ಇ-ಆಡಳಿತ ಕೇಂದ್ರ

  • Back
    ಇ-ಆಡಳಿತ ಕೇಂದ್ರದ ಬಗ್ಗೆ

    ಇ-ಆಡಳಿತ ಕೇಂದ್ರದ ಜಾಲತಾಣ ಪುಟಗಳಿಗೆ ಸ್ವಾಗತ. ಕರ್ನಾಟಕ ಸರ್ಕಾರವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ಐಸಿಟಿ) ಸದ್ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅನುಕರಣೀಯ ಮಾದರಿಯಾಗಿದ್ದು, ರಾಷ್ಟ್ರದಲ್ಲಿ ವಿದ್ಯುನ್ಮಾನ-ಆಡಳಿತದ (ಇ-ಆಡಳಿತ) ಉಪಕ್ರಮಿಕೆಗಳನ್ನು ಅನುಷ್ಟಾನಗೊಳಿಸುವಲ್ಲಿ ಸಕ್ರಿಯವಾಗಿದೆ. ರಾಜ್ಯದ ಇ-ಆಡಳಿತ ನೀತಿ ಮತ್ತು ತಂತ್ರಗಾರಿಕೆಗಳ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲು ಇ-ಆಡಳಿತ ಕೇಂದ್ರವನ್ನು ಸಂಘ-ಸಂಸ್ಥೆಗಳ ನೋಂದಾವಣೆ ಅಧಿನಿಯಮದ ಅಡಿಯಲ್ಲಿ 2006 ರಲ್ಲಿ ಒಂದು ನೋಡಲ್ ಸಂಸ್ಥೆಯಾಗಿ ಸೃಷ್ಟಿಸಲಾಗಿದೆ. ಇದು ರಾಜ್ಯದಲ್ಲಿ ಇ-ಆಡಳಿತ ಮೂಲಸೌಕರ್ಯಗಳ ಮತ್ತು ಮೂಲಭೂತ ಆಡಳಿತ ಸುಧಾರಣೆ ಆಧಾರಿತ ಅನ್ವಯಿಕಗಳನ್ನು ನಿರ್ವಹಿಸುವ ಪಾಲಕ ಸಂಸ್ಥೆಯಾಗಿದೆ. ವಸ್ತುತಃ ಈ ಸಂಸ್ಥೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ– (ಆಡಳಿತ ಸುಧಾರಣೆ – ಇ-ಆಡಳಿತ)) (ಡಿಪಿಎಆರ್- ಆಸು -ಇಆ) ಯ ಅಡಿಯಲ್ಲಿ ಸ್ಥಾಪಿತವಾಗಿದ್ದು, ಅದು ರಾಜ್ಯದ ಮುಖ್ಯಮಂತ್ರಿಗಳಿಗೇ ನೇರವಾಗಿ ಹೊಣೆಯಾಗಿರುವುದು ರಾಜ್ಯದಲ್ಲಿ ವಿಶೇಷವಾಗಿದೆ. ಪ್ರಸ್ತುತದಲ್ಲಿ, ಅತ್ಯಾಧುನಿಕ ಎರಡು ದತ್ತಾಂಶ ಕೇಂದ್ರಗಳು, ಎಂ.ಪಿ.ಎಲ್.ಎಸ್. ತಂತ್ರಜ್ಞಾನ ಆಧಾರಿತ ಕರ್ನಾಟಕ ರಾಜ್ಯ ವಿಸ್ತೃತ ಜಾಲ (ಕೆಸ್ವಾನ್) ಮತ್ತು ಮೂಲ ಅನ್ವಯಿಕಗಳಾದ ಇ-ಸಂಗ್ರಹಣೆ ಯೋಜನೆಯನ್ನು ನಿರ್ವಹಿಸುವ ಹೆಗ್ಗಳಿಕೆಯ ಕೇಂದ್ರವಾಗಿದ್ದು, ಶತ ಪ್ರತಿಶತ ಕಾರ್ಯನಿರ್ವಹಣೆಯ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬರುತ್ತಾ, ಕೆಲವು ಹೆಗ್ಗುರುತನ್ನೂ ಮೂಡಿಸಿದೆ.

    ನಮ್ಮ ಸಂದೇಶ

    ಶ್ರೀ.‌ ವಿ.ಪೊನ್ನುರಾಜ್, ಭಾ.ಅ.ಸೇ. 

    ಸರ್ಕಾರದ ​ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ), ಕರ್ನಾಟಕ ಸರ್ಕಾರ.

    ಇ-ಆಡಳಿತ ಕೇಂದ್ರವು ಕರ್ನಾಟಕ ಸರ್ಕಾರದ ಇ-ಪರಿವರ್ತನಾ ಕಾರ್ಯದ ನೇತೃತ್ವವನ್ನು ವಹಿಸಿದೆ. ಇದರ ಗುರಿಯು ಸರ್ಕಾರಕ್ಕೆ ಉತ್ತಮ ಗುಣಮಟ್ಟದ ಜಾಗತಿಕ ನೈಪುಣ್ಯತೆ, ಸೂಕ್ತ ತಂತ್ರಜ್ಞಾನ, ದಕ್ಷ ಪ್ರಕ್ರಿಯೆ ಮತ್ತು ಅಗತ್ಯ ಆರ್ಥಿಕ ಯೋಜನೆಗಳನ್ನು ಒದಗಿಸಿ, ಇಲಾಖೆಗಳಿಗೆ ಇ-ಆಡಳಿತ ಉಪಕ್ರಮಿಕೆಗಳ ವಿನ್ಯಾಸ ಮಾಡಿ ಅನುಷ್ಠಾನಗೊಳಿಸುವುದೇ ಆಗಿರುತ್ತದೆ.​ ನಮ್ಮ ಉಪಕ್ರಮಗಳಿಂದ ರಾಜ್ಯ ಹಾಗೂ ನಾಗರೀಕರು ಸಾಕಷ್ಟು ಪ್ರಯೋಜನ ಪಡೆಯುವರೆಂದು ನಾವಾದರೂ ನಂಬಿದ್ದೇವೆ.

    ಶ್ರೀ. ಸುನಿಲ್ ಪನ್ವಾರ್, ಐ.ಎಫ್.ಎಸ್

    ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,
    ಇ-ಆಡಳಿತ ಕೇಂದ್ರ.

    ×
    ABOUT DULT ORGANISATIONAL STRUCTURE PROJECTS