ಪ್ರಸ್ತುತ ಸ್ಥಿತಿ ಹಾಗೂ ಕೆಆರ್ ಡಿಎಚ್ ಬಳಕೆದಾರರು

ಇದುವರೆಗೆ, ರಾಜ್ಯ ಸರ್ಕಾರದ 19 ಇಲಾಖೆಗಳು (25 ಯೋಜನೆಗಳು) ಅಂದಾಜು 12 ಕೋಟಿ ಫಲಾನುಭವಿಗಳ ಮಾಹಿತಿಯನ್ನು ಕೆಆರ್ ಡಿಎಚ್ ನೊಂದಿಗೆ ಪರಿಷ್ಕರಣೆಗಾಗಿ ವಿನಿಮಯ ಮಾಡಿರುತ್ತಾರೆ. ಕೆಆರ್ ಡಿಎಚ್ ಅನ್ನು ಸರ್ಕಾರಿ ಇಲಾಖೆಗಳು ಹಾಗೂ ನಿವಾಸಿಗಳು ಲಭ್ಯವಿರುವ ಸೇವೆಗಳನ್ನೂ ಪಡೆಯಲು ಬಳಸುತ್ತಾರೆ. ಜೊತೆಗೆ, ಕೆಆರ್ ಡಿಎಚ್ ನ ದೃಢೀಕರಣ, ಇ-ಕೆವೈಸಿ ಹಾಗೂ ಇ-ಸೈನ್ (ಇನ್ನೂ ಪ್ರಗತಿಯಲ್ಲಿದೆ) ಸೇವೆಗಳನ್ನು ವ್ಯಕ್ತಿಯೊಬ್ಬರನ್ನು ದೃಢೀಕರಿಸಲು (ಸರ್ಕಾರಿ ಅಥವಾ ಸರ್ಕಾರೇತರ) ಬಳಸಬಹುದಿರುತ್ತದೆ.

ಅನ್ವಯಿಕೆಗಳ ಹಾಗೂ ವೆಬ್ ಸೇವೆಗಳ ರೂಪದಲ್ಲಿರುವ ಈ ಕೆಳಕಂಡ ಸೇವೆಗಳನ್ನು ಪ್ರಸ್ತುತ 19 ಇಲಾಖೆಗಳು ತಮ್ಮ 25 ಯೋಜನೆಗಳಿಗೆ ಬಳಸುತ್ತಿವೆ.

 

  1. ಆನ್ ಲೈನ್ ಆಧಾರ್ ಸೀಡಿಂಗ್ ಹಾಗೂ ಬಲ್ಕ್ ಸೀಡಿಂಗ್
  2. ಮಾಹಿತಿ ಶುದ್ಧೀಕರಣ ಸೇವೆಗಳು
  3. ಆಧಾರ್ ಜನಸಂಬಂಧೀ ವೆಬ್ ಸೇವೆಗಳು
  4. ಆಧಾರ್ ದೃಢೀಕರಣ ಸೇವೆಗಳು
  5. ಇಕೆವೈಸಿ ಸೇವೆಗಳು
  6. ಕ್ರಾಸ್-ರೆಫರೆನ್ಸ್ ಸೇವೆಗಳು
  7. ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕರುಗಳಿಗೆ, ವರದಿ ಸಿದ್ಧಪಡಿಸುವಿಕೆ ಮತ್ತು ಡ್ಯಾಷ್ ಬೋರ್ಡು ಲಭ್ಯತೆ.
  8. ಡಿಜಿಟಲ್ ಸೈನಿಂಗ್ (ಇ-ಸೈನ್) ಸೇವೆಗಳು  -  ಇನ್ನೂ ಪ್ರಗತಿಯಲ್ಲಿದೆ.
  9. ಡಿಬಿಟಿ ವ್ಯಾಲಿಡೇಷನ್ ಹಾಗೂ ಲೆಕ್ಕಪತ್ರ ಸೇವೆಗಳು ಇನ್ನೂ ಪ್ರಗತಿಯಲ್ಲಿವೆ.
  10. ಡಿಜಿ-ಲಾಕರ್ ಹಾಗೂ ದತ್ತಾಂಶ ಹಂಚಿಕೆ ಸೇವೆಗಳು ಇನ್ನೂ ಪ್ರಗತಿಯಲ್ಲಿವೆ.

ಇತ್ತೀಚಿನ ನವೀಕರಣ​ : 08-07-2020 02:52 PM ಅನುಮೋದಕರು: Admin