಿದ್ಯಾರ್ಥಿಗಳ ನೋಂದಣಿ (ಹೈ EDU-DBT)
RGUHS (ವೈದ್ಯಕೀಯ ಶಿಕ್ಷಣ)
ಕೃಷಿ ಪ್ರಶಸ್ತಿ (DBT)
ಇಜನ್ಮಾ- ಅರ್ಥಶಾಸ್ತ್ರ
ಡಿಬಿಟಿ ಮೂಲಕ ನಾಡಕಚೇರಿ
ತಾಂಡಾ ಅಭಿವೃದ್ಧಿ ನಿಗಮ (ಡಿಬಿಟಿ)
KSWDCL-ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (DBT)
RDPR
KVLDCL-ವೀರಶೈವ-DBT
ಮೀನುಗಾರಿಕೆ ಇಲಾಖೆ
ಮಕ್ಕಳ ರಕ್ಷಣೆಯ ನಿರ್ದೇಶನ
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ
ಡಿ.ಬಿ.ಟಿ.
ಸಿಂಗಲ್‌ ಸೈನ್‌ ಆನ್‌
ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್‌ (SAST)
ಬ್ಲಾಕ್‌ಚೈನ್‌ ಆಫ್‌ ಕಾವೇರಿ
ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ(RGRHCL)
ಭೂಮಿ ಮಾನಿಟರಿಂಗ್‌ ಸೆಲ್‌
ಫ್ರುಇಟ್ಸ್
ಎಸ್ಎಸ್ಪಿ
ಮೊಬೈಲ್‌ ಒನ್‌
ಇ.ಡಿ.ಸಿ.ಎಸ್‌
ಇ-ದೃಢೀಕರಣ
ಸಿ ಸ್ ಜಿ ಐ ಮ್ ಎ
ಬೆಳೆ ಸಮೀಕ್ಷೆ
ಬಿಎಂಟಿಸಿ
ಆರ್ಯ ವ್ಯಸ್ಯ ಕಮ್ಯೂನಿಟಿ
 
 

 

 

ಇತ್ತೀಚಿನ ನವೀಕರಣ​ : 11-12-2023 04:25 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೆಸಿಡೆಂಟ್ ಡಾಟಾ ಹಬ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080