ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

2003 ರಲ್ಲಿ, ರಾಜ್ಯ ಸಚಿವಸಂಪುಟವು ಏಕೀಕೃತ ವಿದ್ಯುನ್ಮಾನ ಸಂಗ್ರಹಣಾ (ಇ-ಸಂಗ್ರಹಣೆ) ವೇದಿಕೆಯೊಂದನ್ನು ನಿರ್ಮಿಸಲು ಅನುಮೋದನೆ ನೀಡಿತ್ತು. ಇ-ಸಂಗ್ರಹಣಾ ಯೋಜನೆಗೆ ಒಟ್ಟಾರೆಯಾಗಿ ಮಾರ್ಗದರ್ಶನ ಮತ್ತು ದಿಕ್ಸೂಚನೆಗಳನ್ನು ನೀಡಲು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಮಾರ್ಗದರ್ಶನ ಸಮಿತಿಯನ್ನೂ ರಚಿಸಲಾಯಿತು.  ನೀತಿ ನಿಯಮಗಳ ಅನುಷ್ಠಾನ ಹಾಗೂ ಮಾರ್ಗದರ್ಶನ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿಗಳು ಹಾಗೂ ಇ-ಆಡಳಿತ ಕೇಂದ್ರದ ಅಧ್ಯಕ್ಷರ ನೇತೃತ್ವದಲ್ಲಿ ಯೋಜನಾ ಸಮನ್ವಯ ಸಮಿತಿಯೊಂದನ್ನು ರಚಿಸಲಾಯಿತು.

ಇ-ಆಡಳಿತ ಕೇಂದ್ರವು ಎಲ್ಲಾ ಇಲಾಖೆಗಳ ಅವಶ್ಯಕತೆಗನುಗುಣವಾಗಿ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಪಾರದರ್ಶಕವಾಗಿ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಿಸಲು ತಂತ್ರಾಂಶ ಆಧಾರಿತ ಸಲಹೆ ಸೂಚನೆಗಳನ್ನು ನೀಡುವ ಸಂಸ್ಥೆಯಾಗಿದೆ. ಜೊತೆಗೆ ಯಾವುದೇ ಇಲಾಖೆ ಇ-ಆಡಳಿತವನ್ನು ಅಳವಡಿಸಲು ಅನುಕೂಲವಾಗುವಂತೆ ತಂತ್ರಜ್ಞರ ಸೇವೆಯನ್ನು ಕೂಡ ಒದಗಿಸಿಕೊಡುತ್ತದೆ. ಅಲ್ಲದೆ, ಎಲ್ಲಾ ಇಲಾಖೆಗಳಿಗೂ ಅನ್ವಯವಾಗುವಂಥ ಕೆಲವು ಯೋಜನೆಗಳನ್ನು ರೂಪಿಸಿ ಈ ನಿಟ್ಟಿನಲ್ಲಿ ಕಾರ್ಯವನ್ನು ಜರುಗಿಸುತ್ತಿವೆ. ಉದಾಹರಣೆಗೆ,

  1. ಇ-ಸಂಗ್ರಹಣೆಯು ಸರ್ಕಾರವು ಬೃಹತ್ ಪ್ರಮಾಣದ ಸಂಗ್ರಹಣೆ ಮಾಡುವ ಕಾರ್ಯವಾಗಿರುತ್ತದೆ. ಈ ರೀತಿಯ ಸಂಗ್ರಹಣೆಯು ಪಾರದರ್ಶಕವಾಗಿ ಮತ್ತು ಅತ್ಯಂತ ದಕ್ಷ ರೀತಿಯಲ್ಲಿ ಜರುಗುವುದು ಅತ್ಯಾವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಇ-ಆಡಳಿತ ಕೇಂದ್ರವು ಈ ಯೋಜನೆಯನ್ನು ರೂಪಿಸಿ 2006ರಿಂದ ಯೋಜನೆಯು ಪ್ರಗತಿಯಲ್ಲಿದ್ದು, ರೂ.2,54,774 ಕೋಟಿಗಳಿಗಿಂತ ಮೇಲ್ಪಟ್ಟು ಸಂಗ್ರಹಣ ಪ್ರಕ್ರಿಯೆ ಈ ವೇದಿಕೆಯ ಮುಖಾಂತರ ನಡೆದಿದೆ.
  2. ಈ ಸಂಗ್ರಹಣ ಪ್ರಕ್ರಿಯೆ ವೆಬ್ ಆಧಾರಿತವಾದುದರಿಂದ ಯಾವುದೇ ವ್ಯಕ್ತಿ ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಯಾವುದೇ ಒತ್ತಡವಿಲ್ಲದೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ  ಅವಕಾಶವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಡ್ ದಾರರು ಭಾಗವಹಿಸುತ್ತಿದ್ದಾರೆ. ಇದರಿಂದಾಗಿ ಅಂದಾಜು ವೆಚ್ಚಕ್ಕಿಂತ ಬಿಡ್ ಮಾಡುವ ಮೊಬಲಗು ಶೇ.10ರಷ್ಟು ಕಡಿಮೆಯಾಗಿದೆಯೆಂದು ಅಂದಾಜಿಸಲಾಗಿದೆ. ಜೊತೆಗೆ ಈ ಸಂಪೂರ್ಣ ಯೋಜನೆಯು ಆನ್ಲೈನ್ ಆಗಿದ್ದು, ಕಾಗದರಹಿತ ಯೋಜನೆಯಾಗಿರುವುದು ಕೂಡ ಇದರ ವೈಶಿಷ್ಟ್ಯ.

 

 

ಇತ್ತೀಚಿನ ನವೀಕರಣ​ : 07-07-2020 02:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇ ಸಂಗ್ರಹಣ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080