ಅಭಿಪ್ರಾಯ / ಸಲಹೆಗಳು
Grivience ಕುಂದುಕೊರತೆ

​ಮೊಬೈಲ್ ಒನ್ ಬಗ್ಗೆ

ಮೊಬೈಲ್ ಒನ್ ಬಹಳಷ್ಟು ಸೇವೆಗಳನ್ನು ನೀಡಬಲ್ಲ ರಾಷ್ಟ್ರದ ಮೊಟ್ಟಮೊದಲ ಹಾಗೂ ವಿಶ್ವದ ಅತಿದೊಡ್ಡ ವೈವಿಧ್ಯಮಯ ಮೊಬೈಲ್ ಆಡಳಿತ ವೇದಿಕೆಯಾಗಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಸರಕಾರದಿಂದ ಮತ್ತು ಖಾಸಗಿ ವಲಯ ಸೇರಿದ ಒಂದು ಮುಕ್ತ ವೇದಿಕೆಯ ಮೂಲಕ ನಾಗರೀಕ ಸೇವೆಗಳನ್ನು ವಿತರಿಸುವುದಕ್ಕಾಗಿ ಇರುವ, ಯಾವುದೇ ಸೇವೆಯನ್ನೂ ಸ್ವೀಕರಿಸಬಲ್ಲಂತಹ, ಹಾಗೂ ಸ್ಥಿರವಾದ ಒಂದು ಏಕೀಕೃತ ಮೊಬೈಲ್ ವೇದಿಕೆ ಇದಾಗಿದೆ. ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ, ಹೇಗಾದರೂ, 24x7x365 ದಿನಗಳೂ, ಯಾವುದೇ ಮೊಬೈಲ್ ಉಪಕರಣದಿಂದ ಸೇವೆಗಳು ಲಭ್ಯವಿರುತ್ತದೆ. G2C, B2C ಮತ್ತು G2B ಸೇವೆಗಳನ್ನೊಳಗೊಂಡಿರುತ್ತದೆ.  ಮೊಬೈಲ್ ಒನ್ ವೇದಿಕೆಯನ್ನು ಎಲ್ಲಾ ಟೆಲಿಕಾಂ ಆಪರೇಟರ್ ಗಳೊಂದಿಗೆ ಏಕೀಕರಣ ಮಾಡಿದ್ದು ‘ಒಂದು URL, ಒಂದು ಸಣ್ಣ ಸಂಕೇತ ಮತ್ತು ಒಂದೇ ಅಪ್ಲಿಕೇಶನ್’’ ಸಿದ್ಧಾಂತದ ಮೂಲಕ ಎಲ್ಲಾ ಸೇವೆಗಳನ್ನು ಸಿಗುವಂತೆ ಈ ವೇದಿಕೆ ಕಾರ್ಯನಿರ್ವಹಿಸುತ್ತದೆ. ಅಂದರೆ, ನಾಗರೀಕರು ಎಲ್ಲಾ ಸೇವೆಗಳನ್ನು ಒಂದೇ ಕಡೆ ಪಡೆಯಬಹುದಾಗಿದ್ದು, ಇದರಿಂದಾಗಿ ಬಹಳಷ್ಟು ಜಾಲತಾಣಗಳನ್ನು ಸಂಪರ್ಕಿಸುವ ಅವಶ್ಯಕತೆ ಇರುವುದಿಲ್ಲ.

ಕರ್ನಾಟಕಾದ್ಯಂತ ಬೆರಳತುದಿಯಲ್ಲಿ ಈ ಸೇವೆಗಳು ಲಭ್ಯವಿರುವಂತೆ ಮಾಡಿರುವುದರಿಂದ, ತೆರಿಗೆ ಪಾವತಿ, ಬಳಕೆಯ ಬಿಲ್ಲುಗಳು, ಸಂಚಾರ ಉಲ್ಲಂಘನೆ ದಂಡಗಳು, ಪಾಸ್ ಪೋರ್ಟ್ ಗೆ ಸಂಬಂಧಿಸಿದ ಅರ್ಜಿಯ ಸ್ಥಿತಿ ತಿಳಿಯಲು, ಜನನ ಪ್ರಮಾಣಪತ್ರ,  ವಿಶ್ವವಿದ್ಯಾನಿಲಯದ ಫಲಿತಾಂಶಗಳು, ಇತ್ಯಾದಿ ಸರಕಾರಿ ಸೇವೆಗಳನ್ನು ಪಡೆಯಲು  ಕರ್ನಾಟಕದ ನಿವಾಸಿಗಳಿಗೆ ಸಾಕಷ್ಟು ಸಮಯ ಉಳಿತಾಯವಾಗಿ, ಪ್ರತಿಕೂಲ ಹವಾಮಾನದಲ್ಲಿ ಉದ್ದನೆಯ ಕ್ಯೂನಲ್ಲಿ ನಿಲ್ಲುವ ತೊಂದರೆ ತಪ್ಪಿಸುತ್ತದೆ.

ಈ ವೇದಿಕೆಯು ಗ್ರಾಮೀಣ ಕರ್ನಾಟಕದಲ್ಲಿಯೂ ಇನ್ನೂ ಹೆಚ್ಚಿನ ಮಹತ್ವ ಪಡೆಯಲಿದೆ, ಟೆಲಿ-ಐಸಿಯು ಸೇವೆಯು ಆರೋಗ್ಯ ಸುರಕ್ಷತೆಯನ್ನು ಬಹಳವಾಗಿ ಸುಧಾರಿಸುತ್ತದೆ ದೇಶದ ಅತ್ಯುತ್ತಮ ತಜ್ಞ ವೈದ್ಯರುಗಳಿಂದ ಗ್ರಾಮಸ್ಥರಿಗೆ ಫಲ ಲಭ್ಯವಾಗಲಿದ್ದು, ನಗರಕ್ಕೆ ದೀರ್ಘ ಹಾಗೂ ದುಬಾರಿ ಪ್ರಯಾಣ ಮಾಡುವ ಪ್ರಸಂಗ ತಪ್ಪಲಿದೆ.

Mobileone AwardMobileone AwardMobileone Award

ಇತ್ತೀಚಿನ ನವೀಕರಣ​ : 25-08-2021 10:43 AM ಅನುಮೋದಕರು: superadminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ