ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಪರಿಚಯ

ಕರ್ನಾಟಕ ಸರ್ಕಾರವು ಮಾರ್ಚ್ 2005 ರಲ್ಲಿ ಮಾನವ ಸಂಪನ್ಮೂಲ ಯೋಜನೆಯನ್ನು ಜಾರಿಗೆ ತರಲು ಪ್ರಾರಂಭಿಸಿದ್ದು, ಇದು ಇಡೀ ರಾಷ್ಟ್ರದಲ್ಲಿಯೇ  ವಿಶಿಷ್ಟ ಯೋಜನೆಯಾಗಿದೆ. ಮಾನವ ಸಂಪನ್ಮೂಲ ಯೋಜನೆಯನ್ನು ಇಂದು ಇಡೀ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಮಾ.ಸ.ನಿ.ಯೋ 5 ಲಕ್ಷಕ್ಕೂ ಅಧಿಕ ನೌಕರರ ವೇತನದ ಬಿಲ್ಲುಗಳನ್ನು ಸೃಜಿಸುತ್ತಿದೆ ಮತ್ತು ನೌಕರರ ಸೇವಾ ದಾಖಲೆಗಳನ್ನು ಸಹ ನಿರ್ವಹಿಸುತ್ತಿದೆ.

 

ಮಾನವ ಸಂಪನ್ಮೂಲ ನಿರ್ವಹಣಾ ಯೋಜನೆಯು (ಹೆಚ್.ಆರ್.ಎಂ.ಎಸ್.) ಅಥವಾ ಮಾನವ ಸಂಪನ್ಮೂಲ ಮಾಹಿತಿ ಯೋಜನೆ (ಹೆಚ್.ಆರ್.ಎಂ.ಎಸ್.) ಅಥವಾ ಮಾ.ಸಂ ತಾಂತ್ರಿಕ ರೂಪವು ಮಾನವ ಸಂಪನ್ಮೂಲ ನಿರ್ವಹಣೆ  (ಮಾ.ಸ.ನಿ) ಮತ್ತು ಮಾಹಿತಿ ತಂತ್ರಜ್ಞಾನದ ನಡುವಿನ ವಿಭಾಗವಾಗಿದೆ. ಅದು ಮಾ.ಸಂ.ನಿ.ಯೊಡನೆ ಒಂದು ವಿಷಯವಾಗಿ ಮತ್ತು ಪ್ರಮುಖವಾಗಿ ಅದು ಮೂಲ ಮಾ.ಸಂ ಚಟುವಟಿಕೆಗಳು ಹಾಗೂ ಕಾರ್ಯಗತಿಯು ಮಾಹಿತಿ ತಂತ್ರಜ್ಞಾನದೊಡನೆ ಸೇರಿಕೊಂಡಿದೆ.

  1. ಸರ್ಕಾರದ ಪರಿಸರದಲ್ಲಿ ಮಾನವ ಸಂಪನ್ಮೂಲ ನಿರ್ವಹಣಾ ಯೋಜನೆಯು ಬಹಳಷ್ಟು ನಿಯಮಗಳು ಮತ್ತು ನಿರೂಪಣೆಗಳನ್ನೊಳಗೊಂಡಿರುವ ಒಂದು ಕ್ಲಿಷ್ಟಕರ ಯೋಜನೆಯಾಗಿದೆ.  ಮಾ.ಸಂ.ನಿ. ಯೋಜನೆಯು ಎರಡು ಮುಖ್ಯ ಕಾರ್ಯಗಳ ಪಾಲನೆ ಮಾಡುತ್ತದೆ. – 1. ಸೇವಾ ದಾಖಲೆ ನಿರ್ವಹಣೆ ಮತ್ತು 2. ನೌಕರರ ವೇತನವಹಿಗಳ ಉತ್ಪಾದನೆ.
  2. ವೇತನವಹಿ ಪರಿವಿಡಿಯು ನೌಕರನ ವೇಳೆ ಮತ್ತು ಹಾಜರಾತಿ, ವಿವಿಧ ಕಟಾವಣೆ ಮತ್ತು ತೆರಿಗೆಗಳನ್ನು ಲೆಕ್ಕಹಾಕಿ ಹಾಗೂ ಕಾಲಿಕವೇತನ ಚೆಕ್ಕು ಮತ್ತು ನೌಕರನ ತೆರಿಗೆ ವರದಿಯ ಆಧಾರದಲ್ಲಿ ದತ್ತಾಂಶವನ್ನು ಸಂಗ್ರಹಿಸಿ ವೇತನದ ಕ್ರಿಯೆಯನ್ನು ಸ್ವಚಾಲಿತಗೊಳಿಸುವುದು. ಸರ್ಕಾರದಲ್ಲಿ ವೇತನದ ಬಿಲ್ಲನ್ನು ಆನಂತರ ಖಜಾನೆಗೆ ಪಾವತಿಸುವ ಸಲುವಾಗಿ ಸಲ್ಲಿಸಲಾಗುವುದು.
  3. ಸೇ.ದಾ.(ಸೇವಾ ದಾಖಲೆ) ಅಥವಾ ವೈಯಕ್ತಿಕ ವಿವರ ಪರಿವಿಡಿಯು ನೌಕರನು ಹೊಸದಾಗಿ ಸೇವೆಗೆ ಸೇರಿದ ದಿನಾಂಕದಿಂದ ನಿವೃತ್ತಿಯವರೆಗೆ ಅವನ ವಿವರಗಳನ್ನು ದಾಖಲಿಸುವ ಎಲ್ಲಾ ಇತರೆ ಮಾನವ ಸಂಪನ್ಮೂಲ ಅಂಶಗಳನ್ನೊಳಗೊಂಡ ಭಾಗವಾಗಿದೆ. ಯೋಜನೆಯು ಮೂಲ ನೌಕರರ ವಿವರಣೆ ಮತ್ತು ವಿಳಾಸದ ದತ್ತಾಂಶ ತರಬೇತಿ ಹಾಗೂ ಅಭಿವೃದ್ಧಿ ಸಾಮರ್ಥ್ಯ ಮತ್ತು ಕೌಶಲ್ಯ ನಿರ್ವಹಣಾ ದಾಖಲೆ ಮತ್ತು ಇತರೆ ಸಂಬಂಧಿತ ಚಟುವಟಿಕೆಗಳನ್ನು ದಾಖಲಿಸುತ್ತದೆ.

 

ಪ್ರಮುಖ ಲಕ್ಷಣಗಳು

  • ಇಡೀರಾಷ್ಟ್ರದಲ್ಲಿ  ಮಾ.ಸಂ.ನಿ.ಯೋಅನ್ನುಜಾರಿಗೊಳಿಸಿದಒಂದೇಒಂದುರಾಜ್ಯವಾಗಿದೆ.
  • ಅಧಿಕಾರಿಗಳ ಪ್ರವರ್ಗ/ನೌಕರರ ಮತ್ತು ವಿವಿಧ ವೇತನ ಶ್ರೇಣಿಗಳು ಅಂದರೆ ರಾಜ್ಯ, ಕೇಂದ್ರ, ಯುಜಿಸಿ, ಎಐಸಿಟಿಇ, ಒಂದು ಏಕಮೇವ ಕೇಂದ್ರೀಕೃತ ವೇದಿಕೆಯಿಂದ ವೇತನವನ್ನು ಸೆಳೆಯುತ್ತಿರುವುದು.
  • ವೆಬ್ ಆಧಾರಿತ ಅಪ್ಲಿಕೇಶನ್.
  • 24/7 ಲಭ್ಯತೆ.
  • ಭದ್ರತಾ ಪ್ರವೇಶಾವಕಾಶ.
  • ಸ್ಟೇಟ್ ಆಫ್ ದ ಹಾರ್ಟ್ ಮಾದರಿಯ ರಾಜ್ಯ ದತ್ತಾಂಶ ಕೇಂದ್ರ ಸಮೂಹ.
  • ಆನ್ ಲೈನ್ ಸಹಾಯ.
  • ಆನ್ ಲೈನ್ ಮೂಲಕ ದೋಷಗಳ ವರದಿ ಮತ್ತು ಮೇಲ್ವಿಚಾರಣೆ.

 

ವಿಸ್ತರಿಸಿದ ಸಿಬ್ಬಂದಿ ವೃಂದ

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಯು.ಜಿ.ಸಿ, ನ್ಯಾಯಾಂಗ, ಎಐಸಿಟಿಇ, ಸಂವಿಧಾನಿಕ ಹುದ್ದೆಗಳು

 

ಖಜಾನೆಯೊಡನೆ ಹೆಚ್.‌ಆರ್.‌ ಎಂ.ಎಸ್.‌ ಸಂಯೋಜನೆ

  • ವೇತನ ಸಂಸ್ಕರಣೆ ಮತ್ತು ಅನುಮೋದನೆಗಾಗಿ ಹೆಚ್‌.ಆರ್‌.ಎಂ.ಎಸ್. ತಂತ್ರಾಂಶವನ್ನು ರಾಜ್ಯ ಖಜಾನೆ ತಂತ್ರಾಂಶವಾದ – ಖಜಾನೆ-2 ಜೊತೆ ಸಂಯೋಜಿಸಲಾಗಿದೆ.
  • ಹೆಚ್.‌ಆರ್.ಎಂ.ಎಸ್.‌ ತಂತ್ರಾಂಶದಿಂದ ಖಜಾನೆ ತಂತ್ರಾಂಶಕ್ಕೆ ವೇತನ ಬಿಲ್ಲುಗಳ ವಿದ್ಯುನ್ಮಾನ ವರ್ಗಾವಣೆ.
  • ಖಜಾನೆಯಲ್ಲಿ ವೇತನ ಸಂಸ್ಕರಣೆಗಾಗಿ 90 ಕ್ಕಿಂತ ಹೆಚ್ಚು ಇಲಾಖೆಗಳನ್ನು ತರಲಾಗಿದೆ.
  • ವೇತನವು ನೇರವಾಗಿ ನೌಕರರ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗುತ್ತದೆ

ಇತ್ತೀಚಿನ ನವೀಕರಣ​ : 28-11-2019 01:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080