ಇ-ಆಡಳಿತ ಕೇಂದ್ರ

  • Back
    ಕೆಪ್ಯಾಸಿಟಿ ಬಿಲ್ಡಿಂಗ್

    ಸಾಮರ್ಥ್ಯ ಸಂಘಟನೆ ಯೋಜನೆ

    ಸಾಧನೆಗಳು

    1. ವಿವಿಧ ಇಲಾಖೆಯ ಎಲ್ಲಾ ಗ್ರೂಪ್ ‘ಎ’ ಮತ್ತು ‘ಬಿ’ ಅಧಿಕಾರಿಗಳು ಮತ್ತು ಗ್ರೂಪ್ ‘ಸಿ’ ಉದ್ಯೋಗಿಗಳಿಗೆ 400 ಕ್ಕೂ ಹೆಚ್ಚು ಇ-ಆಡಳಿತ ಉಪಕ್ರಮಗಳ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
    2. ಇ-ಆಡಳಿತ ಉಪಕ್ರಮಗಳ ತರಬೇತಿ ಕಾರ್ಯಕ್ರಮಗಳಲ್ಲಿ 50,000 ಕ್ಕೂ ಹೆಚ್ಚು ನೌಕರರಿಗೆ ಪ್ರಯೋಜನ ಪಡೆದಿದ್ದಾರೆ.
    3. 60,000 ಕ್ಕಿಂತ ಹೆಚ್ಚು, ನೌಕರರು ಎಲ್ಲಾ ಜಿಲ್ಲಾ ತರಬೇತಿ ಸಂಸ್ಥೆಗಳು ಮತ್ತು ಆಡಳಿತ ತರಬೇತಿ ಸಂಸ್ಥೆ, ಮೈಸೂರು, ಇಲ್ಲಿ ಕನ್ನರ ನುಡಿ ಮತ್ತು ಯೂನಿಕೋಡ್ ತಂತ್ರಾಂಶದ ತರಬೇತಿಯಿಂದ ಪ್ರಯೋಜನ ಪಡೆದಿದ್ದಾರೆ.
    4. ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ 1,90,000 ಕ್ಕೂ ಹೆಚ್ಚು ಸರ್ಕಾರಿ ನೌಕರರು ಹಾಜರಾಗಿದ್ದು ಮತ್ತು 1,23,000 (ಅಂದಾಜು) ಅರ್ಹತೆ ಪಡೆದಿದ್ದಾರೆ.
    5. ಆನ್‌ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆಯಾದ 1,23,000 ಕ್ಕೂ ಹೆಚ್ಚು ಡಿಜಿಟಲ್ ಸಹಿ ಪ್ರಮಾಣಪತ್ರವನ್ನು ನೀಡಲಾಗಿದೆ.
    6. ಸಿಇಜಿ ತರಬೇತಿ ಕೇಂದ್ರದಲ್ಲಿ ಸುಮಾರು 3,000 ವೆಂಡರ್ಸ್‌ ರವರುಗಳಿಗೆ ಇ-ಪ್ರೊಕ್ಯೂರ್ಮೆಂಟ್ ತಂತ್ರಾಂಶದ ತರಬೇತಿಗಳನ್ನು ನಡೆಸಲಾಗಿದೆ.

    ಉದ್ದೇಶಗಳು

    ವಿಶಿಷ್ಟ ವಿಷಯಗಳ ವಿಶೇಷ ತರಬೇತಿಗಳ ಉದ್ಧೇಶವು ಇ-ಆಡಳಿತದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಇ-ಆಡಳಿತದ ವಿವಿಧ ಆಯಾಮಗಳಾದ ಯೋಜನೆಗಳ ರೂಪಿಸುವಿಕೆ, ತಾಂತ್ರಿಕತೆ, ಬಳಕೆ ಮತ್ತು ಪರಿಣಾಮಗಳ ಬಗ್ಗೆ ಎಚ್ಚರಿಸಿ ಕಾರ್ಯೋನ್ಮುಖರನ್ನಾಗಿ ಮಾಡುವುದು ಆಗಿರುತ್ತದೆ.  ಸರ್ಕಾರಿ ಇಲಾಖೆಗಳಲ್ಲಿನ ಆಯ್ದ ತಂಡಗಳನ್ನು ಸಜ್ಜುಗೊಳಿಸಿ ಇ-ಆಡಳಿತ ಯೋಜನೆಗಳಿಗೆ ಇಲಾಖೆಗಳನ್ನು ಪರಿವರ್ತಿಸುವುದು.  ಯೋಜನಾಧಿಕಾರಿಗಳಿಗೆ ನೂತನ ಯೋಜನೆಗಳು ಮತ್ತು ಮಾನವ ಸಂಪನ್ಮೂಲವನ್ನು ಪರಿವರ್ತಿಸುವ ತಂತ್ರಗಳಲ್ಲಿ ತರಬೇತಿಯನ್ನು ನೀಡುವುದರೊಂದಿಗೆ ಯೋಜನೆಗಳಿಗೆ ಬೆಂಬಲ.

    ವೈಶಿಷ್ಟ್ಯಗಳು

    1. ಸರ್ಕಾರಿ ನೌಕರರಿಗೆ ಮೂಲಭೂತ ಮಾಹಿತಿ ತಂತ್ರಜ್ಞಾನ ತರಬೇತಿ ಸಂಘಟಿಸಿ ಅವರಿಗೆ ಕಚೇರಿಯಲ್ಲಿ ತಂತ್ರಾಂಶಗಳ, ಅಂತರ್ಜಾಲ, ಮತ್ತು ಮಿಂಚಂಚೆಯ ಬಳಕೆಗೆ ಅನುಕೂಲಿಸುವುದು.
    2. ಯೋಜನೆಯ ಅನುಷ್ಠಾನದಲ್ಲಿ ಬೇಕಾಗುವ ವಿಷಯ ಮತ್ತು ಕುಶಲತೆಗಳನ್ನು ನೀಡುವುದು ಉದಾ: ಇ-ಆಡಳಿತ ಜೀವಚಕ್ರ, ಪ್ರಾಸೆಸ್ ರಿಇಂಜನೀಯರಿಂಗ್, ಪಿಪಿಪಿ ಮಾದರಿ, ಮಾಹಿತಿ ತಂತ್ರಜ್ಞಾನ ಅಧಿನಿಯಮ, ಕಾಂಟ್ರಾಕ್ಟ್ ಮ್ಯಾನೇಜ್ ಮೆಂಟ್ , ಯೋಜನಾ ವಿಸ್ತೃತ ವರದಿ, ಆರ್.ಎಫ್.ಪಿ., ಚೇಂಜ್ ಮ್ಯಾನೇಜ್ ಮೆಂಟ್ ಇತ್ಯಾದಿ.
    3. "ಎಂ.ಎಂ.ಪಿ" (ಮಿಷನ್ ಮೋಡ್ ಪ್ರಾಡಕ್ಟ್)  ಯೋಜನೆಗಳಿಗೆ ಅನುಷ್ಠಾನಕ್ಕೆ ಅನುವಾಗುವಂತೆ ವಿಶೇಷ ಇ-ಆಡಳಿತ ಸಾಮರ್ಥ್ಯ ಅಭಿವೃದ್ಧಿಗೆ ಬೇಕಾದ ಮಾಹಿತಿಗಳು.
    4.  ಸೌಜನ್ಯತ ಕೌಶಲ್ಯಗಳಾದ ತಂಡ ನಿರ್ಮಾಣ, ನಾಯಕತ್ವ, ಪರಿಣಾಮಕಾರಿ ಸಂವಹನ, ಇತ್ಯಾದಿಗಳಲ್ಲಿ ತರಬೇತಿ.
    5. ಸರ್ಕಾರಿ ಅಧಿಕಾರಿಗಳನ್ನು ವಿಶಿಷ್ಟ ತರಬೇತಿಗಳಾದ ಯೋಜನಾ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಭದ್ರತೆ ಮತ್ತು ಮಾಹಿತಿ ತಂತ್ರಜ್ಞಾನ ಆಡಿಟ್ ಇತ್ಯಾದಿಗಳನ್ನು ಅಭ್ಯಸಿಸಲು  ಪ್ರೋತ್ಸಾಹ.

     

    ಸೇವೆಗಳು

    1. ಸೀಡಾಕ್ ಮತ್ತು ಇತರೇ ಸಂಸ್ಥೆಗಳ ಸಹಯೋಗದೊಂದಿಗೆ ಅರ್ಧ ಮತ್ತು ಒಂದು ದಿನದ ಕಾರ್ಯಾಗಾರಗಳು.
    2. ಎನ್..ಎಸ್.ಜಿ ಸಂಸ್ಥೆಯ ಸಹಯೋಗದೊಂದಿಗೆ ವಿಶೇಷ ಇ-ಆಡಳಿತ ತರಬೇತಿ ಕಾರ್ಯಾಗಾರಗಳು.
    3. ಮೆಕಿಯೋನಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸರ್ಕಾರದ ಅಧಿಕಾರಿ / ಸಿಬ್ಬಂದಿಗಳಿಗೆ ಮೂಲ  ಗಣಕ ತರಬೇತಿ.      

    ಪ್ರಗತಿ

    1. ‘ಎನ್ ಐ ಎಸ್ ಜಿ ಸ್ಟೆಪ್’ – ಇ-ಅಡಳಿತ ಕೇಂದ್ರವು 23  ‘ಎನ್ ಐ ಎಸ್ ಜಿ ಸ್ಟೆಪ್’ ತರಬೇತಿಗಳನ್ನು ಸಂಘಟಿಸಿದ್ದು, 70 ಇಲಾಖೆಗಳ 305 ಅಧಿಕಾರಿಗಳಿಗೆ ತರಬೇತಿಯನ್ನು ಈವರೆಗೆ ನೀಡಲಾಗಿದೆ.
    2. ½ ದಿನ ಮತ್ತು 1 ದಿನದ ಕಾರ್ಯಾಗಾರಗಳು ಇ-ಆಡಳಿತ ಕೇಂದ್ರವು 11 ಕಾರ್ಯಾಗಾರಗಳನ್ನು ಸಂಘಟಿಸಿದ್ದು, ಇಲಾಖಾ ಮುಖ್ಯಸ್ಥರು, ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಸೇರಿದಂತೆ 102 ಇಲಾಖೆಗಳ 2000 ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ ವಿಶಿಷ್ಟ ವಿಷಯಗಳಲ್ಲಿ ತರಬೇತಿ ನೀಡಲಾಗಿದೆ.
    3. 1 ವಾರದ ‘ಮೂಲಗಣಕ ತರಬೇತಿ’ 22 ತರಬೇತಿಗಳನ್ನು ಸಂಘಟಿಸಿದ್ದು, 102 ಇಲಾಖೆಗಳ 2000 ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೂಲಗಣಕ ತರಬೇತಿ ನೀಡಲಾಗಿದೆ.
    4. ‘ಹೆಚ್.ಆರ್.ಎಂ.ಎಸ್ ತರಬೇತಿ’  ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾರ್ಯಾಗಾರಗಳನ್ನು ಸಂಘಟಿಸಿ 10,000 ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಜೊತೆಗೆ ಉಪಗ್ರಹದ ಮುಖಾಂತರೆ 30,000 ಸಾವಿರಕ್ಕೂ ಹಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ.
    5. ‘ಇ-ಸಂಗ್ರಹಣೆ ತರಬೇತಿ’  275 ರಾಜ್ಯ/ಕೇಂದ್ರ/ನಿಗಮ/ಇಲಾಖೆಗಳ 16,000ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಮತ್ತು 5,000 ಗುತ್ತಿಗೆದಾರರಿಗೆ ಇ-ಸಂಗ್ರಹಣಾ ತರಬೇತಿಯನ್ನು ನೀಡಲಾಗಿದೆ. ಈ ತರಬೇತಿಯು ಅವಿರತವಾಗಿ ಇ-ಆಡಳಿತ ಇಲಾಖೆಯಲ್ಲಿ ನಡೆಯುತ್ತಲೇ ಇರುತ್ತದೆ.
    6. ‘ಪ್ರಾದೇಶಿಕ ಕಾರ್ಯಾಗಾರಗಳು’ ಕಲಬುರ್ಗಿ, ಬೆಳಗಾವಿ, ಮಂಗಳೂರು ಮಹಾನಗರಗಳಲ್ಲಿ  ಪ್ರಾದೇಶಿಕ ಇ-ಆಡಳಿತ ಕಾರ್ಯಾಗಾರಗಳನ್ನು ನಡೆಸಲಾಗಿದೆ. 600ಕ್ಕು ಹೆಚ್ಚು ಅಧಿಕಾರಿಗಳು ಈ ತರಬೇತಿಯಲ್ಲಿ ಭಾಗವಹಿಸಿದ್ದಾರೆ.
    7. ಜನವರಿ 2016 ಮಾಹೆಯಲ್ಲಿ ದಿನಾಂಕ 18-01-2016 ರಿಂದ 30-01-2016ರ ವರೆಗೆ  ‘ಎನ್ ಐ ಎಸ್ ಜಿ ‘ ಸಂಸ್ಥೆಯ ಸಹಯೋಗದೊಂದಿಗೆ 18 ಪರಿಶಿಷ್ಟ ಜಾತಿ/ಟಿ ಎಸ್ ಪಿ ವರ್ಗದ ಅಧಿಕಾರಿಗಳಿಗೆ   ಇ- ಗವರ್ನೆನ್ಸ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ತರಬೇತಿಯನ್ನು ನೀಡಲಾಗಿದೆ.

     

    ×
    ABOUT DULT ORGANISATIONAL STRUCTURE PROJECTS