ಕರ್ನಾಟಕ ಜಾಲತಾಣ ವಿಭಾಗ

 
ದೃಷ್ಠಿಕೋನ

ಸರ್ಕಾರದ ಎಲ್ಲ ಜಾಲತಾಣಗಳನ್ನು ಏಕರೂಪದ, ವಿಕಲ ಚೇತನ ಸ್ನೇಹಿ ಮತ್ತು ಬಳಕೆದಾರ ಸ್ನೇಹಿಯಾಗಿ ರೂಪಿಸುವುದು. ಭಾರತ ಸರ್ಕಾರದ ಜಾಲತಾಣ ಮಾರ್ಗಸೂಚಿಗಳು(GIGW), ಅಕ್ಸಿಸಿಬಿಲಿಟಿ ಮಾರ್ಗಸೂಚಿಗಳು, “ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು ಜಾಲತಾಣಗಳಿಗೆ ಅಳವಡಿಸಿಕೊಳ್ಳುವುದು. ಜಾಲತಾಣಗಳಿಗೆ ಮಾಹಿತಿಯನ್ನು ಅಪ್ಲೋಡ್‌ ಮಾಡುವುದು "ಮಾಹಿತಿ ನಿರ್ವಹಣಾ ವ್ಯವಸ್ಥೆ"ಯನ್ನು ಅಳವಡಿಸುವುದು. ಸರ್ಕಾರಿ ಜಾಲತಾಣಗಳನ್ನು ಸರ್ಕಾರದ ಅಡಿಯಲ್ಲಿ ಒಂದೇ ವೇದಿಕೆಯಲ್ಲಿ ಅಭಿವೃದ್ಧಿಗೊಳಿಸುವುದು ಮತ್ತು ನಿರ್ವಹಿಸುವುದು. ಸುರಕ್ಷತಾ ಮಾನದಂಡಗಳನ್ನು ಅಳವಡಿಸುವುದು. ಸಮರ್ಪಕ ಮಾಹಿತಿಯನ್ನು ಜಾಲತಾಣಗಳ ಮೂಲಕ ನೀಡುವುದು. ತಾಂತ್ರಿಕೇತರ ಸಿಬ್ಬಂದಿಯೂ ಜಾಲತಾಣ ನಿರ್ವಹಣೆ ವ್ಯವಸ್ಥೆ. ನಾಲ್ಕನೇ ಹಂತರ ಏಕರೂಪದ ಡೊಮೇನ್‌ ನೋಂದಣಿ. ಜಾಲತಾಣಕ್ಕೆ ಸಂಬಂಧಿಸಿದಂತೆ ಇಲಾಖೆಗಳಿ ಶ್ರಮ, ಸಮಯ ಮತ್ತು ಸಂಪನ್ಮೂಲವನ್ನು ಉಳಿತಾಯ ಮಾಡುವುದು.

ಯೋಜನೆ ಆರಂಭ : ಕರ್ನಾಟಕ ಜಾಲತಾಣ ಯೋಜನೆಯು 2008ರಲ್ಲಿ ಕಾರ್ಯಾರಂಭ ಮಾಡಿತು. ಪ್ರಾರಂಭದಲ್ಲಿ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. 2009ರಿಂದ ಇ-ಆಡಳಿತ ಕೇಂದ್ರದ ವ್ಯಾಪ್ತಿಗೆ ಒಳಪಟ್ಟು ಕಾರ್ಯನಿರ್ವಹಿಸುತ್ತಿದೆ.

ಸಾಧನೆಗಳು : ಸರ್ಕಾರದ ಎಲ್ಲ ಜಾಲತಾಣಗಳಿಗೆ ಏಕರೂಪತೆ ನೀಡುವ ಪ್ರಯತ್ನವನ್ನು ಇ-ಆಡಳಿತ ಕೇಂದ್ರ ಮಾಡುತ್ತಿದೆ.

ವಿವರಣೆ

ಮಾಹಿತಿ ತಂತ್ರಜ್ಞಾನ ಉತ್ತುಂಗದಲ್ಲಿರುವ ಈ ಸಮಯದಲ್ಲಿ ಜಾಲತಾಣಗಳು ಅತ್ಯಂತ ಪರಿಣಾಮಕಾರಿ ಸಂವಹನ ಮಾಧ‍್ಯಮಗಳಾಗಿವೆ. ನಾಗರೀಕರು, ಉದ್ದಿಮೆದಾರರು ಮತ್ತು ಸಂದರ್ಶಕರ ನಡುವೆ ಸಂಪರ್ಕ ಕಲ್ಪಿಸಲು ಏಕಿಕೃತ ಪರಿಹಾರವೆಂದರೆ ಜಾಲತಾಣಗಳು. ವಿವಿಧ ಇಲಾಖೆಗಳು ಜಾಲತಾಣಗಳ ಮೂಲಕ ನಾಗರೀಕರಿಗಾಗಿ (G2C), ಸರ್ಕಾರಿ ಸಿಬ್ಬಂದಿಗಾಗಿ(G2G) ಮತ್ತು G2B ಸೇವೆಗಳನ್ನು ನಾಗರೀಕರಿಗೆ ಮತ್ತು ಬಾಹ್ಯ ಸಂಸ್ಥೆಗಳಿಗೆ ಮಾಹಿತಿ ನೀಡಲು ಅನುವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರದ ಇಲಾಖೆಗಳು, ಅಧೀನ ಇಲಾಖೆಗಳಿಗೆ, ನಿಗಮ ನಿಯಮಿತಗಳಿಗೆ, ಸಂಸ್ಥೆ, ಸೊಸೈಟಿಗಳಿಗೆ ಜಾಲತಾಣಗಳನ್ನು ರಚಿಸಿಕೊಡುವ ಮತ್ತು ನಿರ್ವಹಿಸಿಕೊಡುವ ಜವಾಬ್ದಾರಿಯನ್ನು ಇ-ಆಡಳಿತ ಕೇಂದ್ರ ಜಾಲತಾಣ ವಿಭಾಗವು ಸಮರ್ಥವಾಗಿ ನಿರ್ವಹಿಸುತ್ತಿದ್ದು, ಡೊಮೇನ್ ನೋಂದಣಿ, ಜಾಲತಾಣಗಳ ನಿರ್ವಹಣೆ, ಅಪ್ಲಿಕೇಷನ್ ವಿನ್ಯಾಸ, ಸರ್ವರ್ ನಿರ್ವಹಣೆ, ದತ್ತಾಂಶ ನಿರ್ವಹಣೆ, ಸುರಕ್ಷತಾ ಪರೀಕ್ಷೆಗಳು, ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದೆ.

ಜಾಲತಾಣಕ್ಕೆ ಸಂಬಂಧಿಸಿದಂತೆ ಇ-ಆಡಳಿತ ಕೇಂದ್ರ ಜಾಲತಾಣ ವಿಭಾಗ ಮತ್ತು ಜಾಲತಾಣ ಮಾಲೀಕ ಸಂಸ್ಥೆಗಳು ಪ್ರತ್ಯೇಕ ಹೊಣೆಗಾರಿಕೆಗಳನ್ನು ನಿರ್ವಹಿಸುತ್ತವೆ. ಜಾಲತಾಣ ವಿಭಾಗವು ಇಲಾಖೆಗಳ ಮನವಿ ಮೇರೆಗೆ ಏಕರೂಪದ ಡೊಮೇನ್‌ ನೋಂದಣಿ ಮಾಡಿಕೊಡುತ್ತದೆ. ಎಲ್ಲ ಮಾನದಂಡಗಳನ್ನು ಒಳಗೊಂಡ ಜಾಲತಾಣ ಟೆಂಪ್ಲೆಟ್‌ ರಚಿಸುವುದು, ಆಡಿಟಿಂಗ್‌, ಸುರಕ್ಷತಾ ಪ್ರಮಾಣಪತ್ರ ಅಳವಡಿಸುವುದು, ಹೋಸ್ಟ್‌ ಮಾಡುವುದು ಮತ್ತು ದತ್ತಾಂಶ ನಿರ್ವಹಿಸುವುದು ಮತ್ತು ಜಾಲತಾಣ ನಿರ್ವಹಣೆ ಕುರಿತು ಸಿಬ್ಬಂದಿಗೆ ತಬೇತಿ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.

ಜಾಲತಾಣ ಮಾಲೀಕ ಸಂಸ್ಥೆಗಳು( ಇಲಾಖೆಗಳು, ನಿಗಮ-ನಿಯಮಿತಗಳು, ಮಂಡಳಿಗಳು, ಸಂಸ್ಥೆಗಳು, ಸೊಸೈಟಿಗಳು), ಜಾಲತಾಣಕ್ಕೆ ಮಾಹಿತಿಯನ್ನು ಸಕಾಲಕ್ಕೆ ಅಪ್‌ಡೇಟ್‌ ಮಾಡುವುದು. ಇ-ಆಡಳಿತ ಕೇಂದ್ರ ಮತ್ತು ಇಲಾಖೆಗಳ ನಡುವೆ ಏಕಮಾತ್ರ ಸಂಪರ್ಕ ವ್ಯಕ್ತಿಯನ್ನಾಗಿ ಹಾಗೂ ಜಾಲತಾಣದ ಮಾಹಿತಿ ನಿರ್ವಹಣೆ ಮೇಲ್ವಿಚಾರಣೆಗೆ ಉಪ ಕಾರ್ಯದರ್ಶಿ ಹಾಗೂ ಅವರ ಮೇಲ್ಪಟ್ಟ ಅಧಿಕಾರಿಯನ್ನು ನೇಮಕ ಮಾಡುವುದು. ಜಾಲತಾಣಕ್ಕೆ ಮಾಹಿತಿಯನ್ನು ಅಪ್ಲೋಡ್‌ ಮಾಡಲು ಕಂಟೇಂಟ್‌ ಕ್ರಿಯೇಟರ್‌, ಕಂಟೇಂಟ್‌ ಮಾಡರೇಟರ್‌ ಹಾಗೂ ಕಂಟೇಂಟ್‌ ಅಪ್ರುವರ್‌ ಅವರನ್ನು ನೇಮಕ ಮಾಡಬೇಕು. ಜಾಲತಾಣದಲ್ಲಿ ಅಪ್ಲೋಡ್‌ ಮಾಡುವ ಮಾಹಿತಿಯ ಹಕ್ಕುಸ್ವಾಮ್ಯವನ್ನು ಇಲಾಖೆಗಳು ಅಥವಾ ಮಾಲೀಕತ್ವ ಸಂಸ್ಥೆಗಳು ಹೊಂದಿರುತ್ತವೆ.

ಕಾರ್ಯವಿಧಾನ
  • ಇಲಾಖೆಗಳು ಅಥವಾ ಜಾಲತಾಣ ಹೊಂದಲು ಬಯಸುವ ಸರ್ಕಾರಿ ಸಂಸ್ಥೆಗಳಿಂದ ಮನವಿ ಹಾಗೂ ಜಾಲತಾಣ ನಿರ್ವಹಣೆಗೆ ನೋಡಲ್‌ ಅಧಿಕಾರಿ, ಕಂಟೇಂಟ್‌ ಕ್ರಿಯೇಟರ್‌, ಮಾಡರೇಟರ್‌ ಹಾಗೂ ಅಪ್ರೂವರ್‌ಗಳ ನೇಮಕದ ಪತ್ರವನ್ನು ಇ-ಆಡಳಿತ ಕೇಂದ್ರಕ್ಕೆ ನೀಡಬೇಕಾಗುತ್ತದೆ.
  • ಮನವಿಪತ್ರದ ಆಧಾರದಿಂದ ಜಾಲತಾಣ ಸೃಜಿಸಲಾಗುತ್ತದೆ. ನಂತರ ಸೂಚಿತ ಸಿಬ್ಬಂದಿಗೆ ಜಾಲತಾಣ ನಿರ್ವಹಣೆ ಕುರಿತು ಒಂದು ದಿನ ಪ್ರಾಯೋಗಿಕ ತರಬೇತಿ ಹಾಗೂ ಜಾಲತಾಣದ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ.
  • ತರಬೇತಿ ನಂತರ, ಇಲಾಖೆಗಳು ಜಾಲತಾಣಕ್ಕೆ ಮಾಹಿತಿ ಅಪ್ಲೋಡ್‌ ಮಾಡಲು ಅನುಕೂಲವಾಗುವ ದೃಷ್ಠಿಯಿಂದ ಸ್ಟೇಜಿಂಗ್‌ ಸರ್ವರ್‌ನಲ್ಲಿ ಜಾಲತಾಣವನ್ನು ನೀಡಲಾಗುತ್ತದೆ.
  • ಮಾನದಂಡಗಳ ಪ್ರಕಾರ ಮಾಹಿತಿಯನ್ನು ಅಪ್ಲೋಡ್‌ ಮಾಡಿದ ನಂತರ ಇಲಾಖೆಗಳು ಜಾಲತಾಣವನ್ನು ಹೋಸ್ಟ್‌ ಮಾಡುವುದುಕ್ಕೆ ಅನುಮತಿ ಪತ್ರವನ್ನು ನೀಡಬೇಕು.
  • ಅನುಮತಿ ಪತ್ರ ದೊರೆತ ನಂತರ, ಇಲಾಖೆಯ ಜಾಲತಾಣ ಸುರಕ್ಷತಾ ಕ್ರಮಗಳನ್ನು(ಆಡಿಟ್‌ ಮತ್ತು ಎಸ್‌.ಎಸ್‌.ಎಲ್‌) ಅಳವಡಿಸಲಾಗುತ್ತದೆ. ಪ್ರಕಟಣಾಪೂರ್ವ ಕ್ರಮಗಳು ಪೂರ್ಣಗೊಂಡ ನಂತರ, ಜಾಲತಾಣವನ್ನು ಕರ್ನಾಟಕ ದತ್ತಾಂಶ ಕೇಂದ್ರಲ್ಲಿ ಹೋಸ್ಟ್‌ ಮಾಡಲಾಗುತ್ತದೆ.
ಅಂಕಿಅಂಶಗಳು

ಕ್ರ.ಸಂ.

ವಿವರಣೆ

ಸಂಖ್ಯೆಗಳು

1

ಇ-ಆಡಳಿತ ಕೇಂದ್ರದಿಂದ ಪ್ರಕಟಗೊಂಡು ನಿರ್ವಹಿಸುತ್ತಿರುವ ಜಾಲತಾಣಗಳು

140

2

ಇಲಾಖೆಗಳ ಸಿಬ್ಬಂದಿಗೆ ನೀಡಿದ ತರಬೇತಿ

90

3

ಆನ್ಲೈನ್ ಮೂಲಕ ನಿರಂತರವಾಗಿ ಅಪ್ ಡೇಟ್ ಆಗುತ್ತಿರುವ ಜಾಲತಾಣಗಳು

40

4

ಆನ್ಲೈನ್ ಅಪ್ಲಿಕೇಷನ್ ಗಳು

10

5

ಮುಖ್ಯಮಂತ್ರಿಗಳ ಜಾಲತಾಣ ನಿರ್ವಹಣೆ

1

6

ಮುಖ್ಯ ಕಾರ್ಯದರ್ಶಿಯವರ ಜಾಲತಾಣ ನಿರ್ವಹಣೆ(ಅಧಿಕಾರಿಗಳ ವಿರವ, MyGOK, ಸರ್ಕಾರದ ಸಂಪರ್ಕ ಕೈಪಿಡಿ)

1

7

ಅಪ್ಲಿಕೇಷನ್ ಮತ್ತು ದತ್ತಾಂಶ ಸರ್ವರ್ ನಿರ್ವಹಣೆ

10

8

ಎನ್.ಐ.ಸಿ ಜಾಲತಾಣಗಳ ಅಪ್ಡೇಟ್ (150)

5

9

ಡೊಮೇನ್ ಗಳ ನೊಂದಣಿ

12

10

ಸುರಕ್ಷತಾ ಪರೀಕ್ಷೆ

140

11

ಮಾಹಿತಿ ರಚನೆ, ಪರಿಶೀಲನೆ ಮತ್ತು ಅನುಮೋದನಾ ನೀತಿ ಆಧಾರದ ಮೇಲೆ ನೂತನ ಜಾಲತಾಣವನ್ನು ಸಿದ್ಧಪಡಿಸಿಸಲಾಗುತ್ತಿದೆ.

 

ಜಾಲತಾಣ ವಿಭಾಗ ಯೋಜನಾ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಸಂಪರ್ಕ ವಿವರಗಳು

ಯೋಜನಾ ನಿರ್ದೇಶಕರು

ವಿಳಾಸ: ಕರ್ನಾಟಕ ಜಾಲತಾಣ ವಿಭಾಗ,

ಇ-ಆಡಳಿತ ಕೇಂದ್ರ, ಬಿ ಬ್ಲಾಕ್‌, 2ನೇ ಮಹಡಿ,

ಶಾಂತಿನಗರ ಬಿಎಂಟಿಸಿ, ಟಿ.ಟಿ.ಎಂ.ಸಿ ಕಟ್ಟಡ ಬೆಂಗಳೂರು-27

ಇಮೇಲ್‌: pd.webportal@karnataka.gov.in; Pm.webportal@karnataka.gov.in

ಇತ್ತೀಚಿನ ನವೀಕರಣ​ : 18-06-2020 05:06 PM ಅನುಮೋದಕರು: superadmin