ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಸಿಇಜಿ ಬಗ್ಗೆ

 

ಕರ್ನಾಟಕ ಸರ್ಕಾರವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದ್ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅನುಕರಣೀಯ ಮಾದರಿಯಾಗಿದ್ದು, ರಾಷ್ಟ್ರದಲ್ಲಿ ವಿದ್ಯುನ್ಮಾನ-ಆಡಳಿತದ (ಇ-ಆಡಳಿತ) ಉಪಕ್ರಮಿಕೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಕ್ರಿಯವಾಗಿದೆ. ರಾಜ್ಯದ ಇ-ಆಡಳಿತ ನೀತಿ ಮತ್ತು ತಂತ್ರಗಾರಿಕೆಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲು ಇ-ಆಡಳಿತ ಕೇಂದ್ರವನ್ನು ಸಂಘ-ಸಂಸ್ಥೆಗಳ ನೋಂದಾವಣೆ ಅಧಿನಿಯಮದ ಅಡಿಯಲ್ಲಿ 2006 ರಲ್ಲಿ ಒಂದು ನೋಡಲ್ ಸಂಸ್ಥೆಯಾಗಿ ಸೃಷ್ಟಿಸಲಾಗಿದೆ. ಇದು ರಾಜ್ಯದಲ್ಲಿ ಇ-ಆಡಳಿತ ಮೂಲಸೌಕರ್ಯಗಳ ಮತ್ತು ಮೂಲಭೂತ ಆಡಳಿತ ಸುಧಾರಣೆ ಆಧಾರಿತ ಅನ್ವಯಿಕಗಳನ್ನು ನಿರ್ವಹಿಸುವ ಪಾಲಕ ಸಂಸ್ಥೆಯಾಗಿದೆ. ವಸ್ತುತಃ ಈ ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ– (ಆಡಳಿತ ಸುಧಾರಣೆ – ಇ-ಆಡಳಿತ)) (ಡಿಪಿಎಆರ್- ಆಸು -ಇಆ) ಯ ಅಡಿಯಲ್ಲಿ ಸ್ಥಾಪಿತವಾಗಿದ್ದು, ಅದು ರಾಜ್ಯದ ಮುಖ್ಯಮಂತ್ರಿಗಳಿಗೇ ನೇರವಾಗಿ ಹೊಣೆಯಾಗಿರುವುದು ವಿಶೇಷವಾಗಿದೆ.

 

ಇ-ಆಡಳಿತ ಕೇಂದ್ರವು ಯು.ಐ.ಡಿ.ಎ.ಐ ನೊಂದಿಗೆ ನೋಂದಣಿಯಾಗಿದ್ದು ಕರ್ನಾಟಕದಲ್ಲಿ ಆಧಾರ್‌ ಅನುಷ್ಠಾನ ನೋಡಲ್‌ ಸಂಸ್ಥೆಯಾಗಿದೆ.

ಇ-ಆಡಳಿತ ಕೇಂದ್ರವು ” ಕರ್ನಾಟಕ ನಿವಾಸಿ ದತ್ತಾಂಶ ಕೇಂದ್ರ(ಕೆ.ಆರ್.ಡಿ.ಹೆಚ್‌) ಅನುಷ್ಠಾನಗೊಳಿಸುವ ಮೂಲಕ ವಿವಿಧ ಆಧಾರ್‌ ಸಂಬಂಧಿತ ಮತ್ತು ಇ-ಸೈನ್‌ ಸೇವೆಗಳನ್ನು ರಾಜ್ಯದ ವಿವಿಧ ಇಲಾಖೆಗಳಿಗೆ ಪೂರೈಸುತ್ತಿದೆ. ಕೆ.ಆರ್‌.ಡಿ. ಹೆಚ್‌.  ವಿವಿಧ ಇಲಾಖೆಗಳು ನೀಡುವ ಸೌಲಭ್ಯಗಳು ನೇರವಾಗಿ ಫಲಾನುಭವಿಗಳಿಗೆ ವಿತರಿಸುವ ಪ್ರಕ್ರಿಯೆಗೆ  ಬೆಂಬಲವಾಗಿದೆ. ನಿಖರ ಫಲಾನುಭವಿಗಳನ್ನು ಗುರುತಿಸಿ ನೇರ ಸೌಲಭ್ಯವನ್ನು ಒದಿಸುವುದು.

ಇ-ಆಡಳಿತ ಕೇಂದ್ರವು,  ದೃಢೀಕರಣ ಸೇವಾ ಸಂಸ್ಥೆಯಾಗಿ(ASA) , ಇ-ಕೆ.ವೈ.ಸಿ ಸೇವಾ ಸಂಸ್ಥೆ (KSA) , ಅಂಥೆಂಟಿಕೇಷನ್‌ ಯೂಸರ್‌ ಏಜೆನ್ಸಿ (AUA),  ಇ-ಕೆ.ವೈ.ಸಿ ಯೂಸರ್‌ ಏಜೆನ್ಸಿ (KUA)ಯಾಗಿ ಯು.ಐ.ಡಿ.ಎ.ಐಯೊಂದಿಗೆ ನೋಂದಣಿಯಾಗಿದೆ ಮತ್ತು ಯು.ಐ.ಡಿ.ಎ.ಐ ಸಹಯೋಗದೊಂದಿಗೆ ಆಧಾರ್‌ ಸಂಬಂಧಿ ದೃಢೀಕರಣ ಮತ್ತು ಇ-ಕೆ.ವೈ.ಸಿ ಸೇವೆಗಳನ್ನು ವಿವಿಧ ಗ್ರಾಹಕರು, ಸಹಭಾಗಿಗಳು ಮತ್ತು ಪಾಲುದಾರರಿಗೆ  ಪೂರೈಸುತ್ತಿದೆ.

 

 

ಕರ್ನಾಟಕ ನಿವಾಸಿ ದತ್ತಾಂಶ ಕೇಂದ್ರ

 

ಕರ್ನಾಟಕ ಸರ್ಕಾರದ ಇಲಾಖೆಗಳಿ ಆಧಾರ್‌ ಸಂಬಂಧಿತ ಮತ್ತು ಇ-ಸೈನ್‌ ಸೇವೆಗಳನ್ನು ಒದಿಗಿಸುವ ವೇದಿಕೆಯಾಗಿ ಕೆ.ಆರ್‌. ಡಿ.ಹೆಚ್‌. ಅನ್ನು ರಚಿಸಲಾಗಿದೆ.

 

ದೃಢೀಕರಣ ಸೇವೆಗಳು

 

ಆಧಾರ್‌ ಕಾಯಿದೆ 2016 ರ ಸೆಕ್ಷನ್‌ 7ರ ಪ್ರಕಾರ, ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಸಂಚಿತ ನಿಧಿಯಿಂದ ಸಹಾಯಧನ, ಲಾಭಾಂಶ ಅಥವಾ ಸೇವೆಗಳನ್ನು ಪಡೆದುಕೊಳ್ಳಲು ಷರತ್ತುಗಳನ್ನು ನಿಗಧಿಪಡಿಸಲಾಗಿದೆ.

ಕರ್ನಾಟಕ ಸರ್ಕಾರದಿಂದ ಫಲಾನುಭವಿಗಳು ಅಂಥ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್‌ ದೃಢೀಕರಣಕ್ಕೆ ಒಳಪಡಬೇಕು ಅಥವಾ ಆಧಾರ್‌ ಸಂಖ್ಯೆಯ ಪುರಾವೆಗಳನ್ನು ನೀಡಬೇಕು.

ಫಲಾನುಭವಿಗಳ ಆಧಾರ್‌ ದೃಢೀಕಣ ನಿರ್ವಹಿಸಲು ಇಲಾಖೆಗಳು ಆಧಾರ್‌ ಅಂಥೆಂಟಿಕೇಷನ್‌ ಏಜೆನ್ಸಿ (AUA)ಯಾಗಿರಬೇಕು ಮತ್ತು ಇದಕ್ಕಾಗಿ ಇಲಾಖೆಗಳು ಎ.ಯು.ಎ/ ಎ.ಎಸ್‌.ಎ ಪರವಾನಿಗೆಳಿಗೆ ಯು.ಐ.ಡಿ.ಎ.ಐಗೆ ಅರ್ಜಿ ಸಲ್ಲಿಸಬೇಕು.

ಇ-ಆಡಳಿತ ಕೇಂದ್ರ (ಕೆ.ಆರ್‌.ಡಿ.ಹೆಚ್‌.) ತಂಡವು ಯುಐಡಿಎಐಗೆ ಎಯುಎ / ಎಎಸ್‌ಎ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಇಲಾಖೆಗಳಿಗೆ ಅನುಕೂಲ ಮತ್ತು ಸಹಾಯ ಮಾಡುತ್ತದೆ. ಆಧಾರ್‌ ಅಂಥೆಂಟಿಕೇಷನ್‌ ಸೇವೆಯನ್ನು ಬಳಸಿಕೊಳ್ಳಲು ಬರು ಇಲಾಖೆಗಳಿಗೆ ಮಾರ್ಗದರ್ಶನ ನೀಡುವುದು ಹಾಗೂ ಯು.ಐ.ಡಿ.ಎ.ಐಗೆ ಮತ್ತು ಇಲಾಖೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.

ಒಂದೊಮ್ಮೆ ಎ.ಯು.ಎ/ ಎ.ಎಸ್‌.ಎ ಪರವಾನಿಕೆ ಪಡೆದುಕೊಂಡ ನಂತರ. ಇಲಾಖೆಗಳು ಆಧಾರ್‌ ಅಂಥೆಂಟಿಕೇಷನ್‌ ವಹಿವಾಟು ನಿರ್ವಹಿಸುವಾಗ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಇ-ಆಡಳಿತ ಕೇಂದ್ರ (ಕೆ.ಆರ್‌.ಡಿ.ಹೆಚ್‌.) ತಾಂತ್ರಿಕ ತಂಡವು ಸಹಾಯ ಮಾಡುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕೆ ಅಥವಾ ಯಾವುದೇ ಗೊಂದಲ ನಿರವಾರಣೆಗೆ ಕೆ.ಆರ್‌.ಡಿ.ಹೆಚ್‌. ಸಹಾಯ ತಂಡ(techsup1.krdh@karnataka.gov.in)ಕ್ಕೆ ಇ-ಮೇಲ್‌ ಮಾಡಬಹುದು.

 

ಇ-ಸೈನ್‌ ಸೇವೆಗಳು

 

ಮಾಹಿತಿ ಭದ್ರತಾ ಕಾಯಿದೆ 2000ರ ಪ್ರಕಾರ, ಆಧಾರ್‌ ಸಂಖ್ಯೆಯೊಂದಿಗೆ ದೃಢೀಕರಣಗೊಂಡಿರುವ ಇ-ಸೈನ್‌ ಅನ್ನು ಹಸ್ತಚಾಲಿತ ಸಹಿಯ ಪರ್ಯಾಯವಾಗಿ ಅನುಮೋದಿಸಲಾಗಿದೆ.

ಇ-ಆಡಳಿತ ಕೇಂದ್ರದ  ಕೆಆರ್‌ಡಿಎಚ್ ತಂಡವು ಆಯಾ ಇಲಾಖೆಗಳಿಗೆ ಇ-ಸೈನ್ ಸೇವೆ ಒದಗಿಸಿ, ಬೆಂಬಲವನ್ನು ನೀಡುತ್ತದೆ. ಇ-ಸೈನ್‌ ಸೇವೆಯನ್ನು ಪಡೆದುಕೊಳ್ಳಲು ಬರುವ ಇಲಾಖೆಗಳಿಗೆ ಇ-ಸೈನ್ ಎಪಿಐಯನ್ನು ಇಲಾಖೆಗಳೊಂದಿಗೆ ಸಂಯೋಜಿಸಲು ತಾಂತ್ರಿಕ ಬೆಂಬಲ ನೀಡಲಾಗುತ್ತದೆ.

ಒಂದೊಮ್ಮೆ ಇಲಾಖೆಗಳು ಸಂಯೋಜನೆಗೊಂಡ ನಂತರ, ಇ-ಆಡಳಿತ ಕೇಂದ್ರದ ಕೆ.ಆರ್‌.ಡಿ.ಹೆಚ್‌. ತಂಡವು ನಾಗರೀಕರಿಗೆ ವೆಚ್ಚ ರಹಿತ ಬಳಕೆಗಾಗಿ ಇ-ಸೈನ್‌ ಗಳನ್ನು ಪೂರೈಕೆ ಮಾಡುತ್ತದೆ.

ಹೆಚ್ಚಿನ ಮಾಹಿತಿ ಮತ್ತು ಸಹಾಯಕ್ಕೆ ಅಥವಾ ಯಾವುದೇ ಗೊಂದಲ ನಿರವಾರಣೆಗೆ ಕೆ.ಆರ್‌.ಡಿ.ಹೆಚ್‌. ಸಹಾಯ ತಂಡ(techsup2.krdh@karnataka.gov.in)ಕ್ಕೆ ಇ-ಮೇಲ್‌ ಮಾಡಬಹುದು.

 

ಕೆ.ಆರ್‌.ಡಿ.ಹೆಚ್‌. ಏನು ಕೆಲಸ ಮಾಡುತ್ತದೆ ? 

 

ಎಎಸ್‌ಎ, ಕೆಎಎಸ್‌ ಸೇವೆಗಳ ಭಾಗವಾಗಿರುವ ಕೆ.ಆರ್‌.ಡಿ.ಹೆಚ್‌. ಹೆಬ್ಬಾಳ ಮತ್ತು ಮನೆಸರದಲ್ಲಿರುವ ಯುಐಡಿಎಐ ದತ್ತಾಂಶ ಕೇಂದ್ರಗಳಿಗೆ ಸಂಪರ್ಕ ಹೊಂದಿದೆ ಮತ್ತು ಗರಿಷ್ಠ ಲಭ್ಯತೆಯನ್ನು ಖಚಿತ ಪಡಿಸುತ್ತದೆ. 

ಎಎಸ್‌ಎ/ಕೆಎಸ್‌ಎ ಮೂಲಕ ಎಯುಎ/ಕೆಯುಎ ಸಿಐಡಿಆರ್‌ ಸಂಪರ್ಕಿಸುತ್ತದೆ.

ನೋಂದಾಯಿತ ಎಯುಎ /ಕೆಯುಎನಲ್ಲಿನ ದೃಢೀಕರಣ ಮತ್ತು ಇ-ಕೆವೈಸಿ ಮನವಿಗಳು ಎಎಸ್‌ಎ/ಕೆಎಸ್‌ಎ ಮೂಲಕ ಯುಐಡಿಎಐಗೆ ಸಂಪರ್ಕ ಹೊಂದಿರುತ್ತವೆ.

ರಾಜ್ಯ ಸರ್ಕಾರದ ಇಲಾಖೆಗಳಿಗೆ ಆದಿಯಿಂದ ಅಂತ್ಯದವರೆಗೂ ಎಯುಎ/ಕೆಯುಎಗಳಿಗೆ ಯುಐಡಿಎಐನೊಂದಿಗ ಸಂಯೋಜಿಸಲು ಕೆಆರ್‌ಡಿಹೆಚ್‌ ಸಹಕರಿಸುತ್ತೆ ಹಾಗೂ ಕೆಆರ್‌ಡಿಹೆಚ್‌  ತಾಂತ್ರಿಕ ತಂಡವು ಆಯಾ ಇಲಾಖೆಗಳಿಗೆ ಆನ್‌ಬೋರ್ಡಿಂಗ್‌ ಪ್ರಕ್ರಿಯೆ, ಆಧಾರ್‌ ಸಂಬಂಧಿತ ದೃಢೀಕಣ ಸೇವೆಗಳನ್ನು ಜಾರಿಗೆ ತರಲು ಸಹಾಯ ಮಾಡುತ್ತದೆ.

 

ಕೆ.ಆರ್‌.ಡಿ.ಹೆಚ್‌. ಅವಶ್ಯಕತೆ ಏನು?

 1. ಆದಿಯಿಂದ ಅಂತ್ಯದವರೆಗೂ ಎಯುಎ/ ಕೆಯುಎಗಳಿಗೆ ಯುಐಡಿಎಐನೊಂದಿಗ ಸಂಯೋಜಿಸಲು ಕೆಆರ್‌ಡಿಹೆಚ್‌  ಸಹಕರಿಸುತ್ತೆ
 2. ಇಲಾಖೆಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಎಎಸ್ಎ / ಕೆಎಸ್ಎ ಸೇವೆಗಳನ್ನು ಒದಗಿಸುವುದು.
 3. ದೃಢೀಕರಣ ಸೇವಾ ಪ್ರಕ್ರಿಯೆಯಲ್ಲಿ ಉಂಟಾಗುವ ತಾಂತ್ರಿಕ ಲೋಪದೋಷಗಳನ್ನು ನಿವಾರಿಸಲು ಸಹಕಾರ
 4. ಇಲಾಖೆಗಳ ಅವಶ್ಯಕತೆಗೆ ತಕ್ಕಂತೆ ಜಾವಾ ಮತ್ತು .ನೇಟ್‌/ಸಿ# ಕೋಡ್‌ಗಳ ಮಾದರಿಯನ್ನು ನೀಡುವುದು..

 

ಆನ್‌ ಬೋರ್ಡಿಂಗ್‌ ಪ್ರಕ್ರಿಯೆ

 

ಇಲಾಖೆಯಿಂದ ವಿನಂತಿ: ಸೇವೆಗಳನ್ನು ಅಳವಡಿಸಿಕೊಳ್ಳಲು ಇಲಾಖೆಗಳು ಪತ್ರ / ಮೇಲ್ ಮೂಲಕ ಇ-ಆಡಳಿತ ಕೇಂದ್ರವನ್ನು ಕೋರುವುದು.

ಅನುಮೋದನೆ ಪಡೆಯುವಿಕೆ: ಸಿಇಜಿಯಿಂದ ಅನುಮೋದನೆ ಪಡೆದ ನಂತರ, ಎಪಿಐ ಸ್ಪೆಸಿಫಿಕೇಶನ್ ಡಾಕ್ಯುಮೆಂಟ್ ಮತ್ತು ಬಳಕೆದಾರ ರುಜುವಾತುಗಳನ್ನು ಇಲಾಖೆಗೆ ಒದಗಿಸಲಾಗುತ್ತದೆ.

ಎಪಿಐ ಸ್ಪೆಸಿಫಿಕೇಶನ್‌: ಇಲಾಖೆಗಳು ತಮ್ಮ ಮನವಿಯಲ್ಲಿ ಎಪಿಐಗಳನ್ನು ಸಂಯೋಜಿಸುವ ಅಗತ್ಯವಿದೆ.

ಅಪ್ಲಿಕೇಶನ್ ಪರೀಕ್ಷೆ: ಸ್ಪೆಸಿಫಿಕೇಷನ್‌/ ಡೆವಲಪ್‌ಮೆಂಟ್‌ ಪ್ರಕ್ರಿಯೆಯ ಪೂರ್ಣಗೊಂಡ ನಂತರ ಪರೀಕ್ಷರ್ಥಕ ಯುಆರ್‌ಎಲ್‌ ಬಳಸಿ ಅಪ್ಲಿಕೇಶನ್ ಅನ್ನು ಪರೀಕ್ಷಿಸಬೇಕು.

ಪ್ರೊಡಕ್ಷನ್‌ಗೆ ಅಳವಡಿಕೆ:  ಪರೀಕ್ಷಾರ್ಥ ಪ್ರಕ್ರಿಯೆಗಳು ಯಶಸ್ವಿಗೊಂಡ ನಂತರ, ಸಿಇಜಿಯು ಪ್ರೊಡಕ್ಷನ್‌ಗೆ ಇಲಾಖೆಗೆ ಅನುಮೋದನೆ ನೀಡುತ್ತದೆ.

 

ಸೇವೆಗಳು

 

ಯುಐಡಿಎಐನ ಮಾನದಂಡಗಳ ಅನುಸಾರ ಸಿಐಡಿಆರ್‌ನೊಂದಿಗೆ ಸುರಕ್ಷತ ಸಂಪರ್ಕ ಹೊಂದಿರುವ ಗುತ್ತಿಗೆ ಲೈನ್‌ಗಳಿಗೆ ಎಎಸ್‌ಎ ಏಜೆನ್ಸಿಗಳು ಸಂಪರ್ಕ ಸಾಧಿಸುತ್ತವೆ.ಎಎಸ್‌ಎಗಳು ತಮ್ಮ ಯುಡಿಐಎ ಅನುಸಾರ ನೆಟ್‌ವರ್ಕ್‌ ಸಂಪರ್ಕ ವಿನಂತಿಸುವ ಘಟಕಗಳಿಗೆ (ಎಯುಎ/ಕೆಯುಎ) ಸೇವೆಯಾಗಿ ನೀಡುತ್ತವೆ ಮತ್ತು ಅವುಗಳ ದೃಢೀಕರಣ ವಿನಂತಿಗಳನ್ನು ಸಿಐಡಿಆರ್‌ಗೆ ರವಾನಿಸುತ್ತೆದೆ.

ಅಂಥಂಟಿಕೇಷನ್‌ ಯುಸರ್‌ ಏಜೆನ್ಸಿ (ಎಯುಎ): ಎಯುಎ ಎಂದರೆ ದೃಢೀಕರಣ ಸೌಲಭ್ಯ ಒದಗಿಸುವ  ಪ್ರಾಧಿಕಾರವು ವಿನಂತಿದಾರಿಗೆ ಹೌದು/ಅಲ್ಲ ಎನ್ನುವುದನ್ನು ಖಚಿತ ಪಡಿಸುವಿಕೆ .

ಇ-ಕೆವೈಸಿ ಯೂಸರ್‌ ಎಜೆನ್ಸಿ(ಕೆಯುಎ): ಎಯುಎ ವಿನಂತಿದಾರರಿಗೆ ಇ-ಕೆವೈಸಿ ದೃಢೀಕರಣ ಸೌಲಭ್ಯವನ್ನೂ ಒದಗಿಸುವುದು.

ನೇಮ್‌ಸ್ಕೇಪ್‌: ಪದದಿಂದ ಪದಕ್ಕೆ ಹೋಲಿಸುವ ತಂತ್ರಾಂಶವಾಗಿದೆ.

ಇ-ಸೈನ್‌:ಮಾಹಿತಿ ಭದ್ರತಾ ಕಾಯ್ದೆ 2000ರ ಪ್ರಕಾರ ಹಸ್ತಚಾಲಿತ ಸಹಿಯನ್ನು ಬದಲಿಸಲು ಇ-ಸೈನ್ ಅನ್ನು ಅನುಮೋದಿಸಲಾಗಿದೆ, ಇದನ್ನು ಆಧಾರ್ ಸಂಖ್ಯೆಯೊಂದಿಗೆ ದೃಢೀಕರಿಸಲಾಗಿದೆ.

 

ಕೆಆರ್ ಡಿಎಚ್ ಏನು ಮಾಡುತ್ತದೆ.

 

ಕರ್ನಾಟಕ ರೆಸಿಡೆಂಟ್ ಡೆಟಾ ಹಬ್ ಹಲವು ಸೇವೆಗಳನ್ನು (Online ಮುಖಾಂತರ ಮತ್ತು ವೆಬ್ ಸೇವೆಗಳ ಮೂಲಕ) ಇಲಾಖಾ ಸಿಬ್ಬಂದಿಗಳಿಗೆ ಗುಣಮಟ್ಟದವನ್ನು ಅನುಲಕ್ಷಿಸಿ ಮಾಡಲು ಅನುವುಮಾಡಿಕೊಟ್ಟಿದೆ.

ಆಧಾರ್ ನ ಹೆಸರು ಹಾಗೂ ಫಲಾನುಭವಿಯ ಹೆಸರನ್ನು ಜೋಡಿಸಲು ನವೀನ ರೀತಿಯ FuzzyScore ಅನ್ನು ಬಳಸಲಾಗಿದೆ. ಇದರಿಂದ ಸಂಪೂರ್ಣ ಹೊಂದಾಣಿಕೆಯಾದ ಭಾಗಶಃ ಹೊಂದಾಣಿಕೆಯಾದ ಹಾಗು ಹೊಂದಾಣಿಕೆಯಾಗದ ಮೂರು ವಿಭಾಗಗಳನ್ನು ಮಾಡಲಾಗುತ್ತದೆ.

 

 

ಇತ್ತೀಚಿನ ನವೀಕರಣ​ : 13-07-2022 03:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೆಸಿಡೆಂಟ್ ಡಾಟಾ ಹಬ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080