ಸಾಮರ್ಥ್ಯ ಸಂಘಟನೆ
ಸಾರ್ವಜನಿಕ ಸೇವೆಗಳ ವಿತರಣೆಯನ್ನು ಸುಧಾರಿಸುವ ಸಲುವಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ಹಲವಾರು ಇ-ಆಡಳಿತ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಸರ್ಕಾರ ಮಂಚೂಣಿಯಲ್ಲಿದೆ. ವಿಶೇಷ ತರಬೇತಿ ಮತ್ತು ಜ್ಞಾನವನ್ನು ಹೆಚ್ಚಿಸುವುದು ಹಾಗೂ ಇ-ಆಡಳಿತ ಮತ್ತು ಐಸಿಟಿಯ ವಿವಿಧ ಅಂಶಗಳ ಕುರಿತು ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಹೆಚ್ಚಿನ ಕೌಶಲ್ಯತೆ ಮತ್ತು ಸ್ವಯಂ ಕಲಿಕೆಗೆ ಅವಕಾಶ ಕಲ್ಲಿಸಲು ಉದ್ದೇಶಿಸಿದೆ.
ರಾಜ್ಯ ಸರ್ಕಾರದ ಇ-ಆಡಳಿತ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತು ಸಮಗ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾಮರ್ಥ್ಯ ಸಂಘಟನೆ (Capacity Building) ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಅಧಿಕಾರಿ ವೃಂದ “ಎ”, ವೃಂದ “ಬಿ” ಮತ್ತು “ಸಿ” ವೃಂದದ ಅಧಿಕಾರಿಗಳು ಮತ್ತು ನೌಕರರುಗಳಿಗೆ ಇ-ಆಡಳಿತ, ಮಾಹಿತಿ ತಂತ್ರಾಜ್ಞಾನದ ಅರಿವು ಮತ್ತು ಕುಶಲತೆಯನ್ನು ಹೆಚ್ಚಿಸಲು ತರಬೇತಿ ಕಾರ್ಯಕ್ರಮಗಳು, ಕಾರ್ಯಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಇ-ಆಡಳಿತ ಕೇಂದ್ರದ ವತಿಯಿಂದ ನಡೆಸಲಾಗುತ್ತಿದೆ.
ಇ-ಆಡಳಿತ ಯೋಜನೆಗಳ ಅನುಷ್ಠಾನಕ್ಕಾಗಿ ಇತರೆ ಇಲಾಖೆಗಳಿಗೆ ಸಲಹೆಗಾರರನ್ನು ಒದಗಿಸುತ್ತಿದೆ. ಈ ಉದ್ದೇಶಕ್ಕಾಗಿ ರಾಜ್ಯ ಇ-ಮಿಷನ್ ಟೀಮ್ (ಎಸ್‌ಇಎಂಟಿ) ವಿಭಾಗವನ್ನು ಸ್ಥಾಪಿಸಲಾಗಿದೆ ಮತ್ತು ಇತರ ಇಲಾಖೆಗಳೊಂದಿಗೆ ಸಂವಹನ ನಡೆಸುತ್ತಿದೆ.
ಭೌತಿಕ ಸಾಧನೆಗಳು:
- ವಿವಿಧ ಇಲಾಖೆಯ ಎಲ್ಲಾ ಗ್ರೂಪ್ ‘ಎ’ ಮತ್ತು ‘ಬಿ’ ಮತ್ತು ಗ್ರೂಪ್ ‘ಸಿ’ ಅಧಿಕಾರಿಗಳು ಹಾಗೂ ನೌಕರರಿಗೆ 200 ಕ್ಕೂ ಹೆಚ್ಚು ಇ-ಆಡಳಿತ ಉಪಕ್ರಮಗಳ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
- 6900 ಕ್ಕಿಂತ ಹೆಚ್ಚು, ಸರ್ಕಾರಿ ನೌಕರರು ಎಲ್ಲಾ ಜಿಲ್ಲಾ ತರಬೇತಿ ಸಂಸ್ಥೆಗಳು ಮತ್ತು ಆಡಳಿತ ತರಬೇತಿ ಸಂಸ್ಥೆ ಮೈಸೂರು, ಇಲ್ಲಿ ಇ-ಆಡಳಿತ ಉಪಕ್ರಮಗಳು, ಇ-ಆಫೀಸ್, ಇ-ಪಾರ್, ಎಚ್ಆರ್ಎಂಎಸ್, ಕನ್ನಡ ನುಡಿ ಮತ್ತು ಯೂನಿಕೋಡ್ ತಂತ್ರಾಂಶದ ತರಬೇತಿಯಿಂದ ಪ್ರಯೋಜನ ಪಡೆದಿದ್ದಾರೆ.
- ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ 2,42,300 ಕ್ಕೂ ಹೆಚ್ಚು ಸರ್ಕಾರಿ ನೌಕರರು ಹಾಜರಾಗಿದ್ದು, ಅವರ ಪೈಕಿ 1,62,700 ನೌಕರರು ಅರ್ಹತೆ ಪಡೆದಿದ್ದಾರೆ.
- ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾದ 1,59,900 ಕ್ಕೂ ಹೆಚ್ಚು ನೌಕರರಿಗೆ ಡಿಜಿಟಲ್ ಸಹಿ ಪ್ರಮಾಣ ಪತ್ರವನ್ನು ನೀಡಲಾಗಿದೆ.
- ಸಿಇಜಿ ತರಬೇತಿ ಕೇಂದ್ರದಲ್ಲಿ ಮತ್ತು ಎಫ್ಪಿಐನಲ್ಲಿ ಸುಮಾರು 974 ನೌಕರರಿಗೆ ಮತ್ತು 3,100 ವೆಂಡರ್ಸ್ಗಳಿಗೆ ಇ-ಪ್ರೊಕ್ಯೂರ್ಮೆಂಟ್ ತಂತ್ರಾಂಶದ ತರಬೇತಿಗಳನ್ನು ನಡೆಸಲಾಗಿದೆ.
· ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸರ್ಕಾರಿ ನೌಕರರಿಗೆ ಸಕಾಲ ತರಬೇತಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 2,356 ನೌಕರರು ತರಬೇತಿಯಯ ಪ್ರಯೋಜನ ಪಡೆದುಕೊಂಡಿದ್ದಾರೆ.· ಪ್ರಮಾಣೀಕೃತ ಸೈಬರ್ ವಾರಿಯರ್ ಆನ್‌ಲೈನ್ ಕೋರ್ಸ್‌ಗೆ ಪ್ರಾಯೋಜಿತ ಐಐಟಿ ಮದ್ರಾಸ್ ನಿಂದ 6 ಮತ್ತು ಐಟಿ ಪ್ರಾಜೆಕ್ಟ್‌ಗಳನ್ನು ನಿರ್ವಹಿಸಲು ಐಐಟಿ ಅಹಮದಾಬಾದ್‌ನಿಂದ 7 ಸರ್ಕಾರಿ ಅಧಿಕಾರಿಗಳು ಪ್ರಯೋಜನ ಪಡೆದಿರುತ್ತಾರೆ.· ಎನ್.ಇ.ಜಿ.ಡಿ. ಪ್ರಾಯೋಜಿತ ಯೋಜನೆಯಡಿ ರಾಜ್ಯದಾದ್ಯಂತ 30 ಜಿಲ್ಲೆಗಳ ತರಬೇತಿ ಸಂಸ್ಥೆಗಳಲ್ಲಿ ಸೈಬರ್ ಸೆಕ್ಯುರಿಟಿ ಮತ್ತು ಇ-ಆಡಳಿತ ಉಪಕ್ರಮಗಳ ಬಗ್ಗೆ ತರಬೇತಿಯನ್ನ ಆಯೋಜಿಸಲಾಗಿದ್ದು, 900 ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಇದರ ಪ್ರಯೋಜನ ಪಡೆದಿರುತ್ತಾರೆ.· ಗಾರ್ಟ್ನರ್ (GARTNER) ಏರ್ಪಡಿಸಿದ ಆನ್‌ಲೈನ್ ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ
50 ಕ್ಕೂ ಹೆಚ್ಚು ಅಧಿಕಾರಿಗಳು ಪ್ರಯೋಜನ ಪಡೆದಿರುತ್ತಾರೆ.· ವಿಕಾಸ ಸೌಧದಲ್ಲಿ ಸರ್ಕಾರಿ ನೌಕರರಿಗೆ ಸೈಬರ್ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು, 125 ಕ್ಕೂ ಹೆಚ್ಚು ನೌಕರರಿಗೆ ಅನುಕೂಲವಾಗಿದೆ.· ವಿಕಾಸ ಸೌಧದಲ್ಲಿ ಸರ್ಕಾರಿ ನೌಕರರಿಗೆ ಜೆಮ್ (GeM) ತರಬೇತಿ ನೀಡಿದ್ದು, 280 ಕ್ಕೂ ಹೆಚ್ಚು ಸರ್ಕಾರಿ ನೌಕರರು ಪ್ರಯೋಜನ ಪಡೆದುಕೊಂಡಿದ್ದಾರೆ.· ಮೈಸೂರು ಆಡಳಿತ ತರಬೇತಿ ಸಂಸ್ಥೆ ಸೇರಿದಂತೆ ಎಲ್ಲಾ ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ
ಇ-ಆಡಳಿತ ತರಬೇತಿ ಕೋಶವನ್ನು ಸ್ಥಾಪಿಸಲಾಗಿದೆ.· ಎನ್.ಇ.ಜಿ.ಡಿ. ಪ್ರಾಯೋಜಿತ ಕೌಶಲ್ಯ ಅಭಿವೃದ್ಧಿ ಜಾಲದ ಉಪಕ್ರಮದ ಅಡಿಯಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ತರಬೇತಿ ಮತ್ತು ಸಕ್ರಿಯಗೊಳಿಸುವಿಕೆಯ ಅಗತ್ಯವನ್ನು ನೀಡಲು ವಾಧ್ವನಿ ಸಂಸ್ಥೆಯೊಂದಿಗೆ ಇ- ಆಡಳಿತ ಕೆಂದ್ರವು ಪಾಲುದಾರಿಕೆಯನ್ನು ಹೊಂದಿದೆ. o ಹಂತ 1 ರ ಭಾಗವಾಗಿ, ಕರ್ನಾಟಕ ಸರ್ಕಾರದ ಸುಮಾರು 30 ಅಧಿಕಾರಿಗಳಿಗೆ ತರಬೇತಿಯನ್ನು ನೀಡಲು 2021ರ ನವೆಂಬರ್‌ನಲ್ಲಿ 5 ದಿನಗಳ ಕಾರ್ಯಾಗಾರವನ್ನು ಆಯೋಜಿಸಿದೆ.o ಹಂತ 2 ರ ಭಾಗವಾಗಿ, 2022ರ ಜನವರಿ/ಫೆಬ್ರವರಿಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳ ಅನುಷ್ಠಾನ ಮತ್ತು ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸಲು ಯೋಜಿಸಲಾಗಿದೆ. ಕೋವಿಡ್-19 ಕಾರಣ, ಎಲ್ಲಾ ಹೊರವಲಯದ ತರಬೇತಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಭವಿಷ್ಯದ ಯೋಜನೆ: ( 31 ಮಾರ್ಚ್ 2022 ರವರೆಗೆ)
.
- ಗ್ರೂಪ್ ʼಎʼ ಮತ್ತು ʼಬಿʼ ಅಧಿಕಾರಿಗಳಿಗೆ ಹಾಗೂ ಸರ್ಕಾರಿ ನೌಕರರುಗಳಿಗೆ ಪ್ರತಿ ತಿಂಗಳು ಜಿಲ್ಲಾ ಕೇಂದ್ರ ಕಚೇರಿಯಲ್ಲಿ ತರಬೇತಿ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಲಾಗಿದೆ.
- ಗ್ರೂಪ್ ʼಎʼ ಮತ್ತು ʼಬಿʼ ಅಧಿಕಾರಿಗಳಿಗೆ ಅಗತ್ಯವಿದ್ದಲ್ಲಿ ಇನ್ ಹೌಸ್ ತರಬೇತಿ ನೀಡಲಾಗುವುದು.
- 2,50,000 ಕ್ಕೂ ಹೆಚ್ಚು ಸರ್ಕಾರಿ ನೌಕರರು, ನಿಗಮ- ಮಂಡಳಿಗಳ ನೌಕರರು ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ.
- ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರಿಗೆ ಮತ್ತು
ವೆಂಡರ್ಸ್ಗಳಿಗೆ ಇ-ಪ್ರೊಕ್ಯೂರ್ಮೆಂಟ್ ತರಬೇತಿ ನೀಡಲಾಗುವುದು.
· ಎನ್.ಇ.ಜಿ.ಡಿ. ಪ್ರಾಯೋಜಿತ ಯೋಜನೆಯಡಿ ಸಾಮರ್ಥ್ಯ ಸಂಘಟನೆ ಯೋಜನೆಯ ಹಂತ 3ರ ಭಾಗವಾಗಿ ಇ-ಆಡಳಿತ ಆನ್‌ಲೈನ್ ಸೇವೆಗಳ ಅರಿವನ್ನು ಕರ್ನಾಟಕ ಸರ್ಕಾರದ ನಾಗರಿಕರಿಗೆ ಮೂಡಿಸಲಾಗುವುದು. ಜೊತೆಗೆ ನಾಗರಿಕರಿಗೆ ಜಾಗೃತಿಯನ್ನು ಮೂಡಿಸಲು ಎಲ್ಲಾ ಇ-ಸೇವೆಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಆ ಮೂಲಕ ಬಳಕೆಯ ಅಳವಡಿಕೆಯನ್ನು ಹೆಚ್ಚಿಸಲು ಯೋಜಿಸುತ್ತಿದೆ. ಈ ಉದ್ದೇಶಕ್ಕಾಗಿ,o ಪ್ರಚಾರ ನಿರ್ವಹಣಾ ಚೌಕಟ್ಟಿನ ಮೂಲಕ ಕಾರ್ಯನಿರ್ವಸಲಾಗುವುದು.o ಡಿಜಿಟಲ್ ಅಭಿಯಾನದ ಪಾಲುದಾರರನ್ನು ಗುರುತಿಸುವುದು ಮತ್ತು ರಾಜ್ಯದಾದ್ಯಂತ ಈ ಕಾರ್ಯತಂತ್ರವನ್ನು ಜಾರಿ ಮಾಡಲಾಗುವುದು.o ಯೋಜನೆಯ ಪರಿಣಾಮಕಾರಿ ಜಾರಿಗಾಗಿ ಪಾಲುದಾರರು ಇ-ಆಡಳಿತ ಕೇಂದ್ರದ ಸಾಮರ್ಥ್ಯ ಸಂಘಟನೆ ಯೋಜನೆಯ ತಂಡದೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ.
ಆನ್‌ಲೈನ್ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ) ನಿಯಮಗಳು- 2012 ಅನ್ನು ರಚಿಸಿ ಸೂಕ್ತ ತಿದ್ದುಪಡಿಗಳನ್ನು ಮಾಡಲಾಗಿದೆ. ಈ ನಿಯಮಗಳು 22-03-2012 ರಿಂದ ಜಾರಿ ಆಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ) ಕಾಲಕಾಲಕ್ಕೆ ಮಾರ್ಪಾಡುಗಳನ್ನು ಮಾಡುತ್ತಾ ಬಂದಿದೆ. ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ) ನಿಯಮಗಳ ಅಡಿಯಲ್ಲಿ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್)ಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲು ಅನುಮತಿ ನೀಡಲು ದಿನಾಂಕ 28-03-2014 ರಂದು ಆದೇಶ ಹೊರಡಿಸಲಾಗಿದೆ. ಕರ್ನಾಟಕ ಸರ್ಕಾರವು ಎಲ್ಲಾ ಸರ್ಕಾರಿ ನೌಕರರು ತಮ್ಮ ಭವಿಷ್ಯದ ಪ್ರಗತಿಗಾಗಿ ಕಂಪ್ಯೂಟರ್ ಕೌಶಲ್ಯ ಮತ್ತು ತಂತ್ರಗಳನ್ನು ಕಲಿಯಲು ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಘೋಷಿಸಿದೆ. ಬಡ್ತಿಗಳು, ಪ್ರೊಬೇಷನರಿ ಅವಧಿಯ ಕ್ಲಿಯರೆನ್ಸ್ ಮುಂತಾದ ಭವಿಷ್ಯದ ಅನುಕೂಲಗಳಿಗಾಗಿ ಎಲ್ಲಾ ಸರ್ಕಾರಿ ನೌಕರರು, ನಿಗಮ-ಮಂಡಳಿಗಳ ನೌಕರರು ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅರ್ಹತೆ ಪಡೆಯುವುದು ಕಡ್ಡಾಯವಾಗಿದೆ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲು ಕಿಯೋನಿಕ್ಸ್ ಮೂಲಕ ಟೆಂಡರ್ ಕರೆಯಲಾಗಿತ್ತು. ಮೆ\\ ಸಿಫಿ ಟೆಕ್ನಾಲಜೀಸ್ (2016 ಫೆಬ್ರವರಿಯಿಂದ 2019 ಸರ್ಕಾರಿ ಆದೇಶ ಸಂಖ್ಯೆ. 104 EGM 2014, ದಿನಾಂಕ 2-12-2014) ಪಡೆದುಕೊಂಡಿದ್ದು, ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಿ ಅರ್ಹ ನೌಕರರಿಗೆ ಅಂಕಪಟ್ಟಿಯನ್ನು ನೀಡಲಾಗಿದೆ. ಒಟ್ಟು 1,67,809 ನೌಕರರು ಪರೀಕ್ಷೆಗೆ ಹಾಜರಾಗಿದ್ದರು. ಅವರ ಪೈಕಿ 1,11,873 ನೌಕರರು ಅರ್ಹತೆ ಪಡೆದಿದ್ದು, ಅಂಕಪಟ್ಟಿ ವಿತರಿಸಲಾಗಿದೆ.
ನಂತರ 25-01-2020ರಿಂದ ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲು ಮತ್ತು ಡಿಜಿಟಲ್ ಸಹಿ ಪ್ರಮಾಣಪತ್ರವನ್ನು ನೀಡಲು ಕಿಯೋನಿಕ್ಸ್ ಮೂಲಕ ಪುನಃ ಟೆಂಡರ್ ಕರೆಯಲಾಗಿತ್ತು. ಮೆ\\ ಟೆಕ್ ಕ್ಷೇತ್ರ ಇನ್ಫೋ ಸಲ್ಯೂಶನ್ ಲಿಮಿಟೆಡ್ (ಸರ್ಕಾರಿ ಆದೇಶ ಸಂಖ್ಯೆ. DPAR 86 EGM 2019, ದಿನಾಂಕ 30-11-2019) ಟೆಂಡರ್ ಪಡೆದುಕೊಂಡಿದೆ. ಸುಸಜ್ಜಿತ ತರಬೇತಿ ಕೇಂದ್ರಗಳನ್ನು ಒದಗಿಸುವುದು, ಪಠ್ಯಕ್ರಮದ ತಯಾರಿಕೆ, ಪರೀಕ್ಷೆಯನ್ನು ನಡೆಸುವುದು ಮತ್ತು ಡಿಜಿಟಲ್ ಪ್ರಮಾಣಪತ್ರವನ್ನು ನೀಡುವುದು ಈ ಸಂಸ್ಥೆಯ ಜವಾಬ್ದಾರಿಯಾಗಿದೆ.
ಈ ಹಿಂದೆ ನೌಕರರಿಗೆ ಅರ್ಹ ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಅಂಕಪಟ್ಟಿಯನ್ನು ಮಾತ್ರ ನೀಡಲಾಗುತ್ತಿತ್ತು. ಆದರೆ ಅಂಕಪಟ್ಟಿಗೆ ದೃಢೀಕರಣ ಮತ್ತು ಮಾನ್ಯತೆಯಿಲ್ಲದ ಕಾರಣ ತಾಂತ್ರಿಕ ಸಮಿತಿಯಿಂದ ಪರಿಗಣಿಸಲಾಗಿಲ್ಲ. ಈಗ ಸಮಿತಿಯು ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಎಲ್ಲಾ ನೌಕರರಿಗೆ ದೃಢೀಕರಣ ಮತ್ತು ಮಾನ್ಯತೆಗಾಗಿ ಡಿಜಿಟಲ್ ಸಹಿ ಪ್ರಮಾಣಪತ್ರವನ್ನು ನೀಡಲು ನಿರ್ಧರಿಸಿದೆ.
ಇದುವರೆಗೆ 2,42,300 ಸರ್ಕಾರಿ ನೌಕರರು ಆನ್‌ಲೈನ್ ಸಾಕ್ಷರತಾ ಪರೀಕ್ಷೆಗೆ ಹಾಜರಾಗಿದ್ದಾರೆ ಮತ್ತು 1,62,700 ನೌಕರರು ಸಿಎಲ್‌ಟಿ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ ಮತ್ತು 17-12-2021 ರಂತೆ ಎಲ್ಲಾ ಅರ್ಹ ನೌಕರಿಗೆ 1,59,900 ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರವನ್ನು ನೀಡಲಾಗಿದೆ.
ಸರ್ಕಾರಿ ನೌಕರರು ಅನುಸರಿಸುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಇತ್ತೀಚೆಗೆ ಎಲ್ಲಾ ನಿಗಮ- ಮಂಡಳಿಗಳ ನೌಕರರು ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಕೂಡ ಅನುಮತಿಸಲಾಗಿದೆ. ಪರೀಕ್ಷಾ ಶುಲ್ಕಗಳು, ಸೇವಾ ಶುಲ್ಕಗಳು ಮತ್ತು ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರಗಳಿಗೆ ತಗುಲುವ ಶುಲ್ಕಗಳನ್ನು ಸಂಬಂಧಪಟ್ಟ ನಿಗಮ- ಮಂಡಳಿಗಳೇ ಖದ್ದು ಬರಿಸಲಿವೆ.
ನಿಗಮ-ಮಂಡಳಿಗಳು ತಮ್ಮ ನೌಕರರಿಗೆ ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲು, ಇ-ಆಡಳಿತ ಕೇಂದ್ರವು ಅನುದಾನ ನೀಡುವುದಿಲ್ಲ. ಅರ್ಹ ನೌಕರರಿಗೆ ಡಿಜಿಟಲ್ ಪ್ರಮಾಣಪತ್ರವನ್ನು ಅಧಿಕೃತವಾಗಿ ಯೋಜನಾ ನಿರ್ದೇಶಕರು, ಸಾಮರ್ಥ್ಯ ಸಂಘಟನೆ, ಇ-ಆಡಳಿತ ಕೇಂದ್ರ ಅವರ ಸಹಿಯ ಅಡಿಯಲ್ಲಿ ಮಾತ್ರ ಒದಗಿಸಲಾಗುತ್ತದೆ.
ಸಿಎಲ್‌ಟಿ ವೆಬ್‌ಸೈಟ್‌ಗಳು:
- ಸರ್ಕಾರಿ ನೌಕರರಿಗೆ https://clt.karnataka.gov.in
- ನಿಗಮ- ಮಂಡಳಿಗಳ ನೌಕರರಿಗೆ https://nkclt.clt.karnataka.gov.in
ಶ್ರೀ. ವಿಪಿನ್ ಸಿಂಗ್, ಐಎಫ್‌ಎಸ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು,
ಇ-ಆಡಳಿತ ಕೇಂದ್ರ.
ಕೊಠಡಿ ಸಂ: 146, 2ನೇ ಹಂತ, ಬಹುಮಹಡಿಗಳ ಕಟ್ಟಡ, ಬೆಂಗಳೂರು -560 001
ceoceg@karnataka.gov.in
080-2237 3840
ಸಂಪರ್ಕಿಸಬೇಕಾದ ಯೋಜನಾ ಮುಖ್ಯಸ್ಥರು:
ಕೆ.ಎಸ್.ಶಿವರಾಮು,
ಯೋಜನಾ ನಿರ್ದೇಶಕರು, ಸಾಮರ್ಥ್ಯ ಸಂಘಟನೆ
ಇ-ಆಡಳಿತ ಕೇಂದ್ರ.
ಕೊಠಡಿ ಸಂ: 133, 2ನೇ ಹಂತ, ಬಹುಮಹಡಿಗಳ ಕಟ್ಟಡ, ಬೆಂಗಳೂರು -560 001
ಇ-ಮೇಲ್: pdcb@karnataka.gov.in
080-2203 2505