ಅಭಿಪ್ರಾಯ / ಸಲಹೆಗಳು
Grivience ಕುಂದುಕೊರತೆ

ಸೇವೆಗಳು

ಭಾರತ ಸರಕಾರದ ಟೆಲಿಕಾಂ ಇಲಾಖೆಯಿಂದ ಕರ್ನಾಟಕ ಮೊಬೈಲ್ ಒನ್ ಗೆ ಪ್ರತ್ಯೇಕ ವಿಶಿಷ್ಟ 3-ಅಂಕಿ ಸಂಖ್ಯೆಯಾದ 161 ಅನ್ನು ನಿಗದಿಪಡಿಸಲಾಗಿದೆ. ಇದು ಎಲ್ಲಾ ಆಪರೇಟರ್ ಗಳಿಗೂ, ದೇಶದ ಎಲ್ಲಾ ವಲಯಗಳಲ್ಲೂ ದೊರಕುವುದಾಗಿದೆ, ಹೀಗಾಗಿ ಇದು ಈ ವೇದಿಕೆಯ ಒಂದು ವೈಶಿಷ್ಟ್ಯಪೂರ್ಣ ಗುಣವಾಗಿದೆ.

 

ಕರ್ನಾಟಕ ಮೊಬೈಲ್ ಒನ್ ಅಪ್ಲಿಕೇಷನ್ ಆಪಲ್ ಐಓಎಸ್ ಮತ್ತು ಗೂಗಲ್ ಆಂಡ್ರಾಯ್ಡ್ ಸ್ಟೋರ್ ಹಾಗೂ ಗೂಗಲ್ ಆಂಡ್ರಾಯ್ಡ್ ಸ್ಟೋರ್ ಗಳಲ್ಲೂ ಲಭ್ಯವಿದೆ. ಇದರಿಂದ ಭಾರತ ಸರಕಾರದ ಯಾವುದೇ ಅಧಿಕೃತ ಅಪ್ಲಿಕೇಷನ್ ಗಳಿಗಿಂತ ಇಂಥದ್ದೊಂದು ಸಾಕಾರಗೊಂಡಿರುವುದು ಮೊಟ್ಟಮೊದಲನೆಯದಾಗಿದೆ.

 

ಪುಷ್ ಎಸ್.ಎಂ.ಎಸ್. ಸೇವೆಗಳು :  ಇಲಾಖಾ ನಿರ್ದಿಷ್ಟ ಮಾಹಿತಿಯನ್ನು ನಾಗರೀಕರ ಮೊಬೈಲುಗಳಿಗೆ ಎಸ್.ಎಂ.ಎಸ್. ಮೂಲಕ ಕಳಿಸಲು ಆರು ಅಕ್ಷರಗಳುದ್ದದ ಸೆಂಡರ್ ಐ.ಡಿ.ಯೊಂದನ್ನು ಇಲಾಖೆಗಳಿಗೆ ಒದಗಿಸಲಾಗಿದೆ.

ಮಿಸ್ಡ್ ಕಾಲ್ ಸೇವೆಯೊಂದನ್ನೂ 1-800 425 425 425 ರಲ್ಲಿ ಸೃಜಿಸಲಾಗಿದೆ.  ನಾಗರೀಕರೊಬ್ಬರು ಇದಕ್ಕೆ ಕರೆ ಮಾಡಿದಾಗ ಅವರಿಗೆ ಲಿಂಕುಗಳಿರುವ ಎಸ್.ಎಂ.ಎಸ್. ಒಂದು ಹೋಗುತ್ತದೆ, ಅದರಿಂದ ಅವಶ್ಯಕ ತಂತ್ರಾಂಶವನ್ನು ತಮ್ಮ ಉಪಕರಣಕ್ಕೆ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

 

ಮೊಬೈಲ್ ಒನ್ ಸೇವೆಯನ್ನು ಈ ಮುಂದಿನ ವಿಧಗಳಲ್ಲಿ ಹೊಕ್ಕಬಹುದು

 

 • 1-800 425 425 425 ಕ್ಕೆ ಮಿಸ್ಡ್ ಕಾಲ್ ಕೊಡಿ
 • ಗೂಗಲ್ ಅಥವಾ ಆಪಲ್ ಅಪ್ಲಿಕೇಷನ್ ಸ್ಟೋರ್ಸ್ ನಿಂದ ಸ್ಮಾರ್ಟ್ ಕ್ಲೈಯೆಂಟ್ ಅನ್ನು ಡೌನ್ ಲೋಡ್ ಮಾಡಿ.
 • ಐವಿಆರ್ ಸೇವೆಗಳಿಗೆ 161 ಅನ್ನು ಕರೆ ಮಾಡಿ
 • ಮೊಬೈಲ್ ಒನ್ ಅನ್ನು ಎಸ್.ಎಂ.ಎಸ್. ಮೂಲಕ 161 ರಲ್ಲಿ ಹಾಗೂ USSD ಆದರೆ *161# ಮೂಲಕ ತಲುಪಬಹುದಾಗಿದೆ
 • ಮೊಬೈಲ್ ಒನ್ ಸಹಾಯವಾಣಿ 1800 425 425 426 ಕ್ಕೆ ಕರೆ ಮಾಡಿ
 • ಮೊಬೈಲ್ ಒನ್ ಸಹಾಯ ಪೀಠಕ್ಕೆ support.m1@karnataka.gov.in ನಲ್ಲಿ ಬರೆದು ಸಲ್ಲಿಸಿರಿ
 • https://mobile.karnataka.gov.in ಗೆ ಲಾಗ್ ಆನ್ ಮಾಡಿ.
 • ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು : https://mobile.karnataka.gov.in/web ಅನ್ನು ಭೇಟಿ ನೀಡಿ.

ವೈವಿಧ್ಯಮಯ ಸರಕಾರಿ ಮತ್ತು ಖಾಸಗಿ ಮೌಲ್ಯ ವರ್ಧಿತ ಸೇವೆಗಳಿಗಳ ಸುಲಲಿತ ಹಾಗೂ ತ್ವರಿತ ಜೋಡಣೆಗಾಗಿಯೇ ನಿರ್ದಿಷ್ಟವಾಗಿ ಇದನ್ನು ಉದ್ದೇಶಪೂರ್ವಕವಾಗಿಯೇ ‘ಮುಕ್ತ-ವೇದಿಕೆ’ಯಾಗಿ ವಿನ್ಯಾಸಗೊಳಿಸಲಾಗಿದೆ.

 

ಮೊಬೈಲ್ ಒನ್ ವೇದಿಕೆಯ ಸೇವೆಗಳ ವ್ಯಾಪ್ತಿ  ಹೀಗಿದೆ :

 

 • ಮೊಬೈಲ್ ಹಾಗೂ ಸ್ಥಿರ ಉಪಕರಣಗಳ ಮೇಲೆ ನಾಗರೀಕರಿಗೆ ಮತ್ತು ನಿವಾಸಿಗಳಿಗೆ ಸರಕಾರದ ಸೇವೆಗಳು – G2C/G2R
 • ಮೊಬೈಲ್ ಹಾಗೂ ಸ್ಥಿರ ಉಪಕರಣಗಳ ಮೇಲೆ ಸರಕಾರಕ್ಕೆ ಸರಕಾರಿ ಸೇವೆಗಳು – G2G
 • ಸರಕಾರಿ ಉದ್ಯೋಗಿಗಳಿಗೆ ಸರಕಾರದ ಸೇವೆಗಳು – G2E
 • ನಾಗರೀಕರಿಗೆ ಖಾಸಗಿ ವಿಷಯಗಳ ಮೇಲೆ ಉಪಯುಕ್ತ ಸೇವೆಗಳು ಅಥವಾ ಮೌಲ್ಯ ವರ್ಧಿತ ಸೇವೆಗಳ ಅನುಕೂಲ.
 • ನಾಗರೀಕರು, ಸರಕಾರಿ ನೌಕರರುಗಳೇ ಮುಂತಾದ ಬಳಕೆದಾರರುಗಳಿಂದ ಡಾಟಾ ಕ್ಯಾಪ್ಚರಿಂಗ್.
 • ನಾಗರೀಕರಿಂದ ಅಥವಾ ಸರಕಾರಿ ನೌಕರರುಗಳಿಂದ ಪ್ರತಿಕ್ರಿಯೆ ಹಾಗೂ ಸಾರ್ವಜನಿಕ ದೂರು ಪರಿಹರಿಸುವಿಕೆ
 • ಆಂತರಿಕ-ಸರಕಾರದ ಸಂವಹನಗಳು

 ಈ ವೇದಿಕೆಯಲ್ಲಿ ಶುಲ್ಕ ಪಾವತಿ ಸೇವೆಗಳೂ ಹಾಗೂ ಉಚಿತ ಸೇವೆಗಳೆರಡೂ ದೊರಕುತ್ತವೆ, ಬಳಕೆದಾರರು ತಮಗೆ ಯಾವುದು ಉಪಯುಕ್ತವೋ ಅದನ್ನು ತಮ್ಮಿಚ್ಛೆಯಂತೆ ಬೇಕಾದ ಸೇವೆಯನ್ನು ಪಡೆಯಲು ಸಾಧ್ಯ.

ಮೊಬೈಲ್ ಒನ್ ಕರ್ನಾಟಕದ ನಿವಾಸಿಗಳಿಗೆ ಉಪಯುಕ್ತವಾಗುವಂಥ ವಿವಿಧ ನಾಗರೀಕ ಕೇಂದ್ರಿತ, ಸರಕಾರಿ ಮತ್ತು ಮೂರನೇ ಪಾರ್ಟಿಯ ಸೇವೆಗಳ ಜೊತೆ ಸಂವಾದಿಸಿ, ಸಮಗ್ರಗೊಳಿಸುವ ಒಂದು ಅವಿರತ ಪ್ರಕ್ರಿಯೆಯಲ್ಲಿದೆ.

ಮೊಬೈಲ್ ಒನ್ ವೇದಿಕೆಯ ಮೇಲೆ ಲಭ್ಯವಿರುವ ಸೇವೆಗಳ ವರ್ಗಗಳು ಈ ಕೆಳಗಿನಂತಿವೆ:

1) ಪುಷ್ ಸೇವೆಗಳು2) ಪುಲ್ ಸೇವೆಗಳು

 3) ಪಾವತಿ ಸೇವೆಗಳು4) ಡಾಟಾ ಕ್ಯಾಪ್ಚರ್ ಸೇವೆಗಳು

ಇತ್ತೀಚಿನ ನವೀಕರಣ​ : 24-08-2021 11:57 AM ಅನುಮೋದಕರು: superadminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ