ಅಭಿಪ್ರಾಯ / ಸಲಹೆಗಳು

ಪುನರಾವರ್ತಿತ ಪ್ರಶ್ನೆಗಳು

ಉತ್ತರ

ಆಧಾರ್ ಎಂದರೆ ಆಧಾರ ಅಥವಾ ಅಡಿಪಾಯ ಎಂಬ ಅರ್ಥವನ್ನು ಕೊಡುತ್ತದೆ,ಆದ್ದರಿಂದ, ಯಾವುದೇ ವಿತರಣಾ ವ್ಯವಸ್ಥೆಯನ್ನು ಅದರ ಆಧಾರದ ಮೇರೆಗೆ ಸೃಷ್ಟಿಸಬಹುದು/ನಿರ್ಮಿಸಬಹುದು.ನಿವಾಸಿಯ ಗುರುತನ್ನು ಸಾಬೀತು ಪಡಿಸುವ ಅಗತ್ಯತೆಯನ್ನು ಹೊಂದಿರುವ ಯಾವುದೇ ವ್ಯವಸ್ಥೆಯಲ್ಲಿ ಆಧಾರ್ ಅನ್ನು ಬಳಸಬಹುದು ಮತ್ತು/ಅಥವಾ ವ್ಯವಸ್ಥೆಯು ನೀಡುವ ಸೇವೆಗಳು/ಪ್ರಯೋಜನಗಳನ್ನು ಗಮನಿಸುವುದಕ್ಕಾಗಿ ನಿವಾಸಿಗೆ ಭದ್ರತೆಯ ಅವಕಾಶವನ್ನು ಒದಗಿಸಬಹುದು. ಈ ಕೆಳಗಿನ ಕಾರ್ಯಕ್ರಮಗಳ ವಿತರಣೆಯಲ್ಲಿ ಆಧಾರ್ ಅನ್ನು ಬಳಸಬಹುದು: ಆಹಾರ ಮತ್ತು ಪೌಷ್ಠಿಕಾಂಶಗಳು – ಸಾರ್ವಜನಿಕ ವಿತರಣಾ ವ್ಯವಸ್ಥೆ, ಆಹಾರ ಭದ್ರತೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಉದ್ಯೋಗ – ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವರ್ಣಜಯಂತಿ ಗ್ರಾಮ ಸ್ವರೋಝಗಾರ್ ಯೋಜನೆ, ಇಂದಿರಾ ಆವಾಜ್ ಯೋಜನೆ, ಪ್ರಧಾನ ಮಂತ್ರಿಗಳ ಉದ್ಯೋಗ ಖಾತರಿ ಯೋಜನೆ ಶಿಕ್ಷಣ – ಸರ್ವ ಶಿಕ್ಷಾ ಅಭಿಯಾನ, ಶಿಕ್ಷಣಕ್ಕಾಗಿ ಹಕ್ಕು ಒಳಸೇರ್ಪಡೆ ಮತ್ತು ಸಾಮಾಜಿಕ ಭದ್ರತೆ – ಜನನಿ ಸುರಕ್ಷಾ ಯೋಜನೆ, ಆದಿಮಾನವ ಬುಡಕಟ್ಟು ಗುಂಪುಗಳ ಅಭಿವೃದ್ಧಿ, ಇಂದಿರಾ ಗಾಂಧಿ ರಾಷ್ಟೀಯ ವೃದ್ಧಾಪ್ಯ ಪಿಂಚಣಿ ವ್ಯವಸ್ಥೆ ಆರೋಗ್ಯಪಾಲನೆ – ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ಜನಶ್ರೀ ಬಿಮಾ ಯೋಜನೆ, ಆಮ್ ಆದ್ಮಿ ಬಿಮಾ ಯೋಜನೆ ಆಸ್ತಿ ವ್ಯವಹಾರಗಳು, ಮತದಾರರ ಗುರುತಿನ ಚೀಟಿ, ಶಾಶ್ವತ ಖಾತೆ ಸಂಖ್ಯೆ ಕಾರ್ಡು, ಇತ್ಯಾದಿ ಇತರೆ ನಾನಾರೀತಿಯ ಉದ್ದೇಶಗಳು.

ಉತ್ತರ

ಇಲ್ಲ, ಎಂ-ಆಧಾರ್ ಸ್ಥಿರ ಸಾಧನಗಳ ಮೇಲೆ ಕಾರ್ಯನಿರ್ವಹಿಸುವುದಿಲ್ಲ.

ಉತ್ತರ

ಸ್ಥಿರಗೊಳಿಸುವಿಕೆ (ರೂಟಿಂಗ್) ಎಂದರೆ ಸ್ಮಾರ್ಟ್ ಫೋನುಗಳು, ಟ್ಯಾಬ್ಲೆಟ್ ಗಳು ಮತ್ತಿತರೆ ಸಾಧನಗಳ ಬಳಕೆದಾರರುಗಳಿಗೆ ವಿವಿಧ ಆಂಡ್ರಾಯ್ಡ್ ಉಪ-ವ್ಯವಸ್ಥೆಗಳ ಮೇಲೆ ವಿಶೇಷ ನಿಯಂತ್ರಣವನ್ನು (ಸ್ಥಿರ/ಮೂಲ ವೀಕ್ಷಣೆ ಎಂಬುದಾಗಿ ಪರಿಚಿತವಾಗಿರುವ) ಸಾಧಿಸುವ ಸಲುವಾಗಿ ಆಂಡ್ರಾಯ್ಡ್ ಮೊಬೈಲು ಕಾರ್ಯಾಚರಣೆ ವ್ಯವಸ್ಥೆಯನ್ನು ನಡೆಸಲು ಅನುವು ಮಾಡಿಕೊಡುವುದು.

ಉತ್ತರ

ನೋಂದಣಿ ಕೇಂದ್ರದಲ್ಲಿನ ನಿರ್ವಾಹಕರ ಪಾತ್ರವು ಭಾವಿಗುಪ್ರಾದ ಮಾರ್ಗಸೂಚಿಗಳ ಅನುಸಾರ ಜನಸಂಖ್ಯಾಶಾಸ್ತ್ರಕ್ಕೆ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವುದು. ಒಂದು ಆಧಾರ್ ನೋಂದಣಿ ಕೇಂದ್ರದಲ್ಲಿ ಓರ್ವ ನಿರ್ವಾಹಕರಾಗಿ ಆತನ/ಆಕೆಯ ಪಾತ್ರವನ್ನು ನಿರ್ವಹಿಸುತ್ತಿರುವ ವೇಳೆಯಲ್ಲಿ ಈ ಕೆಳಗಿನ “ಹದಿನೈದು ಷರತ್ತುಗಳನ್ನು” ಖಚಿತಪಡಿಸಿಕೊಳ್ಳತಕ್ಕದ್ದು: ನೋಂದಣಿಗಳನ್ನು ಕೈಗೊಳ್ಳುವ ಸಲುವಾಗಿ ನಿಮ್ಮ ಸ್ವಂತ ನಿರ್ವಾಹಕ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಕ್ಲೈಂಟಿನಲ್ಲಿ ಲಾಗ್ ಇನ್ ಆಗುವುದನ್ನು ಮತ್ತು ನೋಂದಣಿಗಳಿಗಾಗಿ ನಿಮ್ಮ ಲಾಗ್ ಇನ್ ವಿಂಡೋ ಅನ್ನು ಮತ್ಯಾರೂ ಬಳಸದಂತೆ ನಿಮ್ಮ ಆಸನದಿಂದ ಎದ್ದು ಹೋಗುವಾಗ ಲಾಗ್ ಆಫ್ ಆಗುವುದನ್ನು ಖಚಿತಪಡಿಸಿಕೊಳ್ಳುವುದು. ಪ್ರತಿ ದಿನವೂ ನೋಂದಣಿಗಳ ಪ್ರಾರಂಭದಲ್ಲಿ ಜಿಪಿಎಸ್ ಸುಸಂಘಟಿತಗಳನ್ನು ಸೆರೆಹಿಡಿಯುವುದು. ಪ್ರತಿಯೊಂದು ಸಲ ಲಾಗ್ ಇನ್ ಆದಾಗ, ಗಣಕಯಂತ್ರದಲ್ಲಿನ ದಿನಾಂಕ ಮತ್ತು ಸಮಯವು ಇಂದಿನದಾಗಿರುವುದನ್ನು ಖಚಿತಪಡಿಸಿಕೊಳ್ಳುವುದು. ಸ್ಟೇಷನ್ನು ವಿನ್ಯಾಸವು ಭವಿಗುಪ್ರಾದ ಮಾರ್ಗಸೂಚಿಗಳ ಅನುಸಾರ ಇರುವುದನ್ನು ಖಚಿತಪಡಿಸಿಕೊಳ್ಳುವುದು. ನಿವಾಸಿಯನ್ನು ಆರಾಮವಾಗಿ ಇರಿಸುವಿಕೆಗಾಗಿ ಮತ್ತು ಮಾಹಿತಿಯನ್ನು ಸೆರೆಹಿಡಿಯುವುದಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ನೋಂದಣಿ ಪ್ರಕ್ರಿಯೆಗೆ ಮೊದಲು ಮತ್ತು ಪ್ರಕ್ರಿಯೆಯ ಸಮಯದಲ್ಲಿ ನೋಂದಣಿ/ಇಂದಿನದಿನದನ್ನಾಗಿಸುವಿಕೆಯ ಪ್ರಕ್ರಿಯೆಯನ್ನು ನಿವಾಸಿಗೆ ಸಂಕ್ಷಿಪ್ತವಾಗಿ ತಿಳಿಸುವುದು. “ಒದಗಿಸಲಾಗಿರುವ ಆಧಾರ್ ಅನುಕೂಲತೆಯನ್ನುಕಂಡುಹಿಡಿಯಿರಿ” (“Find Aadhaar Facility”), ಇದನ್ನು ಉಪಯೋಗಿಸಿಕೊಂಡು ಒಂದು ಹೊಸದಾದ ನೋಂದಣಿಯನ್ನು ಮಾಡುವ ಮೊದಲು ನಿವಾಸಿಯು ಈ ಮೊದಲು ಆಧಾರ್ ಗಾಗಿ ನೋಂದಣಿ ಮಾಡಿಸಿಕೊಂಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ನಿವಾಸಿಯಿಂದ ಕೋರಲಾಗಿರುವ ಮತ್ತು ಯಾರ ನೋಂದಣಿ/ಇಂದಿನದಿನದನ್ನಾಗಿಸುವಿಕೆಯನ್ನು ಮಾಡಲಾಗುತ್ತಿದೆಯೋ ಅಂತಹ ನಿವಾಸಿಗೇ ಸಂಬಂಧಿಸಿರುವ ನೋಂದಣಿಯ ಮಾದರಿ/ಇಂದಿನದಿನದನ್ನಾಗಿಸುವಿಕೆಗೆ ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳು ಲಭ್ಯವಿರುವವು ಎಂಬುದನ್ನು ಖಚಿತಪಡಿಸಿಕೊಳ್ಳುವುದು. ನಿವಾಸಿಗೆ ಮುಂದಿನ ಮಾಹಿತಿಗಳನ್ನು ಕಳುಹಿಸುವ ಸಲುವಾಗಿ ಮತ್ತು ದೃಢೀಕರಣ ಆಧಾರಿತ ಒಂದು ಸಲದ ಸಂಕೇತಪದ ಮತ್ತು ಆನ್ ಲೈನ್ ಆಧಾರ್ ಇಂದಿನದಿನದನ್ನಾಗಿ ಮಾಡುವಿಕೆಯ ಅನುಕೂಲತೆ ಮುಂತಾದ ಇತರೆ ಬಳಕೆಗಾಗಿ ತಮ್ಮ ಮೊಬೈಲು ಸಂಖ್ಯೆಯನ್ನು ನೀಡುವಂತೆ ನಿವಾಸಿಗೆ ಪ್ರೊತ್ಸಾಹಿಸುವುದು. ನಿವಾಸಿಯ ಆಧಾರ್ ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ನಮೂನೆಯನ್ನು ಪರಿಶೀಲಿಸಲಾಗಿದೆ ಮತ್ತು ಪರಿಶೀಲಿಸಿದವರು ಸಹಿಯನ್ನು/ಹೆಬ್ಬೆಟ್ಟು ಮುದ್ರೆಯನ್ನು ಮೊಹರು/ಸಣ್ಣ ಸಹಿಗಳನ್ನು ಹಾಕಿರುವರು ಎಂಬುದನ್ನು ಖಚಿತಪಡಿಸಿಕೊಳ್ಳುವುದು. ನಮೂನೆಯು ನಿವಾಸಿಯ (ಅರ್ಜಿದಾರರ) ಸಹಿ/ಹೆಬ್ಬೆಟ್ಟು ಮುದ್ರೆಯನ್ನು ಹೊಂದಿರತಕ್ಕದ್ದು. ಆತನ/ಆಕೆಯ ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಆಧಾರ್ ನೋಂದಣಿ/ಇಂದಿನದಿನದನ್ನಾಗಿ ಮಾಡುವಿಕೆಗಾಗಿ ಮಾತ್ರ ಬಳಸಲಾಗುವುದು ಮತ್ತು ಇತರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗುವುದಿಲ್ಲ ಎಂಬುದನ್ನು ನಿವಾಸಿಗೆ ಅತ್ಯುತ್ತಮವಾಗಿ ಮಾಹಿತಿಯನ್ನು ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಪರಿಚಯಿಸುವವರು/ಕುಟುಂಬದ ಮುಖ್ಯಸ್ಥರುಗಳನ್ನು ಆಧಾರಿತ ನೋಂದಣಿಗೆ ಸಂಬಂಧಿಸಿದಂತೆ, ಪರಿಚಯಿಸುವವರ/ಕುಟುಂಬದ ಮುಖ್ಯಸ್ಥರ ಸಹಿ/ಹೆಬ್ಬೆಟ್ಟು ಮುದ್ರೆಯು ಅನುಕ್ರಮವಾಗಿ ಪರಿಚಯಿಸುವವರ/ಕುಟುಂಬದ ಮುಖ್ಯಸ್ಥರಿಗಾಗಿ ಅನುವು ಮಾಡಲಾಗಿರುವ ಅಂಕಣಗಳಲ್ಲಿ ಅವರುಗಳ ವಿವರಗಳೊಂದಿಗೆ ನಮೂನೆಯಲ್ಲಿ ಲಭ್ಯವಿರತಕ್ಕದ್ದು. ನಿವಾಸಿಯ ಜನಸಂಖ್ಯಾಶಾಸ್ತ್ರಕ್ಕೆ ಮತ್ತು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಆಧಾರ್ ಕ್ಲೈಂಟ್ ತಂತ್ರಾಂಶ ಅನ್ವಯದಲ್ಲಿ (ಇಸಿಎಂಪಿ/ಯುಸಿಎಲ್) ಮಾಹಿತಿ ಸೆರೆಹಿಡಿಯುವಿಕೆ ಕ್ರಮಾನುಗತಿಯಲ್ಲಿ ಸೆರೆಹಿಡಿಯುವುದು. ನೋಂದಣಿ/ಇಂದಿನದಿನದನ್ನಾಗಿಸುವಿಕೆ ಸಮಯದಲ್ಲಿ ನಿವಾಸಿಯ ಪರದೆಯು ಆನ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಊಡಿಕೆ ಮಾಡಲಾಗಿರುವ ಮಾಹಿತಿಯನ್ನು ಅಡ್ಡ ಪರಿಶೀಲನೆ ಮಾಡುವಂತೆ ನಿವಾಸಿಯನ್ನು ಕೋರುವುದು ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲು ನಿವಾಸಿಯೊಂದಿಗೆ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸಮೀಕ್ಷಿಸುವುದು. ನೋಂದಣಿಯ ಅಂತ್ಯದಲ್ಲಿ ಸ್ವೀಕೃತಿ ಪತ್ರವನ್ನು ಮುದ್ರಿಸುವುದು, ಸಹಿ ಮಾಡುವುದು ಮತ್ತು ನಿವಾಸಿಗೆ ನೀಡುವುದು ಮತ್ತು ಒಪ್ಪಿಗೆ ಪತ್ರಗೆ ನಿವಾಸಿಯ ಸಹಿಯನ್ನು ಪಡೆಯುವುದು. ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ನಮೂನೆ, ಮೂಲ ಬೆಂಬಲಿತ ದಾಖಲೆಗಳು ಮತ್ತು ಸಹಿ ಮಾಡಲ್ಪಟ್ಟಿರುವ ಒಪ್ಪಿಗೆ ಚೀಟಿಯನ್ನು ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ಕ್ಲೈಂಟಿನಲ್ಲಿ ಊಡಿಕೆ ಮಾಡಲಾಗಿದೆ ಮತ್ತು ಎಲ್ಲಾ ದಾಖಲೆಗಳನ್ನೂ ನಿವಾಸಿಗೆ ಹಿಂತಿರುಗಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.

ಉತ್ತರ

ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ಸಲುವಾಗಿ ಮಾರ್ಗಸೂಚಿಗಳು: ಪರಿಶೀಲಿಸಲ್ಪಟ್ಟ ನೋಂದಣಿ/ಇಂದಿನದಿನದನ್ನಾಗಿಸುವಿಕೆಗಾಗಿನ ನಮೂನೆಯಿಂದ ನಿವಾಸಿಯ ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯ ವಿವರಗಳನ್ನು ಊಡಿಕೆ ಮಾಡಿರಿ. ಆಧಾರ್ ಅನ್ನು ಇಂದಿನದಿನದನ್ನಾಗಿಸುವಿಕೆಗೆ ಸಂಬಂಧಿಸಿದಂತೆ, ಇಂದಿನದಿನದನ್ನಾಗಿ ಮಾಡಬೇಕಾದ ಅಂಕಣಗಳನ್ನು/ಕ್ಷೇತ್ರಗಳನ್ನು ಮಾತ್ರ ಗುರುತಿಸುವುದು ಮತ್ತು ಭರ್ತಿ ಮಾಡತಕ್ಕದ್ದು. ಈ ವಿವರಗಳನ್ನು ಬಳಸಿಕೊಂಡು ಭಾವಿಗುಪ್ರಾವು ನಿವಾಸಿಯ ಜೊತೆ ಸಂಪರ್ಕವನ್ನು ಕಲ್ಪಿಸಿಕೊಳ್ಳುವ ಸಲುವಾಗಿ ಮೊಬೈಲ್ ಸಂಖ್ಯೆ ಮತ್ತು ಇ-ಮೈಲು ವಿಳಾಸವನ್ನು ನಮೂನೆಯಲ್ಲಿ ಸೇರಿಸಲು ನಿವಾಸಿಗೆ ಪ್ರೋತ್ಸಾಹಿಸುವುದು. ಜನಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯನ್ನು ಸೆರೆಹಿಡಿಯುವ ವೇಳೆಯಲ್ಲಿ ಮಾಹಿತಿಯ ತತ್ವಗಳಿಗೆ ಗಮನ ಹರಿಸುವುದು. ಅಂತರಗಳು, ವಿರಾಮಚಿಹ್ನೆಗಳು, ದೊಡ್ಡ ಮತ್ತು ಸಣ್ಣ ಅಕ್ಷರಗಳ ಅಸಮರ್ಪಕ ಬಳಕೆಯನ್ನು ತಪ್ಪಿಸುವುದು. ಅಸಭ್ಯ ಭಾಷೆಯನ್ನು ಮತ್ತು ತಪ್ಪುಗಳಿಂದ ಕೂಡಿದ ಲಿಪ್ಯಂತರಣವನ್ನು ತಪ್ಪಿಸುವುದು. ನಿವಾಸಿಯು ಮಾಹಿತಿಯನ್ನು ನೀಡದ ಕಡ್ಡಾಯವಲ್ಲದ ಖಾಲಿ ಅಂಕಣ/ಕ್ಷೇತ್ರವನ್ನು ಬಿಟ್ಟುಬಿಡುವುದು. ನಿವಾಸಿಯು ಯಾವುದೇ ಮಾಹಿತಿಯನ್ನೂ ನೀಡದ ಕ್ಷೇತ್ರಗಳಲ್ಲಿ/ಅಂಕಣಗಳಲ್ಲಿ ಅನ್ವಯಗೊಳ್ಳುವುದಿಲ್ಲ, ಲಭ್ಯವಿಲ್ಲ, ಇತ್ಯಾದಿಗಳನ್ನು ಊಡಿಕೆ ಮಾಡಕೂಡದು. ಒಂದು ವೇಳೆ ವಯಸ್ಕರು ನೀಡುವ ಸ್ಥಿತಿಯಲ್ಲಿ ಇಲ್ಲವಾದಲ್ಲಿ ಅಥವಾ ನೀಡಲು ಇಚ್ಚಿಸದಿದ್ದಲ್ಲಿ, 5 ವರ್ಷಗಳಿಗೆ ಮೇಲ್ಪಟ್ಟ ನಿವಾಸಿಗಳಿಗೆ ತಂದೆ/ತಾಯಿ/ಗಂಡ/ಹೆಂಡತಿ/ಪೋಷಕರು, ಈ ಕ್ಷೇತ್ರ/ಅಂಕಣಗಳನ್ನು ಭರ್ತಿ ಮಾಡುವುದು ಕಡ್ಡಾಯವಲ್ಲ. 5 ವರ್ಷಗಳಿಗೆ ಕಡಿಮೆ ವಯಸ್ಸಿನ ಮಕ್ಕಳಿಗೆ ಸಂಬಂಧಿಸಿದಂತೆ, ತಂದೆತಾಯಿಯರಲ್ಲಿ ಒಬ್ಬರು ಅಥವಾ ಪೋಷಕರ ಹೆಸರು ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸತಕ್ಕದ್ದು. ತಂದೆತಾಯಿಯರ ಹೆಸರಿನ ಪ್ರತಿಯಾಗಿ ಕೇವಲ ತಂದೆಯ ಹೆಸರನ್ನು ದಾಖಲಿಸುವುದು ಕಡ್ಡಾಯವಲ್ಲ. ತಂದೆತಾಯಿಯರ ಹೆಸರಿನ ಪ್ರತಿಯಾಗಿ ತಾಯಿಯ ಹೆಸರನ್ನು ಮಾತ್ರ ದಾಖಲಿಸಬಹುದು ಅಥವಾ ತಂದೆತಾಯಿಯರು ಅಪೇಕ್ಷಿಸಿದಲ್ಲಿ ಪೋಷಕರ ಹೆಸರನ್ನು ದಾಖಲಿಸಬಹುದು. ಮಗುವಿಗೆ ಮುಂಚಿತವಾಗಿ ತಂದೆತಾಯಿಯರ ನೋಂದಣಿಯು ಕಡ್ಡಾಯ. ಮಗುವಿನ ತಂದೆ/ತಾಯಿ/ಪೋಷಕರು ನೋಂದಣಿ ಮಾಡಿಸಿಕೊಂಡಿಲ್ಲವಾದಲ್ಲಿ ಅಥವಾ ನೋಂದಣಿಯ ಸಮಯದಲ್ಲಿ ಆಧಾರ್ ಸಂಖ್ಯೆಯನ್ನು ಹೊಂದಿಲ್ಲವಾದಲ್ಲಿ, ಮಗುವಿನ ನೋಂದಣಿಯನ್ನು ಮಾಡಲಾಗುವುದಿಲ್ಲ. ಕುಟುಂಬದ ಮುಖ್ಯಸ್ಥರನ್ನು ಆಧಾರಿತ ಪರಿಶೀಲನೆಗೆ, ಹೆಸರು, ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆ ಮತ್ತು ಕುಟುಂಬದ ಸದಸ್ಯರಿಗೆ ಕುಟುಂಬದ ಮುಖ್ಯಸ್ಥರ ಸಂಬಂಧದ ವಿವರಗಳನ್ನು ದಾಖಲಿಸತಕ್ಕದ್ದು.

ಉತ್ತರ

ನಿರ್ವಾಹಕರು ತದನಂತರ ನಿವಾಸಿಗಾಗಿ ಸೆರೆಹಿಡಿಯಲಾದ ಮಾಹಿತಿಗೆ ಸ್ವತ: ಆತನೇ/ಆಕೆಯೇ ಸಹಿ ಮಾಡುವರು. ನೀವು ಮಾಡಿದ ನೋಂದಣಿಗೆ ಇತರರು ಸಹಿ ಮಾಡಲು ಅವಕಾಶ ನೀಡಕೂಡದು. ಇತರರು ಮಾಡಿದ ನೋಂದಣಿಗೆ ನೀವು ಸಹಿ ಮಾಡಕೂಡದು ನೋಂದಣಿ ಮಾಡಿಸಿಕೊಳ್ಳುವವರು ಜೀವಸಂಖ್ಯಾಶಾಸ್ತ್ರಕ್ಕೆ ಸಂಬಂಧಿತ ಮಾಹಿತಿಯಿಂದ ವಿನಾಯಿತಿಗಳನ್ನು ಹೊಂದಿದ್ದಲ್ಲಿ ನಿರ್ವಾಹಕರು ಮೇಲ್ವಿಚಾರಕರ ಸಹಿಯನ್ನು ಪಡೆಯುವರು. ಪರಿಶೀಲನೆಯ ಮಾದರಿಯನ್ನು ಪರಿಚಯಿಸುವವರು/ಕುಟುಂಬದ ಮುಖ್ಯಸ್ಥರಿಗೆ ಸಂಬಂಧಿಸಿದ್ದು ಎಂಬುದಾಗಿ ಆಯ್ಕೆ ಮಾಡಿದ್ದಲ್ಲಿ ಪರಿಚಯಿಸುವವರು/ಕುಟುಂಬದ ಮುಖ್ಯಸ್ಥರ ಸಹಿಯನ್ನು ಪಡೆಯತಕ್ಕದ್ದು. ನೋಂದಣಿಯ ಸಮಯದಲ್ಲಿ ಪರಿಚಯಿಸುವವರು ಭೌತಿಕವಾಗಿ ಉಪಸ್ಥಿತರಿಲ್ಲದಿದ್ದಲ್ಲಿ ಅಂತಹ ನೋಂದಣಿಯನ್ನು ದಿನದ ಅಂತ್ಯದಲ್ಲಿ ಪರಿಚಯಿಸುವವರು ಪರಿಶೀಲಿಸಬಹುದಾದ ಮತ್ತು ಸಹಿ ಮಾಡಬಹುದಾದ ರೀತಿಯಲ್ಲಿ ಪರಿಶೀಲನಾ ಅಂಕಣ/ಕ್ಷೇತ್ರ “ತದನಂತರ ಲಗತ್ತಿಸಲಾಗುವುದು” ("Attach later") ಅಯ್ಕೆ ಮಾಡಿಕೊಳ್ಳುವುದು. ನಿರ್ವಾಹಕರು ಅಡಕದಲ್ಲಿ ಮುದ್ರಿಸಬೇಕಾದ ಮುದ್ರಿತ ಸ್ವೀಕೃತಿಯ ಮೇಲೆ ಕಾನೂನಾತ್ಮಕ/ಘೋಷಣಾ ವಿಷಯವನ್ನು ಮುದ್ರಿಸ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು. ಸ್ವೀಕೃತಿ ಪತ್ರವನ್ನು ಯಾವ ಭಾಷೆಯಲ್ಲಿ ಮುದ್ರಿಸಬೇಕು ಎಂಬುದರ ಬಗ್ಗೆ ಆತನ/ಆಕೆಯ ಆಯ್ಕೆಯನ್ನು ನೀಡುವಂತೆ ನಿರ್ವಾಹಕರು ನಿವಾಸಿಯನ್ನು ಕೋರತಕ್ಕದ್ದು. ಘೋಷಣಾ ಭಾಷೆಯ ಆಯ್ಕೆಯನ್ನು ಮಾಡಿದನಂತರ, ಮುದ್ರಿತ ರಸೀದಿಯನ್ನು ಆಯ್ಕೆ ಮಾಡಲಾದ ಭಾಷೆಯಲ್ಲಿ ಅಂದರೆ ಆಂಗ್ಲ ಭಾಷೆಯ್ ಅಥವಾ ವಿನ್ಯಾಸ ಪರದೆಯಲ್ಲಿ ಊಡಿಕೆ ಮಾಡಲಾಗಿರುವ ಯಾವುದೇ ಸ್ಥಳೀಯ ಭಾಷೆಯಲ್ಲಿ ಮುದ್ರಿಸಲಾಗುವುದು. ಒಪ್ಪಿಗೆ ಪತ್ರದಲ್ಲಿ ನಿವಾಸಿಯ ಸಹಿಯನ್ನು ಪಡೆದುಕೊಳ್ಳುವುದು ಮತ್ತು ನಿವಾಸಿಯ ಇತರೆ ದಾಖಲೆಗಳ ಜೊತೆ ಇಡುವುದು. ಅವುಗಳು ಭಾವಿಗುಪ್ರಾಕ್ಕೆ ನಿವಾಸಿಯ ಒಪ್ಪಿಗೆ ಇರುವುದು/ಒಪ್ಪಿಗೆ ಇಲ್ಲದಿರದವುಗಳಾಗಿರುತ್ತವಾದ್ದರಿಂದ, ನಿವಾಸಿಯ ಒಪ್ಪಿಗೆಯು ಪ್ರಮುಖವಾದುದು. ಸ್ವೀಕೃತಿ ಪತ್ರಕ್ಕೆ ಸಹಿ ಮಾಡುವುದು ಮತ್ತು ನಿವಾಸಿಗೆ ನೀಡುವುದು. ಸ್ವೀಕೃತಿ ಪತ್ರವು ನಿವಾಸಿಯು ನೋಂದಣಿಯನ್ನು ಪಡೆಯುವುದಕ್ಕೆ ಲಿಖಿತ ಖಚಿತ ಭರವಸೆಯಾಗಿರುತ್ತದೆ. ಅದು ನೋಂದಣಿ ಸಂಖ್ಯೆಯನ್ನು, ಭಾವಿಗುಪ್ರಾದ ಜೊತೆಗೆ ವ್ಯವಹರಿಸುವುದಕ್ಕಾಗಿ ತಿಳಿಸಬೇಕಾದ ದಿನಾಂಕ ಮತ್ತು ಸಮಯವನ್ನು ಅದು ಹೊಂದಿರುವುದರಿಂದ ಮತ್ತು ಆತನ/ಆಕೆಯ ಆಧಾರ್ ಸ್ಥಿತಿಗತಿಗಾಗಿ ಸಂಪರ್ಕಿಸಬೇಕಾದ ಸಂಪರ್ಕ ಕೇಂದ್ರದ (1947) ವಿವರಗಳನ್ನು ಹೊಂದಿರುವುದರಿಂದ ಅದು ನಿವಾಸಿಗೆ ಪ್ರಮುಖವಾಗಿರುತ್ತದೆ. ತಿದ್ದುಪಡಿ ಪ್ರಕ್ರಿಯೆಯನ್ನು ಬಳಸಿಕೊಂಡು ನಿವಾಸಿಯ ಮಾಹಿತಿಗೆ ಯಾವುದಾದರೂ ತಿದ್ದುಪಡಿಗಳ ಅಗತ್ಯತೆ ಬಿದ್ದಲ್ಲಿ ನೋಂದಣಿ ಸಂಖ್ಯೆ, ದಿನಾಂಕ ಮತ್ತು ಸಮಯವೂ ಕೂಡ ಅಗತ್ಯವಾಗಿರುತ್ತದೆ. ಈ ರೀತಿಯಾಗಿ ನಿರ್ವಾಹಕರು ಸ್ವೀಕೃತಿ ಪತ್ರ ಮತ್ತು ಒಪ್ಪಿಗೆ ಪತ್ರವು ಸ್ಪಷ್ಟವಾಗಿರುವುದನ್ನು ಮತ್ತು ಸುಲಭವಾಗಿ ಓದಬಹುದಾಗಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು. ನಿವಾಸಿಗೆ ಸ್ವೀಕೃತಿ ಪತ್ರವನ್ನು ನೀಡುವ ವೇಳೆಯಲ್ಲಿ, ನಿರ್ವಾಹಕರು ಈ ಕೆಳಗಿನವುಗಳನ್ನು ನಿವಾಸಿಗೆ ತಿಳಿಸತಕ್ಕದ್ದು: ಸ್ವೀಕೃತಿ ಪತ್ರದಲ್ಲಿ ಮುದ್ರಿತವಾಗಿರುವ ನೋಂದಣಿ ಸಂಖ್ಯೆಯು ಆಧಾರ್ ಸಂಖ್ಯೆಯಲ್ಲ ಮತ್ತು ನಿವಾಸಿಯ ಆಧಾರ್ ಸಂಖ್ಯೆಯನ್ನು ಒಂದು ಪತ್ರದ ಮೂಲಕ ತದನಂತರದಲ್ಲಿ ತಿಳಿಸಲಾಗುವುದು. ಈ ಸಂದೇಶವನ್ನೂ ಸಹ ಸ್ವೀಕೃತಿ ಪತ್ರದಲ್ಲಿ ಮುದ್ರಿಸಲಾಗಿರುವುದು. ನಿವಾಸಿಯು ಆತನ/ಆಕೆಯ ಮತ್ತು ಮಕ್ಕಳ ನೋಂದಣಿ ಸ್ವೀಕೃತಿ ಪತ್ರವನ್ನು ಮುಂದೆ ಉಲ್ಲೇಖಿಸುವ ಸಲುವಾಗಿ ಜೋಪಾನವಾಗಿ ಇಟ್ಟಿರತಕ್ಕದ್ದು. ಪರಿಚಯಿಸುವವರನ್ನು ಆಧಾರಿತ ನೋಂದಣಿಗೆ ಸಂಬಂಧಿಸಿದಂತೆ, ಪರಿಚಯಿಸುವವರು ನಿರ್ದಿಷ್ಟ ಅವಧಿಯ ಒಳಗೆ ಸಮರ್ಪಕವಾಗಿ ಸಹಿ ಮಾಡಿರತಕ್ಕದ್ದು ಮತ್ತು ನಿವಾಸಿಯ ಆಧಾರ್ ಓರ್ವ ಊರ್ಜಿತ/ಅಧಿಕೃತ ಪರಿಚಯಿಸುವವರ ಶಿಫಾರಸಿನ ಷರತ್ತಿಗೆ ಒಳಪಟ್ಟಿರುತ್ತದೆ. ಯಾವುದಾದರೂ ತಪ್ಪುಗಳಿದ್ದಲ್ಲಿ ನಿವಾಸಿಯ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಲು, ನೋಂದಣಿಯ ಸಮಯದಿಂದ 96 ಗಂಟೆಗಳ ಕಾಲಾವಕಾಶ್ವಿರುತ್ತದೆ, ನಿವಾಸಿಗಳು ಈ ಅನುಕೂಲತೆಯನ್ನು ಉಪಯೋಗಿಸಿಕೊಳ್ಳತಕ್ಕದ್ದು. ಆಧಾರ್ ಅನ್ನು ತಂತ್ರಾಂಶ ಅನ್ವಯದಿಂದ ಹೊರತೆಗೆಯುವ ಬಗ್ಗೆ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಲು ನಿವಾಸಿಗಳು ಕರೆ ಕೇಂದ್ರಕ್ಕೆ ಸಂಪರ್ಕಿಸಬಹುದು ಅಥವಾ ಇ-ಆಧಾರ್ ಪೋರ್ಟಲು/ಆಧಾರ್ ಪೋರ್ಟಲು/ಜಾಲತಾಣವನ್ನು (e-Aadhaar portal/Aadhaar Portal/website) ಸಂಪರ್ಕಿಸಬಹುದು.

ಉತ್ತರ

ಓರ್ವ ನಿವಾಸಿಯು ಆಧಾರ್ ಕೇಂದ್ರಕ್ಕೆ ಆಧಾರ್ ನೋಂದಣಿಗಾಗಿ ಬಂದಾಗ, ಜನಸಂಖ್ಯಾಶಾಸ್ತ್ರದ ಮಾಹಿತಿಯನ್ನು ನಿವಾಸಿಯು ಒದಗಿಸುವ ದಾಖಲೆಗಳಿಂದ ದಾಖಲಿಸಲಾಗುವುದು. ನಿವಾಸಿಯು ಸಲ್ಲಿಸಿದ ದಾಖಲೆಗಳ ದೃಢೀಕರಣವನ್ನು ದಾಖಲೆಗಳನ್ನು ಪರಿಶೀಲಿಸಲು ಅನುಮತಿ ನೀಡಲಾಗಿರುವ ಸಿಬ್ಬಂದಿಯು ಪರಿಶೀಲಿಸುವರು. ಅಂತಹ ಸಿಬ್ಬಂದಿಯನ್ನು ಪರಿಶೀಲಿಸುವವರು ಎಂಬುದಾಗಿ ಕರೆಯಲಾಗುವುದು. ನೋಂದಣಿ ಕೇಂದ್ರದಲ್ಲಿ ಉಪಸ್ಥಿತರಿರುವ ಪರಿಶೀಲಿಸುವವರು ನಿವಾಸಿಯು ಸಲ್ಲಿಸಿದ ದಾಖಲೆಗಳನ್ನು ನಿವಾಸಿಯು ಸಲ್ಲಿಸಿದ ನೋಂದಣಿ ನಮೂನೆಯ ಪ್ರತಿಯಾಗಿ ಪರಿಶೀಲಿಸುವರು. ಸೇವೆಯಲ್ಲಿರುವ ಸಿಬ್ಬಂದಿಯನ್ನು ದಾಖಲೆಗಳ ಪರಿಶೀಲನೆಗೆ ಬಿಟ್ಟುಕೊಡಲು ಅವರಿಗೆ ಸಾಧ್ಯವಾಗದಿದ್ದಲ್ಲಿ, ಅಂತಹ ಪರಿಶೀಲನಾ ಕಾರ್ಯವಿಧಾನಗಳಲ್ಲಿ ಪರಿಣತಿಯನ್ನು ಹೊಂದಿರುವ ನಿವೃತ್ತ ಸರ್ಕಾರಿ ಸಿಬ್ಬಂದಿಯ ಸೇವೆಯನ್ನು ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ಉಪಯೋಗಿಸಿಕೊಳ್ಳತಕ್ಕದ್ದು. ಸರ್ಕಾರಿ (ಸೇನಾಪಡೆಗಳು ಮತ್ತು ಸಿಪಿಎಂಎಫ್ ಗಳೂ ಸೇರಿದಂತೆ) ಮತ್ತು ಬ್ಯಾಂಕುಗಳು ಸೇರಿದಂತೆ ಸಾರ್ವಜನಿಕ ವಲಯದ ಉದ್ದಿಮೆಗಳಿಂದ ಸಿ ವರ್ಗಕ್ಕಿಂತ/ III ನೇ ದರ್ಜೆಗಿಂತ ಕಡಿಮೆ ಇಲ್ಲದ ಸೇವೆಯಲ್ಲಿರುವ/ನಿವೃತ್ತ ಸಿಬ್ಬಂದಿಯನ್ನು ಪರಿಶೀಲಿಸುವವರು ಎಂಬುದಾಗಿ ನೇಮಕ ಮಾಡಲು ಅನುವು ಮಾಡಬಹುದು. ದೊಡ್ಡ ನಗರಗಳು ಮತ್ತು ಮೆಟ್ರೋಗಳಂತಹ ಪ್ರದೇಶಗಳಲ್ಲಿ, ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ಅಂತಹ ನಿವೃತ್ತ/ಸೇವೆಯಲ್ಲಿರುವ ಸರ್ಕಾರಿ ಸಿಬ್ಬಂದಿಯನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಭಾವಿಗುಪ್ರಾದ ಪ್ರಾದೇಶಿಕ ಕಚೇರಿಯ ಅನುಮೋದನೆಯೊಂದಿಗೆ ಹೊರಗುತ್ತಿಗೆಯ ಅಧಾರದ ಮೇರೆಗೆ ಪರಿಶೀಲಿಸುವವರನ್ನು ಒದಗಿಸುವುದಕ್ಕಾಗಿ ಇರುವಂತಹ ಸಂಸ್ಥೆಯ ಸೇವೆಯನ್ನು ಬಳಸಿಕೊಳ್ಳಬಹುದು. ಒಂದು ನೋಂದಣಿ ಕೇಂದ್ರದಲ್ಲಿನ ಪರಿಶೀಲಿಸುವವರು, ನೋಂದಣಿ ಸಂಸ್ಥೆಯಾಗಿ ಗುತ್ತಿಗೆಗೆ ತೆಗೆದುಕೊಂಡಿರುವ ಸಂಸ್ಥೆಯಿಂದಲೇ ಆಗಿರಲು ಸಾಧ್ಯವಿಲ್ಲ. ಪರಿಶೀಲಿಸುವವರು ಅವರ ಕೆಲಸದಲ್ಲಿ ತೊಡಗುವ ಮೊದಲು ಸೂಕ್ತವಾಗಿ ತರಬೇತಿ ಹೊಂದಿರುವುದನ್ನು ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ಖಚಿತಪಡಿಸಿಕೊಳ್ಳುವ ಅಗತ್ಯತೆಯಿರುತ್ತದೆ. ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ಅಗತ್ಯವಿರುವೆಡೆಯಲ್ಲಿ ಒಂದು ಕೇಂದ್ರಕ್ಕೆ ಒಬ್ಬರಿಗಿಂತ ಹೆಚ್ಚಿನ ಪರಿಶೀಲಿಸುವವರನ್ನು ನೇಮಕ ಮಾಡಿಕೊಳ್ಳಬಹುದು. ರಿಜಿಸ್ಟಾರ್/ನೋಂದಣಿ ಅಧಿಕಾರಿಯವರು/ಸಂಸ್ಥೆಗಳು ನೊಂದಣಿಯು ಪ್ರಾರಂಭಗೊಳ್ಳುವ ಮೊದಲು ಎಲ್ಲಾ ಪರಿಶೀಲಿಸುವವರ ಪಟ್ಟಿಯನ್ನು ಅವರ ಹುದ್ದೆಯ ಜೊತೆಯಲ್ಲಿ ಅಧಿಸೂಚನೆ ಹೊರಡಿಸತಕ್ಕದ್ದು ಮತ್ತು ಪಟ್ಟಿಯನ್ನು ಸಂಬಂಧಿತ ಪ್ರಾದೇಶಿಕ ಕಚೇರಿಯೊಂದಿಗೆ ಹಂಚಿಕೊಳ್ಳತಕ್ಕದ್ದು.

ಉತ್ತರ

ಆಧಾರ್ ಪತ್ರವನ್ನು ಯಾವ ವಿಳಾಸಕ್ಕೆ ಕಳುಹಿಸಲು ಆತನು/ಆಕೆಯು ಇಚ್ಚಿಸುತ್ತಾರೆ ಎಂಬುದನ್ನು ಖಚಿತಪಡಿಸುವಂತೆ ಭಾವಿಗುಪ್ರಾವು ನಿವಾಸಿಯನ್ನು ಕೋರುವುದು. ನಿವಾಸಿಯ ಆಯ್ಕೆಯಂತೆ, ಭಾವಿಗುಪ್ರಾವು ಬೆಂಬಲಿತ ದಾಖಲೆಗಳ ಅನುಸಾರ ವಿವರಗಳನ್ನು ಸೆರೆಹಿಡಿಯುವುದು.

ಇತ್ತೀಚಿನ ನವೀಕರಣ​ : 08-11-2019 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಆಧಾರ್ ಕರ್ನಾಟಕ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080