ಅಭಿಪ್ರಾಯ / ಸಲಹೆಗಳು

ದೃಷ್ಟಿ ಮತ್ತು ಅಂಕಿಅಂಶಗಳು

ದೃಷ್ಠಿಕೋನ

ಕರ್ನಾಟಕ ಸರ್ಕಾರವು ಮಾಹಿತಿ ತಂತ್ರಜ್ಞಾನದಲ್ಲಿ ಸದೃಢ ವಿಶ್ವಾಸ ಹೊಂದಿದೆ. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ನಾಗರೀಕರಿಗೆ ಸರ್ಕಾರದ ಪಾತ್ರವನ್ನು ಸ್ಪಷ್ಟಗೊಳಿಸುವುದು, ಸರ್ಕಾರದ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವುದು, ಪಾರದರ್ಶಕತೆಯನ್ನು ಮೂಡಿಸುವುದು, ನಿಖರ ಮತ್ತು ಸಕಾಲಕ್ಕೆ ಮಾಹಿತಿ ನೀಡುವುದು, ಗುರುತಿಸಲ್ಪಟ್ಟ ಸೇವೆಗಳನ್ನು ವಿದ್ಯುನ್ಮಾನ ರೂಪದಲ್ಲಿ ನೀಡುವ ಪ್ರಮುಖ ಗುರಿಯನ್ನು ಹೊಂದಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು 2002-03ನೇ ಸಾಲಿನಲ್ಲಿ ಇ-ಆಡಳಿತ ಯೋಜನೆಯನ್ನು ಪ್ರಾರಂಭಿಸಿತು. ಯೋಜನೆಯು ಒಳಗೊಂಡಿರುವ ಗುರಿಗಳನ್ನು ಅಳವಡಿಸಿಕೊಳ್ಳಲಾಯಿತು. ಅಂತಯೇ, ಸರ್ಕಾರದ ಖರೀದಿಗೆ ಸಂಬಂಧಿತ ಚಟುವಟಿಕೆಗಳನ್ನು ಆನ್‌ಲೈನ್‌ ಮೂಲಕವೇ ನಡೆಸಲು ಉದ್ದೇಶಿಸಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ವಿವರಣೆ : ಇ-ಸಂಗ್ರಹ ಜಾಲತಾಣವು ಖರೀದಿಗೆ ಸಂಬಂಧಿತ ಚಟುವಟಿಕೆಗಳಾದ ನಿರ್ಮಾನ, ಸರಕು, ಸೇವೆಗಳು, ಹರಾಜು ಮುಂತಾದವುಗಳಿಗೆ ಎಂಡ್‌ ಟು ಎಂಡ್‌ ವ್ಯವಸ್ಥೆಯಾಗಿದೆ. ಕಾರ್ಯಯೋಜನೆ, ಹರಾಜು, ಒಪ್ಪಂದಗಳ ನಿರ್ವಹಣೆ, ಕ್ಯಾಟಲಾಗ್‌ ನಿರ್ವಹಣೆ ಮುಂತಾದ ಚಟುವಟಿಕೆಗಳು ಆನ್‌ಲೈನ್‌ ಮೂಲಕವೇ ನಿರ್ವಹಿಲ್ಪಡುತ್ತವೆ.

ಯೋಜನೆ ಆರಂಭ : 1 ಡಿಸೆಂಬರ್‌ 2006

ಸಾಧನೆಗಳು

ಸಿ.ಎಸ್‌.ಐ. ನಿಹಿಲಿಂಟ್‌ ಇ—ಗವರ್ನೆನ್ಸ್‌ ಪ್ರಶಸ್ತಿ(ಕಂಪ್ಯೂಟರ್‌ ಸೊಸೈಟಿ ಆಫ್‌ ಇಂಡಿಯಾದಿಂದ): ಉತ್ತಮ ಜಿ ಟು ಬಿ ಯೋಜನೆಗೆ.

ನ್ಯಾಷನಲ್‌ ಇ-ಗವರ್ನೆನ್ಸ್‌ ಅವಾರ್ಡ್‌ (ಭಾರತ ಸರ್ಕಾರದಿಂದ): ಐಟಿಸಿ ಆಧಾರಿತ ಉತ್ತಮ ಬಳಕೆಗಾಗಿ.

ಫ್ಯೂಚರ್‌ ಇ-ಗವ್‌ ಅವಾರ್ಡ್‌( ಮಲೆಷಿಯಾ): ಉದ್ಯಮ ಉತ್ತಮ ಪ್ರಕ್ರಿಯೆಗೆ.

ಅಂಕಿಅಂಶಗಳು

ವಿವರಣೆ

2018-19

2019-20*

ಪ್ರಕಟಿಸಲಾಗಿರುವ ಟೆಂಡರ್‌ಗಳ ಸಂಖ್ಯೆ

113193

58768

ಟೆಂಡರ್‌ ಗಳಲ್ಲಿ ಭಾಗಿಯಾಗಿರುವ ಬಿಡ್‌ದಾರರ ಸಂ‍ಖ್ಯೆ

308415

146845

ಪ್ರಕಟಿಸಲಾಗಿರುವ ಹರಾಜುಗಳ ಸಂಖ್ಯೆ

3455

2171

ಪ್ರಕಟಿಸಲಾಗಿರುವ ಟೆಂಡರ್‌ಗಳ ಮೌಲ್ಯ(ಕೋಟಿ. ರೂ.ಗಳಲ್ಲಿ)

92395

47759

ನೋಂದಾಯಿಸಲ್ಪಟ್ಟಿರುವ ಹೊಸ ಪೂರೈಕೆದಾರರ ಸಂಖ್ಯೆ

12782

7188

ಇತ್ತೀಚಿನ ನವೀಕರಣ​ : 24-08-2020 04:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ ಸಂಗ್ರಹಣ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ