ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

 

ಇ-ಆಡಳಿತ ಕೇಂದ್ರದ ಜಾಲತಾಣ ಪುಟಗಳಿಗೆ ಸ್ವಾಗತ. 

ಕರ್ನಾಟಕ ಸರ್ಕಾರವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದ್ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅನುಕರಣೀಯ ಮಾದರಿಯಾಗಿದ್ದು, ರಾಷ್ಟ್ರದಲ್ಲಿ ವಿದ್ಯುನ್ಮಾನ-ಆಡಳಿತದ (ಇ-ಆಡಳಿತ) ಉಪಕ್ರಮಿಕೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಕ್ರಿಯವಾಗಿದೆ. ರಾಜ್ಯದ ಇ-ಆಡಳಿತ ನೀತಿ ಮತ್ತು ತಂತ್ರಗಾರಿಕೆಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲು ಇ-ಆಡಳಿತ ಕೇಂದ್ರವನ್ನು ಸಂಘ-ಸಂಸ್ಥೆಗಳ ನೋಂದಾವಣೆ ಅಧಿನಿಯಮದ ಅಡಿಯಲ್ಲಿ 2006 ರಲ್ಲಿ ಒಂದು ನೋಡಲ್ ಸಂಸ್ಥೆಯಾಗಿ ಸೃಷ್ಟಿಸಲಾಗಿದೆ. ಇದು ರಾಜ್ಯದಲ್ಲಿ ಇ-ಆಡಳಿತ ಮೂಲಸೌಕರ್ಯಗಳ ಮತ್ತು ಮೂಲಭೂತ ಆಡಳಿತ ಸುಧಾರಣೆ ಆಧಾರಿತ ಅನ್ವಯಿಕಗಳನ್ನು ನಿರ್ವಹಿಸುವ ಪಾಲಕ ಸಂಸ್ಥೆಯಾಗಿದೆ. ವಸ್ತುತಃ ಈ ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ– (ಆಡಳಿತ ಸುಧಾರಣೆ – ಇ-ಆಡಳಿತ)) (ಡಿಪಿಎಆರ್- ಆಸು -ಇಆ) ಯ ಅಡಿಯಲ್ಲಿ ಸ್ಥಾಪಿತವಾಗಿದ್ದು, ಅದು ರಾಜ್ಯದ ಮುಖ್ಯಮಂತ್ರಿಗಳಿಗೇ ನೇರವಾಗಿ ಹೊಣೆಯಾಗಿರುವುದು ವಿಶೇಷವಾಗಿದೆ.

ಪ್ರಸ್ತುತದಲ್ಲಿ, ಅತ್ಯಾಧುನಿಕ ಎರಡು ದತ್ತಾಂಶ ಕೇಂದ್ರಗಳು, ಎಂ.ಪಿ.ಎಲ್.ಎಸ್. ತಂತ್ರಜ್ಞಾನ ಆಧಾರಿತ ಕರ್ನಾಟಕ ರಾಜ್ಯ ವಿಸ್ತೃತ ಜಾಲ (/ಕೆಸ್ವಾನ್) ಮತ್ತು ಮೂಲ ಅನ್ವಯಿಕಗಳಾದ ಇ-ಸಂಗ್ರಹಣೆ ಮತ್ತು ಎಚ್.ಆರ್.ಎಂ.ಎಸ್. ಇವುಗಳನ್ನು ನಿರ್ವಹಿಸುವ ಹೆಗ್ಗಳಿಕೆಯ ಕೇಂದ್ರವಾಗಿದ್ದು, ಶತ ಪ್ರತಿಶತ ಕಾರ್ಯನಿರ್ವಹಣೆಯ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬರುತ್ತಾ, ಕೆಲವು ಹೆಗ್ಗುರುತನ್ನೂ ಮೂಡಿಸಿದೆ. 

ನಮ್ಮ ಬಗ್ಗೆ

ಇ-ಆಡಳಿತ ಕೇಂದ್ರವು ಕರ್ನಾಟಕ ಸೊಸೈಟಿಗಳ (ಸಂಘಗಳ) ನೋಂದಣಿ ಕಾಯ್ದೆ 1960 ರ ಅಡಿಯಲ್ಲಿ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ವತಿಯಿಂದ ಸೃಜಿತವಾದ ಒಂದು ಸೊಸೈಟಿ ಆಗಿದೆ. ಇದರ ಚಟುವಟಿಕೆಯ ವ್ಯಾಪ್ತಿಯು ಕರ್ನಾಟಕ ರಾಜ್ಯವಾಗಿದೆ.  ಈ ಸಂಸ್ಥೆಯು 2006 ರಲ್ಲಿ ಸ್ಥಾಪಿತವಾಯಿತು. ಇ-ಆಡಳಿತ ಕೇಂದ್ರವು ಒಂದು ಸ್ವಾಯತ್ತ ಹಾಗೂ ಸ್ವತಂತ್ರ ಸಂಸ್ಥೆಯಾಗಿದ್ದು, ಕರ್ನಾಟಕದಲ್ಲಿ ವಿವಿಧ ಇ-ಆಡಳಿತ ಉಪಕ್ರಮಿಕೆಗಳನ್ನು ಸಾಕಾರಗೊಳಿಸಿ, ಅನುಷ್ಠಾನಗೊಳಿಸಿ ಸಮನ್ವಯಿಸುತ್ತದೆ.

ಇ-ಆಡಳಿತ ಕೇಂದ್ರವು ನಿರ್ವಹಿಸುವ ಯೋಜನೆಗಳು

ಇ-ಆಡಳಿತ ಕೇಂದ್ರವು (ಸಿ.ಇ.ಜಿ) ನಿರ್ವಹಿಸುವ ಯೋಜನೆಗಳನ್ನು ಒಟ್ಟಾರೆಯಾಗಿ ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ :

 

ಮೂಲ ಸೌಕರ್ಯ ಯೋಜನೆಗಳು

ರಾಜ್ಯ ದತ್ತಾಂಶ ಕೇಂದ್ರ (ಎಸ್.ಡಿ.ಸಿ), ಕೆ-ಸ್ವಾನ್, ಸೆಕ್-ಲ್ಯಾನ್ - ಈ ಮೂಲ ಸೌಕರ್ಯಗಳನ್ನು ಒದಗಿಸಿದ್ದು ಇದರ ಮೂಲಕ ರಾಜ್ಯದ ಎಲ್ಲಾ ಇ-ಆಡಳಿತ ಯೋಜನೆಗಳು ಕಾರ್ಯನಿರತವಾಗಿವೆ.

 

ಮೂಲ ಸಂಪನ್ಮೂಲ ಅನ್ವಯಿಕಗಳು

ಎಚ್.ಆರ್.ಎಂ.ಎಸ್., ಇ-ಸಂಗ್ರಹಣೆ, ಇತ್ಯಾದಿ ಸಂಪನ್ಮೂಲ ಅನ್ವಯಿಕಗಳನ್ನು ಇಲಾಖೆಗಳು, ಬಳಕೆದಾರರು ಮತ್ತು ನಾಗರೀಕರುಗಳು ಬಳಸಬಹುದಿರುತ್ತದೆ.

 

ನಾಗರೀಕ ಸೇವೆಗಳು

ಇದು ರಾಜ್ಯದ ನಿವಾಸಿಗಳಿಗೆ ಯು.ಐ.ಡಿ. (ಆಧಾರ್) ನೋಂದಣಿ ಕಾರ್ಯಕ್ರಮ.

 

ಕೆಪಾಸಿಟಿ ಬಿಲ್ಡಿಂಗ್

ಇ-ಆಡಳಿತ ಯೋಜನೆಗಳ ನಿರ್ವಹಣೆಗೆ ಅವಶ್ಯಕವಾದ ನಿರ್ದಿಷ್ಟ ಸಾಮರ್ಥ್ಯಗಳು ಮತ್ತು ನಿಪುಣತೆಗಳನ್ನು ಲಭ್ಯಗೊಳಿಸಿ ಇಲಾಖೆಗಳಲ್ಲಿ ಇ-ಆಡಳಿತ ಉಪಕ್ರಮಿಕೆಗಳನ್ನು ಯೋಜಿಸಲು ಮತ್ತು ಅನುಷ್ಠಾನಗೊಳಿಸಲು ಸಹಾಯ.

 

ಉದ್ದೇಶಗಳು

 • ಸಾಮಾನ್ಯ ಜನತೆಯ ಅನುಕೂಲಕ್ಕಾಗಿ ಮಾಹಿತಿ ತಂತ್ರಜ್ಞಾನದ ತ್ವರಿತ ಹಾಗೂ ಪ್ರಭಾವಶಾಲಿ ಬಳಕೆ
 • ಜನತೆಗೆ ಮಾಹಿತಿ ತಂತ್ರಜ್ಞಾನವನ್ನು ತಲುಪಿಸುವ ರಾಜ್ಯ ಸರ್ಕಾರದ ಗುರಿಯನ್ನು ಸಾಧಿಸಲು ರಾಜ್ಯದಲ್ಲಿನ ವಿವಿಧ ಇ-ಆಡಳಿತ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿ ಸಮನ್ವಯಗೊಳಿಸುವುದು.
 • ವಿವಿಧ ಸರಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ಯೋಜನೆಗಳಿಗೆ ತಾಂತ್ರಿಕ ಬೆಂಬಲ
 • ಅಂತರ್ಜಾಲ ಆಧಾರಿತ ಕೇಂದ್ರೀಕೃತ ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆ
 • ನಾಗರೀಕ ಕೇಂದ್ರಿತ ಸೇವೆಗಳು ಮತ್ತು ಮಾಹಿತಿ ಪೂರೈಕೆಗೆ ಸೇವೆಗಳು
 • ಒಂದಕ್ಕಿಂತ ಹೆಚ್ಚು ಇಲಾಖೆಗಳಿಗೆ ಉಪಯುಕ್ತವಾಗಬಹುದಾದ ಕೆಲವು ಅತ್ಯವಶ್ಯಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳೊಂದಿಗೆ ಸಂಯೋಜನೆ.

ಇತ್ತೀಚಿನ ನವೀಕರಣ​ : 24-12-2020 11:16 AM ಅನುಮೋದಕರು: superadmin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080