ಅಭಿಪ್ರಾಯ / ಸಲಹೆಗಳು

ಇ-ಆಫೀಸ್

ಛಾಯಾಚಿತ್ರ ರಚಿಸಲಾಗುತ್ತಿದೆ

ದೃಷ್ಠಿಕೋನ

ಯೋಜನೆ ಆರಂಭ : 1 ಅಕ್ಟೋಬರ್ 2018

ಸರ್ಕಾರದ ಕಚೇರಿಗಳ ನಿತ್ಯದ ಕಾರ್ಯಗಳಿಗೆ ವಿದ್ಯುನ್ಮಾನ ರೂಪ ನೀಡುವ ಮೂಲಕ ಸರ್ಕಾರದ ಮಟ್ಟದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಪರೀಣಾಮಕಾರಿ ಆಡಳಿತವನ್ನು ಸಾಧಿಸುವುದು ಈ ಯೋಜನೆಯ ದೃಷ್ಠಿಕೋನವಾಗಿದೆ. ಇ-ಆಫೀಸ್ ಎನ್ನುವುದು ಮರುಬಳಕೆ ವ್ಯವಸ್ಥೆಯಾಗಿದ್ದು ಅದು ಎಲ್ಲಾ ಸ್ವತಂತ್ರ ಕೆಲಸಗಳನ್ನು ಒಂದೇ ಚೌಕಟ್ಟಿನಲ್ಲಿ ಸಂಯೋಜಿಸುತ್ತದೆ. ಇದು ಸರ್ಕಾರದ ಪ್ರಕ್ರಿಯೆಗಳಲ್ಲಿ ದಕ್ಷತೆ, ಸ್ಥಿರತೆ ಮತ್ತು ಪರಿಣಾಮಕಾರಿತ್ವವನ್ನು ಸುಧಾರಿಸಲು, ಪ್ರಕ್ರಿಯೆಯ ವಿಳಂಬವನ್ನು ಕಡಿಮೆ ಮಾಡಲು ಮತ್ತು ಪಾರದರ್ಶಕತೆಹಾಗೂಹೊಣೆಗಾರಿಕೆಯನ್ನು ಸ್ಥಾಪಿಸಲು ಸಹಾಯ ಮಾಡುವುದು.

ವಿವರಣೆ : ಇ-ಆಫೀಸ್ ಯೋಜನೆಯು ತಂತ್ರಾಂಶ ಆಧಾರಿತ ಕಾರ್ಯವಿಧಾನವಾಗಿದೆ. ಈ ತಂತ್ರಾಂಶವನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌.ಐ.ಸಿ) ಅಭಿವೃದ್ಧಿಗೊಳಿಸಿದ್ದು, ಕರ್ನಾಟಕದಲ್ಲಿ ಇದರ ಅನುಷ್ಠಾನದ ಹೊಣೆಯನ್ನು ಇ-ಆಡಳಿತ ಕೇಂದ್ರ ನಿರ್ವಹಿಸುತ್ತಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ, ಇ-ಆಡಳಿತ ಕೇಂದ್ರ, ಸರ್ಕಾರದ ಸಿಬ್ಬಂದಿ ಮತ್ತು ನಾಗರೀಕರು ಈ ಯೋಜನೆಯ ಭಾಗವಾಗಿರುತ್ತಾರೆ. ಕಚೇರಿಗಳಲ್ಲಿ ಕಡತಗಳ ವಿಲೇವಾರಿ, ಎಲ್ಲ ಕಾಲದಲ್ಲಿ ಅವುಗಳ ಸ್ಥಿತಿಗತಿ ತಿಳಿಯುವಿಕೆ, ಶೀಘ್ರ ನಿರ್ಧಾರ ತೆಗೆದುಕೊಳ್ಳುವಿಕೆ, ಸರ್ಕಾರದ ನೀತಿ ನಿಯಮಗಳಲ್ಲಿ ಪಾರದರ್ಶಕತೆಯನ್ನು ತರುವುದಕ್ಕಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.

ಸಾಧನೆಗಳು
 • ಇ-ಆಫೀಸ್ ತಂತ್ರಾಂಶವನ್ನು ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಹೋಸ್ಟ್ ಮಾಡಲಾಗಿದೆ.
 • ಯೋಜನೆಯ ಕಾರ್ಯಕ್ಕೆ ಕೆಎಸ್‌ಡಬ್ಲ್ಯುಎನ್(ಕೆ-ಸ್ವಾನ್‌) ಬ್ಯಾಂಡ್‌ವಿಡ್ತ್ ಅನ್ನು 10 ಎಮ್‌ಬಿಪಿಎಸ್‌ಗೆ ಹೆಚ್ಚಿಸಿದೆ.
 • ಅಗತ್ಯವಿರುವಕಂಪ್ಯೂಟರ್‌ ಮತ್ತು ಉತ್ಕೃಷ್ಟ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ.
 • ಡಿಎಸ್ಸಿ(ಡಿಜಿಟಲ್‌ ಸಿಗ್ನೇಚರ್‌ ಸರ್ಟಿಫಿಕೆಟ್‌) ಸೌಲಭ್ಯ ಒದಗಿಸಲಾಗುತ್ತಿದೆ.
 • ಪ್ರತಿ ಬಳಕೆದಾರ ಸಿಬ್ಬಂದಿಗೆ ಕೇಂದ್ರೀಯವಾಗಿ ಎನ್ಐಸಿಯಿಂದ ಇ-ಮೇಲ್‌ಗಳನ್ನು ರಚಿಸಲಾಗಿದೆ.
 • ಉಪ ಕಾರ್ಯದರ್ಶಿ ಮೇಲ್ಪಟ್ಟ ಎಲ್ಲ ಅಧಿಕಾರಿಗಳಿಗೆ ವಿಪಿಎನ್ ಸಂಪರ್ಕವನ್ನು ನೀಡಲಾಗುತ್ತದೆ.
 • ಇ-ಆಫೀಸ್‌ ಬಳಕೆ ಕುರಿತು ಕನ್ನಡ ಭಾಷೆಯಲ್ಲಿ ಕೈಪಿಡಿ ಲಭ್ಯವಿದ.
 • ಸಹಾಯವಾಣಿ (ಲ್ಯಾಂಡ್‌ಲೈನ್ ದೂರವಾಣಿ ಮತ್ತು ಇಮೇಲ್) ಸ್ಥಾಪಿಸಲಾಗಿದೆ.
 • ಟಿಕೆಟಿಂಗ್ ಉಪಕರಣವನ್ನು ಸ್ಥಾಪಿಸಲಾಗಿದೆ.
 • ಅತೀವ ಮತ್ತು ಸಮಯ-ಪರಿಮಿತ ಕೌಶಲ್ಯಾಭಿವೃದ್ಧಿ ವ್ಯವಸ್ಥೆ.
 • ಸರ್ಕಾರಿ ನೌಕರರ ಸಂಘಟೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದ.
 • ಸದೃಢ ಮತ್ತು ಪೂರ್ವಭಾವಿ ಸಹಾಯ ವ್ಯವಸ್ಥೆ.
 • ಸಿಬ್ಬಂದಿ ಮತ್ತು ಸಹಾಯ ತಂಡದೊಂದಿಗೆ ಸಮನ್ವಯ.
 • ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಪ್ರತಿ ತಿಂಗಳು ಪರಾಮರ್ಶೆ.
 • ರಾಷ್ಟ್ರೀಯ ಮಾಹಿತಿ ಕೇಂದ್ರ, ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರ, ಮತ್ತು ಅನುಷ್ಠಾನ ತಂಡದೊಂದಿಗೆ ಅಪರ ಮುಖ್ಯ ಕಾರ್ಯದರ್ಶಿಗಳಿಂದ ಸಾಪ್ತಾಹಿಕ ಸಭೆ.
 • ಕಚೇರಿಗಳಲ್ಲಿ ಸೃಜಿಸಲ್ಪಡುವ ಎಲ್ಲಾ ಪತ್ರವ್ಯವಹಾರಗಳನ್ನು ಡಿಜಿಟಲ್ ಸ್ವರೂಪದಲ್ಲಿ ಮಾತ್ರ ಜಾರಿಗೊಳಿಸಬೇಕು- ಸರ್ಕಾರದ ಆದೇಶ.
ಅಂಕಿಅಂಶಗಳು

ಕ್ರ.ಸಂ.

ವಿವರ

ಕಚೇರಿಗಳು

ಬಳಕೆದಾರರು

ಕಡತಗಳು

ಪಾವತಿಗಳು

1

ಸಚಿವಾಲಯ

46

2531

3249

335135

2

ವಲಯ ಕಚೇರಿಗಳು

3

128

71220

6223

3

ಮುಖ್ಯ ಕಚೇರಿಗಳು

32

2934

274044

525034

4

ಜಿಲ್ಲಾ ಕಚೇರಿ

66

3495

1651

374148

5

ತಾಲ್ಲೂಕು ಮಟ್ಟದ ಕಚೇರಿ

 

12

247

7335

6

ಪೊಲೀಸ್‌ ಇಲಾಖೆ

18

521

18397

20871

7

ಮಂಡಳಿಗಳು ಮತ್ತು ನಿಗಮಗಳು

41

2319

3249

156296

 

ಒಟ್ಟು

218

12175

445818

242292

ಇ-ಕಚೇರಿ ಯೋಜನಾ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

ಸಂಪರ್ಕ ವಿವರಗಳು

ಯೋಜನಾ ನಿರ್ದೇಶಕರು

ಕರ್ನಾಟಕ ಇ-ಆಡಳಿತ ವಿಭಾಗ,

ಇ-ಆಡಳಿತ ಕೇಂದ್ರ, ಬಿ ಬ್ಲಾಕ್‌,

ಶಾಂತಿನಗರ ಬಿಎಂಟಿಸಿ, ಟಿ.ಟಿ.ಎಂ.ಸಿ ಕಟ್ಟಡ ಬೆಂಗಳೂರು-27

ದೂರವಾಣಿ:080 22230060

ಇಮೇಲ್:pd.eoffice@karnataka.gov.in,pm.eoffice@karnataka.gov.in

ಇತ್ತೀಚಿನ ನವೀಕರಣ​ : 25-08-2020 08:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080