ಇ-ಆಡಳಿತ ಕೇಂದ್ರ

 • Back
  ದೃಷ್ಠಿ | ಕಾರ್ಯಾಚರಣೆ

  ದೃಷ್ಠಿ

  “ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿ ಮತ್ತು ಪ್ರೋತ್ಸಾಹಿಸುವುದರ ಜೊತೆಗೆ ನಾಗರೀಕರಿಗೆ ಅಗತ್ಯ ಮಾಹಿತಿ ಹಾಗೂ ಸೇವೆಗಳನ್ನು ದಕ್ಷತೆಯೊಂದಿಗೆ ಅವಿರತವಾಗಿ ಆನ್ ಲೈನ್ ಮುಖಾಂತರ ಪೂರೈಸುವಿಕೆ ”, ಈ ಆಶಯ ವ್ಯಾಖ್ಯೆಯು ಸರಕಾರದ ಮುಂಬರುವ ಇ-ಆಡಳಿತದ ಪ್ರಮುಖ ರೂಪುರೇಷೆಗಳನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ, ಅವುಗಳೆಂದರೆ;


  ಕಾರ್ಯಾಚರಣೆ

  ಜನತೆಯನ್ನು ಸಬಲೀಕರಿಸುವುದು :  ಸರಕಾರಿ ಪ್ರಕ್ರಿಯೆಗಳ ಹಾಗೂ ನಿರ್ವಹಣೆಗಳ ಮಾಹಿತಿಯು ನಾಗರೀಕರಿಗೆ ತಕ್ಷಣದಲ್ಲಿ ಲಭ್ಯವಾಗಬೇಕು. ಇದರಿಂದಾಗಿ ಕಾರ್ಯ ನಿರ್ವಹಣೆಯಲ್ಲಿ ಹೆಚ್ಚಿನ ಬದ್ಧತೆ ಇರುತ್ತದೆ.

  ಉತ್ತಮ ಸೇವಾ ವಿತರಣೆ : ನಾಗರೀಕ ಸೇವೆಗಳನ್ನು ಸುಲಭವಾಗಿ ಪಡೆಯುವ ಅವಕಾಶ, ಸಮರೀತಿಯ ಗುಣಮಟ್ಟ ಮತ್ತು ಸುರಕ್ಷತೆಯುಳ್ಳ ಸೇವಾ ಕೇಂದ್ರಗಳ ಸರಳ ಆಯ್ಕೆ.

  ಆರ್ಥಿಕ ಅಭಿವೃದ್ಧಿ :  ನಾಗರೀಕರ ಒಟ್ಟಾರೆ ಜೀವನ ಮಟ್ಟ ಸುಧಾರಣೆ - ತನ್ಮೂಲಕ ಉದ್ಯಮಗಳಿಗೆ ರಾಜ್ಯವು ಪ್ರೀತಿಯ ನೆಲೆಯಾಗಬೇಕು.

  ವೆಬ್ ಸಕ್ರಿಯತೆ :  ಮಾಹಿತಿಗಳನ್ನು ಸಾರ್ವಜನಿಕರಿಗೆ ವಿತರಿಸಲು ಇಲಾಖೆಗಳು ತಮ್ಮ ಜಾಲತಾಣಗಳಲ್ಲಿ ಅವಕಾಶನ್ನು ಕಲ್ಪಿಸಿದೆ.

  ಸ್ಪಂದನ:- ಇಲಾಖೆಗಳು ತಮ್ಮ ಜಾಲತಾಣದ ಅವಕಾಶವನ್ನು ಸಾರ್ವಜನಿಕರಿಗೆ ಒದಗಿಸುತ್ತಿರುವುದರಿಂದ ಸರಕಾರಿ ಕಛೇರಿಗೆ ಭೇಟಿ ನೀಡುತ್ತಿದ್ದ ಜನತೆಗೆ ಮಾಹಿತಿ ತಾಣದಲ್ಲಿ ಲಭ್ಯವಿದೆ, ನಮೂನೆಗಳನ್ನು ಡೌನ್ ಲೋಡ್ ಮಾಡಬಹುದು ಹಾಗೂ ಸಂಸ್ಥೆಗಳನ್ನು ಇ-ಮೇಲ್ ಮುಖಾಂತರ ಸಂಪರ್ಕಿಸಬಹುದು.

  ವಹಿವಾಟು:  ಇಲಾಖೆಗಳು ತಮ್ಮ ಜಾಲತಾಣಗಳಿಗೆ ಸ್-ಸಹಾಯ ಅನ್ವಯಿಕೆಗಳನ್ನು ಅಳವಡಿಸಿರುವುದರಿಂದ ನಾಗರೀಕರು ತಮ್ಮ ವಹಿವಾಟುಗಳನ್ನು /ಪ್ರಕ್ರಿಯೆಗಳನ್ನು ಆನ್ ಲೈನ್ ಮುಖಾಂತರ ಮಾಡಬಹುದಿದೆ. ಬಳಕೆದಾರರು ಯಾವುದೇ ಸ್ಥಳದಿಂದಲೂ, ಹೇಗಾದರೂ, ಯಾವ ಸಮಯದಲ್ಲಿಯಾದರೂ ಜಾಲದ ಅನುಕೂಲ ಪಡೆಯಬಹುದಿರುತ್ತದೆ.

  ಪರಿವರ್ತನೆ: ಸರಕಾರಿ ಸೇವೆಗಳ ವಿತರಣೆ ಹಾಗೂ ಸರಕಾರದ ಕಾರ್ಯವೈಖರಿಯ ವ್ಯಾಖ್ಯಾನವೇ ಬದಲಾವಣೆಗೊಂಡಿದೆ. ಮಾಹಿತಿ, ಸೇವಾ ವಿತರಣೆ ಮತ್ತು ಸರಕಾರಿ ಪ್ರಕ್ರಿಯೆಗಳನ್ನು ಸಾಂಪ್ರದಾಯಿಕ ಆಯಕಟ್ಟು ಮೀರಿ ಸಮಗ್ರಗೊಳಿಸಲಾಗುತ್ತಿದೆ.

   

  ಇ-ಆಡಳಿತ ಅನುಷ್ಠಾನದ ಪ್ರಮುಖ ಅಂಶಗಳಲ್ಲೊಂದೆಂದರೆ ಇ-ಆಡಳಿತ ಸೇವೆಗಳನ್ನು ಹಂತ ಹಂತವಾಗಿ ಜಾರಿಗೊಳಿಸುವುದು.  ಇ-ಆಡಳಿತ ಅನುಷ್ಟಾನಗೊಳಿಸುವ ದಿಸೆಯಲ್ಲಿ ಪಾಲುದಾರ ಸಂಸ್ಥೆಯು ಪ್ರಮುಖವಾದ ಮತ್ತು ನಿಖರವಾದ ಫಲಗಳನ್ನು ಕಾಣಲು ಸಾಧ್ಯವಿರಬೇಕು.  ಆದ್ದರಿಂದ, ಜನತೆಗೆ ಮತ್ತು ಸರಕಾರಕ್ಕೆ ಇರುವ ಅನುಕೂಲಗಳ ಆಧಾರದ ಮೇಲೆ ಅನುಷ್ಟಾನ ಆದ್ಯತಾ ವಿಶ್ಲೇಷಣೆ ಮಾಡಲಾಗುತ್ತದೆ. ಸೇವೆಗಳ ವಿತರಣೆಯಲ್ಲಿ ಇರುವ ಸಾಧ್ಯತೆ ಹಾಗೂ ಸಂಕೀರ್ಣತೆಯ ಆಧಾರವಾಗಿ ಸೇವೆಗಳನ್ನು ಮೂರು ಹಂತಗಳಲ್ಲಿ ಅನುಷ್ಟಾನಗೊಳಿಸಲಾಗುವುದು.

  ಹಂತ 1: ಪ್ರಚುರಗೊಳಿಸುವಿಕೆ:-  ಒಂದು ವೃತ್ತಿಪರ ಹಾಗೂ ಪ್ರಭಾವಯುಕ್ತ ವೆಬ್ ಪ್ರಸ್ತುತತೆಯನ್ನು ಅಳವಡಿಸಿ ಕರ್ನಾಟಕ ರಾಜ್ಯದ ಸ್ವರೂಪವನ್ನು ಪ್ರೋತ್ಸಾಹ ನೀಡುವ ರಾಜ್ಯವೆಂದು ಹೆಚ್ಚಳಗೊಳಿಸಬೇಕಿರುತ್ತದೆ.

  ಹಂತ 2:- ಅತ್ಯವಶ್ಯ ವಹಿವಾಟು ಸೇವೆಗಳ ನಿರ್ಮಾಣ:-  ಈ ಹಂತದಲ್ಲಿ, ಸರಕಾರವು ಅತ್ಯವಶ್ಯ ಸೇವೆಗಳಿಗೆ ಕನಿಷ್ಠ ವಹಿವಾಟು ಒದಗಿಸಬಲ್ಲ ಸೇವೆಗಳನ್ನು ಕೈಗೆತ್ತಿಕೊಳ್ಳುವುದು ಅವಶ್ಯಕ.  ಇದಕ್ಕಾಗಿ ಸರಕಾರಿ ಇಲಾಖೆಗಳೊಂದಿಗೆ ನಾಗರೀಕರು ಸಂವಾದಿಸಲು ಅವಕಾಶ ಇರತಕ್ಕದ್ದು.  ಈ ಹಂತದಲ್ಲಿ ಹಂತ-1 ರಲ್ಲಿ ಅನುಷ್ಟಾನಗೊಳಿಸಿದ ಸೇವೆಗಳು ಎರಡನೇ ಹಂತಕ್ಕೆ ಉನ್ನತೀಕರಣಗೊಳ್ಳಬಹುದಾಗಿರುತ್ತದೆ.

  ಹಂತ 3:-  ಮೌಲ್ಯ ಸುಸ್ಥಿರತೆ:  ಈ ಹಂತದಲ್ಲಿ, ಸರಕಾರವು ವಹಿವಾಟು ಹಂತಕ್ಕೆ ಹೆಚ್ಚು ಹೆಚ್ಚು ಉಪಯುಕ್ತ ಸೇವೆಗಳನ್ನು ಸೇರಿಸುವುದರಿಂದ ನಾಗರೀಕರುಗಳಿಗೆ ಹೆಚ್ಚಿನ ಸೇವೆಗಳು ದೊರಕುತ್ತಿವೆ.

   
   
  ×
  ABOUT DULT ORGANISATIONAL STRUCTURE PROJECTS